ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹ ಅಗತ್ಯ: ಶ್ರೀಕಾಂತ ಗುರುರಂಜನ್

| Published : Jun 29 2024, 12:38 AM IST

ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹ ಅಗತ್ಯ: ಶ್ರೀಕಾಂತ ಗುರುರಂಜನ್
Share this Article
  • FB
  • TW
  • Linkdin
  • Email

ಸಾರಾಂಶ

ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಂಡವಾಳ ಹೂಡಿಕೆಯ ಜಾಗೃತಿ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮೆಥ ಎಕ್ಸಲೆನ್ಸ್ ಅಕಾಡೆಮಿಯ ಹಿರಿಯ ವೃತ್ತಿಪರ ತಜ್ಞ ಶ್ರೀಕಾಂತ ಗುರುರಂಜನ್ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉದ್ದೇಶಿತ ಗುರಿ ತಲುಪಲು ಬಂಡವಾಳ ಹೂಡಿಕೆ ಮುಖ್ಯ, ಮಾನವ ಸಂಪನ್ಮೂಲ ಹಾಗೂ ಬಂಡವಾಳ ರಚನೆಯೊಂದಿಗೆ ನಿವ್ಹಳ ಮತ್ತು ಸ್ಥಿರ ಬಂಡವಾಳ ನಿರ್ಮಾಣ ಸಾಧ್ಯವಾಗುವುದರಿಂದ ಬಂಡವಾಳ ಪ್ರೋತ್ಸಾಹ, ಸೂಕ್ತ ಮಾರ್ಗದರ್ಶನ ನೀಡುವ ವಿಶೇಷ ವ್ಯವಸ್ಥೆಯನ್ನು ರಾಜ್ಯ ರೂಪಿಸಬೇಕಾಗಿದೆ ಎಂದು ಮೆಥ ಎಕ್ಸಲೆನ್ಸ್ ಅಕಾಡೆಮಿಯ ಹಿರಿಯ ವೃತ್ತಿಪರ ತಜ್ಞ ಶ್ರೀಕಾಂತ ಗುರುರಂಜನ್ ಹೇಳಿದರು.

ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ ಬಿಬಿಎ ವಿಭಾಗ ಐಕ್ಯೂಎಸಿ ಅಡಿಯಲ್ಲಿ ಬಂಡವಾಳ ಹೂಡಿಕೆಯ ಜಾಗೃತಿ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಬಂಡವಾಳ ಆಕರ್ಷಿಸಲು ಸರ್ಕಾರ ವಿಶೇಷ ಆರ್ಥಿಕ ನೀತಿ ಮತ್ತು ಪ್ರೋತ್ಸಾಹದಾಯಕ ಕೊಡುಗೆಗಳನ್ನು ನೀಡುತ್ತಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಹಾಗೂ ಆರ್ಥಿಕ ಮೂಲಸೌಕರ್ಯಗಳಿಗೆ ಒತ್ತು ನೀಡುವ ಬಂಡವಾಳ ಹೂಡಿಕೆಗಳಿಗೆ ವಿಶೇಷ ಸವಲತ್ತು ನೀಡುತ್ತದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಬಂಡವಾಳ ಆಕರ್ಷಿಸಿದ್ದು, ದೇಶದ ರಫ್ತು ಮತ್ತು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಸಾಕಷ್ಟು ಕೊಡುಗೆ ನೀಡಿವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಅವರು ಬಂಡವಾಳ ಹೂಡಿಕೆಯ ಬಗ್ಗೆ ತಿಳಿಸಿದರು, ಬಿಬಿಎ ವಿಭಾಗದ ಸಂಯೋಜಕ ಡಾ.ಎಂ.ನಂಜುಂಡಸ್ವಾಮಿ ಹಾಗೂ ಐ.ಕ್ಯೂ.ಎ.ಸಿ ಸಂಯೋಜಕಿ ಗಿರಿಜಾ ಎಂ. ನಾವದಗಿ ಉಪಸ್ಥಿತರಿದ್ದರು .

ಬಿಬಿಎ ವಿಭಾಗದ ಮುಖ್ಯಸ್ಥೆ ನಂದಿನಿ ದೊಡ್ಡಮನಿ ಸ್ವಾಗತಿಸಿ, ಪರಿಚಯಿಸಿದರು. ವೈಷ್ಣವಿ ಹಂದ್ರಾಳ ವಂದಿಸಿದರು. ಶೀತಲ್ ಬಾರ್ಶಿ ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.