ಮಣಿಪಾಲ ಕಸ್ತೂರ್ಬಾ ಆಸ್ರತ್ರೆಯ ತಜ್ಞ ವೈದ್ಯ ಡಾ. ಶಿರನ್ ಶೆಟ್ಟಿ ಜಪಾನ್‌ನ ಒಸಾಕಾ ಕ್ಯಾನ್ಸರ್ ಕೇಂದ್ರದಲ್ಲಿ ಪ್ರತಿಷ್ಠಿತ ಸುಧಾರಿತ ಎಂಡೋಸ್ಕೋಪಿ ತರಬೇತಿ ಪೂರ್ಣಗೊಳಿಸಿದ್ದಾರೆ.

ಸುಧಾರಿತ ಎಂಡೋಸ್ಕೋಪಿ ತರಬೇತಿ ಪಡೆದ ಡಾ. ಶಿರಿನ್ ಶೆಟ್ಟಿ

ಮಣಿಪಾಲ: ವಿಶ್ವಪ್ರಸಿದ್ಧ ವಿಜ್ಞಾನಿ ಮತ್ತು ಜಪಾನಿನ ಎಂಡೋಸ್ಕೋಪಿಸ್ಟ್ ಪ್ರೊ. ನೊರಿಯೊ ಉಡಿಯೊ ಮಾರ್ಗದರ್ಶನದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ರತ್ರೆಯ ತಜ್ಞ ವೈದ್ಯ ಡಾ. ಶಿರನ್ ಶೆಟ್ಟಿ ಜಪಾನ್‌ನ ಒಸಾಕಾ ಕ್ಯಾನ್ಸರ್ ಕೇಂದ್ರದಲ್ಲಿ ಪ್ರತಿಷ್ಠಿತ ಸುಧಾರಿತ ಎಂಡೋಸ್ಕೋಪಿ ತರಬೇತಿ ಪೂರ್ಣಗೊಳಿಸಿದ್ದಾರೆ.ಈ ತರಬೇತಿ ಆರಂಭಿಕ ಕ್ಯಾನ್ಸರ್ ಪತ್ತೆ ಮತ್ತು ಕನಿಷ್ಠ ನೋವಿನ ಎಂಡೋಸ್ಕೋಪಿಕ್ ಚಿಕಿತ್ಸೆಯಲ್ಲಿ ಇತ್ತೀಚಿನ ತಂತ್ರಗಳ ಮೇಲೆ ಕೇಂದ್ರೀಕರಿಸಿದ್ದು, ಶಿರಿನ್ ಶೆಟ್ಟಿ ಈ ಕಾರ್ಯಾಗಾರದಲ್ಲಿ ಭಾಗವಹಿಸುವಿಕೆಯು ಕಸ್ತೂರ್ಬಾ ಆಸ್ಪತ್ರೆಯು ಭಾರತಕ್ಕೆ ಜಾಗತಿಕ ಗುಣಮಟ್ಟದ ಆರೈಕೆ ತರುವ ಬದ್ಧತೆಯ ಭಾಗವಾಗಿದೆ.ಈ ತರಬೇತಿಯಲ್ಲಿ ಡಾ. ಶೆಟ್ಟಿ ಮುಂದಿನ ಪೀಳಿಗೆಯ ಚಿತ್ರಣ ವರ್ಧಿತ ಎಂಡೋಸ್ಕೋಪಿ ಕರಗತ ಮಾಡಿಕೊಂಡಿದ್ದಾರೆ, ಇದು ಬಯಾಪ್ಸಿ ಇಲ್ಲದೆ ಕ್ಯಾನ್ಸರ್ ಸೇರಿದಂತೆ ಆರಂಭಿಕ ರೋಗ ಪತ್ತೆ ಹಚ್ಚುವಿಕೆಯನ್ನು ಗಮನಾರ್ಹ ಸುಧಾರಿತ ಪ್ರಗತಿಪರ ತಂತ್ರಜ್ಞಾನವಾಗಿದೆ. ಈ ಸುಧಾರಿತ ಚಿತ್ರಣವು ಕ್ಯಾನ್ಸರ್ ಗುಣಪಡಿಸಬಹುದಾದ ಹಂತದಲ್ಲಿ ಗುರುತಿಸಲು ವೈದ್ಯರಿಗೆ ಅನುವು ಮಾಡಿಕೊಡುತ್ತದೆ ಮತ್ತು ಚಿಕಿತ್ಸೆಯ ಫಲಿತಾಂಶವನ್ನು ಗಣನೀಯವಾಗಿ ಸುಧಾರಿಸುತ್ತದೆ. ಜಠರಗರುಳಿನ ಕ್ಯಾನ್ಸರ್‌ಗಳ ವಿರುದ್ಧದ ಹೋರಾಟದಲ್ಲಿ ಆರಂಭಿಕ ರೋಗನಿರ್ಣಯಕ್ಕೆ ಇದು ಅತ್ಯಂತ ಶಕ್ತಿಶಾಲಿ ಸಾಧನವಾಗಲಿದೆ ಮತ್ತು ಈ ತರಬೇತಿಯು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಧುನಿಕ ರೋಗನಿರ್ಣಯ ಸಾಮರ್ಥ್ಯ ಹೆಚ್ಚಿಸುತ್ತದೆ.

ಡಾ.ಶೆಟ್ಟಿ ಎಂಡೋಸ್ಕೋಪಿಕ್ ಸಬ್‌ಮ್ಯೂಕೋಸಲ್ ಡಿಸೆಕ್ಷನ್ (ಆಎಸ್‌ಡಿ) ನಲ್ಲಿ ವಿಶೇಷ ತರಬೇತಿ ಪಡೆದಿದ್ದು, ಇದು ತೆರೆದ ಶಸ್ತ್ರಚಿಕಿತ್ಸೆಯಿಲ್ಲದೆ ಆರಂಭಿಕ ಕ್ಯಾನ್ಸರ್‌ಗಳನ್ನು ತೆಗೆದುಹಾಕಲು ಬಳಸುವ ಅತ್ಯಾಧುನಿಕ, ಅಂಗ ಸಂರಕ್ಷಿಸುವ ತಂತ್ರವಾಗಿದೆ ಅಂದರೆ ಹೊಟ್ಟೆ ಅಥವಾ ಕರುಳಿನ ಅಂಗಾಂಶ ತೆಗೆದುಹಾಕದೆ, ರೋಗಿ ವೇಗವಾಗಿ ಚೇತರಿಸಿಕೊಳ್ಳುವ ಚಿಕಿತ್ಸೆ ನೀಡುತ್ತದೆ.

ಈ ಪರಿಣತಿಯೊಂದಿಗೆ, ಡಾ. ಶೆಟ್ಟಿ ದೇಶಾದ್ಯಂತ ಕೆಲವೇ ಕೇಂದ್ರಗಳಲ್ಲಿ ಲಭ್ಯವಿರುವ ಅಸಾಧಾರಣ ಕೌಶಲ್ಯಗಳನ್ನು ಮಣಿಪಾಲಕ್ಕೆ ತಂದಿದ್ದಾರೆ. ಮುಖ್ಯವಾಗಿ ರೋಗಿಗಳು ಆರ್ಥಿಕ ಹೊರೆಯಿಲ್ಲದೆ ಈ ವಿಶ್ವ ದರ್ಜೆ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದವರು ಹೇಳಿದ್ದಾರೆ.