ಕಾರು ಹೆದ್ದಾರಿ ತಂತಿಗೋಡೆಗೆ ಡಿಕ್ಕಿ, ಪತ್ನಿಗೆ ತೀವ್ರ ಗಾಯ, ಪತಿ, ಮಗು ಪಾರು

| Published : Jun 14 2025, 05:15 AM IST

ಕಾರು ಹೆದ್ದಾರಿ ತಂತಿಗೋಡೆಗೆ ಡಿಕ್ಕಿ, ಪತ್ನಿಗೆ ತೀವ್ರ ಗಾಯ, ಪತಿ, ಮಗು ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಗಿರಿನಗರದ ರಕ್ಷಾ ನಿತಿನ್ (28) ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಕೆಯ ಪತಿ ಎನ್.ನಿತಿನ್ ಪರಿತಾರ್ ಹಾಗೂ ಇವರ ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಮದ್ದೂರು: ಕಾರು ಹೆದ್ದಾರಿ ತಂತಿಗೋಡೆಗೆ ಡಿಕ್ಕಿಯಾಗಿ ಉರುಳಿ ಬಿದ್ದ ಪರಿಣಾಮ ಪತ್ನಿ ತೀವ್ರವಾಗಿ ಗಾಯಗೊಂಡು ಪತಿ ಮತ್ತು ಮಗು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಬೆಂಗಳೂರು ಗಿರಿನಗರದ ರಕ್ಷಾ ನಿತಿನ್ (28) ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಕೆಯ ಪತಿ ಎನ್.ನಿತಿನ್ ಪರಿತಾರ್ ಹಾಗೂ ಇವರ ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ವಕೀಲ ವೃತ್ತಿ ಮಾಡುತ್ತಿರುವ ರಕ್ಷಾ ಪತಿ ಮತ್ತು ಮಗುವಿನ ಜೊತೆ ತಮ್ಮ ಹುಂಡೈ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ಪ್ರವಾಸಕ್ಕೆ ತೆರಳುತ್ತಿದ್ದರು. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೆಜ್ಜಲಗೆರೆ ಸಮೀಪದ ಕಾಫಿ ಡೇ ಬಳಿ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ತಂತಿಬೇಲಿ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪಿಎಸ್ ಐ ರಾಮಸ್ವಾಮಿ ಹಾಗೂ ಸಿಬ್ಬಂದಿ ಸಾರ್ವಜನಿಕರ ನೆರವಿನಿಂದ ಕಾರಿನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.