ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಕೆಟಿಜೆ ನಗರದ ಕೆ.ಎಲ್.ರಾಕೇಶ್ ಹಾಗೂ ಶ್ರೀರಾಮ ಬಡಾವಣೆಯ ಖಾಜಾ ಮೋಹಿದ್ದೀನ್ ಸಾಹಿಲ್ ಎಂಬವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ₹60 ಸಾವಿರ ಮೌಲ್ಯದ ಗಾಂಜಾ ವಶಪಡಿಕ್ಕೆ ಪಡೆದಿದ್ದಾರೆ.

ದಾವಣಗೆರೆ: ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಕೆಟಿಜೆ ನಗರದ ಕೆ.ಎಲ್.ರಾಕೇಶ್ ಹಾಗೂ ಶ್ರೀರಾಮ ಬಡಾವಣೆಯ ಖಾಜಾ ಮೋಹಿದ್ದೀನ್ ಸಾಹಿಲ್ ಎಂಬವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ₹60 ಸಾವಿರ ಮೌಲ್ಯದ ಗಾಂಜಾ ವಶಪಡಿಕ್ಕೆ ಪಡೆದಿದ್ದಾರೆ.

ಹೊಸ ವರ್ಷ ದಿನದಂದು ಕೆಟಿಜೆ ನಗರ ಠಾಣಾ ವ್ಯಾಪ್ತಿಯ ಸರಸ್ವತಿ ನಗರದ ಟ್ಯಾಂಕ್ ಪಾರ್ಕ್ ಒಳಗಡೆ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿದ್ದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಪೊಲೀಸರು ದಾಳಿ ನಡೆಸಿದರು.

ಆರೋಪಿಗಳನ್ನು ವಿಚಾರಣೆ ಮಾಡಿದಾಗ ಸುಮಾರು 1165 ಗ್ರಾಂ ಗಾಂಜಾ ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಗಾಂಜಾದ ಮೌಲ್ಯ ₹60 ಸಾವಿರ, 2 ಚಂದ್ರಾಕೃತಿಯ ಕಬ್ಬಿಣದ ಮಚ್ಚುಗಳು, ₹1500 ನಗದು ಇನ್ನಿತರೆ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಉಪವಿಭಾಗದ ಡಿವೈಎಸ್‌ಪಿ ಬಿ.ಶರಣಬಸವೇಶ್ವರ ನೇತೃತ್ವದಲ್ಲಿ ಕೆಟಿಜೆ ನಗರ ಪಿಐ ಎಚ್.ಎಸ್.ಸುನೀಲ್ ಕುಮಾರ್, ಪಿಎಸ್‌ಐ ಲತಾ, ಸಿಬ್ಬಂದಿ ಸುರೇಶ್ ಬಾಬು, ಮಂಜನಗೌಡ, ಮಹಮ್ಮದ್ ರಫಿ, ನಾಗರಾಜ, ಮಂಜಪ್ಪ, ಸಿದ್ದಪ್ಪ ರವಿನಾಯ್ಕ, ಅಂಬರೀಶ್, ವಸಂತ ಸಿಬ್ಬಂದಿ ತಂಡ ದಾಳಿ ನಡೆಸಿತ್ತು. ಈ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-5ಕೆಡಿವಿಜಿ32, 33: