ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆ ಯಾವ ಕ್ಷಣದಲ್ಲಿ ಬೇಕಾದರೂ ಘೋಷಣೆಯಾಗಬಹುದು. ಅಭ್ಯರ್ಥಿ ಬಗ್ಗೆ ತಲೆಕಡೆಸಿಕೊಳ್ಳಬೇಡಿ. ನಾನು ಏನು ತೀರ್ಮಾನ ಮಾಡುತ್ತೀನೋ ಅದಕ್ಕೆ ಎಲ್ಲ ಕಾರ್ಯಕರ್ತರು ಒಪ್ಪಿಗೆ ನೀಡಬೇಕು. ನಿಮ್ಮ ಆರ್ಶಿವಾದ ಇರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನವರು ಕ್ಷೇತ್ರದ ಜನರಿಗೆ ನಿವೇಶನ ನೀಡುವ, ಇನ್ನಿತರ ಭರವಸೆ ನೀಡುತ್ತಿದ್ದಾರೆ. ಅಷ್ಟರಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಆಮೇಲೆ ಇಲ್ಲಿಂದ ಹೊರಡುತ್ತಾರೆ. ಇದನ್ನು ನಂಬಬೇಡಿ, ಯೋಚಿಸಿ ತೀರ್ಮಾನ ಮಾಡಿ ಎಂದರು.ನಿಮಗೆ ಅನ್ಯಾಯ ಮಾಡಿಲ್ಲ: ನಿಖಿಲ್‌ಗೆ ನಾನು ಗಿಳಿಗೆ ಹೇಳಿದ ಹಾಗೆ ಹೇಳಿದೆ. ಮಂಡ್ಯ ಜನರು ನಿನ್ನನ್ನ ಸೋಲಿಸಲಿಲ್ಲ, ಕುತಂತ್ರಿಗಳಿಂದ ಸೋತಿದ್ದಿ. ಮತ್ತೆ ನಿಂತುಕೋ ಅಂದೆ. ಆದರೆ ನಿಖಿಲ್ ಮತ್ತೆ ಮಂಡ್ಯಕ್ಕೆ ಹೋಗಲಿಲ್ಲ. ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾನು ಹೋಗಿ ಮಂಡ್ಯದಲ್ಲಿ ಚುನಾವಣೆಗೆ ನಿಂತೆ. ಮಂಡ್ಯ ಜನ ನನ್ನನ್ನ ಗೆಲ್ಲಿಸಿದರು. ನಾನು ಮಂಡ್ಯಕ್ಕೆ ಹೋಗಿರೋದಕ್ಕೆ ನಿಮಗೆ ಬೇಸರ ಇರಬಹುದು. ನಿಮಗೆ ಅನ್ಯಾಯ ಮಾಡಿ ನಾನು ಮಂಡ್ಯಕ್ಕೆ ಹೋಗಿಲ್ಲ ಎಂದರು. ನಾಗಮಂಗಲದಲ್ಲಿ ಗಣೇಶನ ಮೂರ್ತಿ ವಿಸರ್ಜನೆ ವೇಳೆ ಆದ ಗಲಾಟೆಯಲ್ಲಿ ಹಾನಿಗೊಳಗಾದ ಮುಸಲ್ಮಾನರಿಗೆ ನಾನು ಹೆಚ್ಚು ಸಹಕಾರ ನೀಡಿದೆ. ಎಲ್ಲರನ್ನು ಸಮಾನವಾಗಿ ಕಂಡೆ. ಆದರೆ, ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸುಮಾರು 20,000 ಮತ ನೀಡಿದರು ಎಂದರು.ನನ್ನ ಅವಧಿಯಲ್ಲಿ ರೈತರ ₹25,000 ಕೋಟಿ ಸಾಲ ಮನ್ನಾ ಮಾಡಿದೆ. ನಾನು ರೈತರಿಗೋಸ್ಕರ ಬದುಕಿದವನು. ನಾನು ದೇವರಿಗೆ ಹೆದರುತ್ತೇನೆ. ಇವರ ಅಧಿಕಾರದ ದರ್ಪ ಹಣಕ್ಕೆ ಹೆದರುವುದಿಲ್ಲ. ಇಂಥವರು ನೂರು ಜನ ಬಂದರು ಹೆದರುವುದಿಲ್ಲ ಎಂದರು. ದೇವೇಗೌಡರ ಹೋರಾಟಕ್ಕೆ ಚನ್ನಪಟ್ಟಣ ರೈತರು ಜೊತೆ ನಿಂತಿದ್ದರು. ವಿಠ್ಠಲೇನಹಳ್ಳಿಯಲ್ಲಿ ಗೋಲಿಬಾರ್ ಆಯ್ತು. ಆ ಗೋಲಿಬಾರ್‌ನಲ್ಲಿ ಇಬ್ಬರು ರೈತರು ಬಲಿಯಾದರು. ಆಗ ದೇವೇಗೌಡರು ಬಂದು ಪಾದಯಾತ್ರೆ ಮಾಡಿ ಅವರಿಗೆ ಪರಿಹಾರ ಕೊಡಿಸಿದರು. ಆದರೆ ಅದನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ಪಾಪ ಈಗ ಅಣ್ಣ, ತಮ್ಮಂದಿರು ಕ್ಷೇತ್ರಕ್ಕೆ ಬಂದು ಓಡಾಡುತ್ತಿದ್ದಾರೆ. ಬಹಳ ಕೆಲಸ ಮಾಡಿದ್ದೇವೆ ಎಂದು ನಾಟಕ ಮಾಡಿಕೊಂಡು ಬರುತ್ತಾರೆ ಎಂದು ವ್ಯಂಗ್ಯವಾಡಿದರು. ನನ್ನನ್ನು ಭಯಪಡಿಸಲು ಆಗಲ್ಲ: ರಾಜಕೀಯ ಎಂಬುದು ಶಾಶ್ವತವಲ್ಲ. ಹುಟ್ಟಿದ ಮೇಲೆ ನಮ್ಮ ಕುರಿತು ಒಳ್ಳೆಯ ಮಾತುಗಳನ್ನು ಜನ ಆಡಬೇಕು. ಆ ನಿಟ್ಟಿನಲ್ಲಿ ನಮ್ಮ ನಡುವಳಿಕೆ ಇರಬೇಕು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಾರಸ್ವಾಮಿಗೆ ನನ್ನ ಬಗ್ಗೆ ಭಯ ಇದೆ ಎನ್ನುತ್ತಾರೆ. ಅದಕ್ಕೆ ನಾನು ನಿಮ್ಮಂಥ ಎಷ್ಟು ಮುಖ್ಯಮಂತ್ರಿಗಳು ಬಂದರೂ ನನ್ನನ್ನು ಭಯ ಪಡಿಸಲು ಆಗಲ್ಲ ಎಂದಿದ್ದೇನೆ ಎಂದರು.ಒಂದೊಂದು ವಾರ್ಡ್‌ಗೆ ಒಂದೊಂದು ಕೋಟಿ ರು. ಕೊಟ್ಟಿದ್ದಾರೆ: ಎಚ್‌ಡಿಕೆಚನ್ನಪಟ್ಟಣದಲ್ಲಿ ಕಾರ್ಪೊರೇಟ್‌ಗಳನ್ನ ಖರೀದಿ ಮಾಡಿದ್ದಾರೆ. ಒಂದೊಂದು ವಾರ್ಡ್‌ಗೆ ಒಂದೊಂದು ಕೋಟಿಯಂತೆ 30 ಕೋಟಿ ರು. ಕೊಟ್ಟಿದ್ದಾರಂತೆ. ನನ್ನ ಕಾಲದಲ್ಲಿ ₹96 ಕೋಟಿ ಯುಜಿಡಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಿದ್ದೆ. ಇದಕ್ಕೆ ಟೆಂಡರ್ ಆಗಿ ಎಲ್ಲಾ ಆಗಿದೆ. ಆದರೆ ಇವತ್ತಿನವರೆಗೆ ಕೆಲಸ ಆಗಿಲ್ಲ. ಅಲ್ಲಿಯ ಎಂಜಿನಿಯರ್‌ಗಳು, ಕಂಟ್ರಾಕ್ಟರ್‌ಗಳು ಶಿವಕುಮಾರ್ ಅವರನ್ನು ಹೋಗಿ ನೋಡಿಕೊಂಡು ಬನ್ನಿ ಅಂತಾರೆ. ಅದರಲ್ಲಿ ಪರ್ಸಂಟೆಜ್ ಪಡೆಯಬೇಕಲ್ಲ ಅದಕ್ಕೆ ಹೀಗೆ ಮಾಡುತ್ತಿದ್ದಾರೆ. ಈ ಮಹಾನುಭವ ಬೆಂಗಳೂರಿನಲ್ಲಿ ಮನೆ ಕಟ್ಟಲು ಒಂದು ಚದುರಕ್ಕೆ ಇಷ್ಟು ದುಡ್ಡು ಅಂತ ಫಿಕ್ಸ್ ಮಾಡಿದ್ದಾರೆ. ಆ ರೀತಿ ದುಡ್ಡು ಮಾಡಿದ್ರೆ ಒಂದೊಂದು ಕುಟುಂಬಕ್ಕೆ ಚುನಾವಣೆಗೆಯಲಿ ಒಂದು ಕೋಟಿ ರು.ಬೇಕಾದರೂ ನೀಡಬಹುದು. ದಯಮಾಡಿ ನೀವು ಯೋಜನೆ ಮಾಡಿ. ನಾನು ಯಾವ ರೀತಿ ರಾಜಕೀಯ, ಕೆಲಸ ಮಾಡಿದ್ದೀನಿ ನೋಡಿ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದರು.