ಜಿಲ್ಲೆಯಲ್ಲಿ ಸಿಎಆರ್‌, ಡಿಎಆರ್ ನೇಮಕಾತಿ ಪರೀಕ್ಷೆ ಸಂಪನ್ನ

| Published : Jan 29 2024, 01:31 AM IST

ಸಾರಾಂಶ

ನಗರದ 40 ಪರೀಕ್ಷಾ ಕೇಂದ್ರಗಳಲ್ಲಿ ಎಪಿಸಿ(ಸಿಎಆರ್-ಡಿಎಆರ್‌) ನೇಮಕಾತಿ ಸಂಬಂಧಿಸಿದ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 9689 ಅಭ್ಯರ್ಥಿಗಳು ಸೂಚನೆಯಂತೆ ಆಯಾ ಪರೀಕ್ಷಾ ಕೇಂದ್ರಗಳ ಬಳಿ, ಸೂಚನೆಯಂತೆ ಹಾಜರಾಗಿದ್ದರು. ಎಲ್ಲಾ ಕೇಂದ್ರಗಳಲ್ಲೂ ಕಟ್ಟುನಿಟ್ಟಾಗಿ ಯಾವುದೇ ಲೋಪದೋಷ ಇಲ್ಲದಂತೆ ಸುವ್ಯವಸ್ಥಿತವಾಗಿ ಲಿಖಿತ ಪರೀಕ್ಷಾ ನಡೆದವು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಶಸ್ತ್ರ ಪೊಲೀಸ್ ಕಾನ್ಸಟೇಬಲ್(ಸಿಎಆರ್‌-ಡಿಎಆರ್) 3064 ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಳು ನಗರದ 40 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ವ್ಯವಸ್ಥಿತವಾಗಿ ನಡೆದಿದ್ದು, ಒಟ್ಟು 15 ಸಾವಿರ ಪರೀಕ್ಷಾರ್ಥಿಗಳ ಪೈಕಿ 9689 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರೆ, 5311 ಅಭ್ಯರ್ಥಿಗಳು ಗೈರಾಗಿದ್ದಾರೆ.

ನಗರದ 40 ಪರೀಕ್ಷಾ ಕೇಂದ್ರಗಳಲ್ಲಿ ಎಪಿಸಿ(ಸಿಎಆರ್-ಡಿಎಆರ್‌) ನೇಮಕಾತಿ ಸಂಬಂಧಿಸಿದ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 9689 ಅಭ್ಯರ್ಥಿಗಳು ಸೂಚನೆಯಂತೆ ಆಯಾ ಪರೀಕ್ಷಾ ಕೇಂದ್ರಗಳ ಬಳಿ, ಸೂಚನೆಯಂತೆ ಹಾಜರಾಗಿದ್ದರು. ಎಲ್ಲಾ ಕೇಂದ್ರಗಳಲ್ಲೂ ಕಟ್ಟುನಿಟ್ಟಾಗಿ ಯಾವುದೇ ಲೋಪದೋಷ ಇಲ್ಲದಂತೆ ಸುವ್ಯವಸ್ಥಿತವಾಗಿ ಲಿಖಿತ ಪರೀಕ್ಷಾ ನಡೆದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಸಂತೋಷ್‌ ಹಾಗೂ ಜಿ.ಮಂಜುನಾಥ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಎಪಿಸಿ(ಸಿಎಆರ್‌-ಡಿಎಆರ್‌) ನೇಮಕಾತಿ ಲಿಖಿತ ಪರೀಕ್ಷೆ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷಾ ಅವ್ಯವಹಾರ ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು.

ಎಲ್ಲಾ 40 ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಿಸಲಾಗಿತ್ತು. ಪರೀಕ್ಷೆಗಳು ಸುಗಮವಾಗಿ ನಡೆಯಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರ ನಡೆಯದಂತೆ ಎಲ್ಲಾ ಅಗತ್ಯ ಮುನ್ನಚ್ಚರಿಕೆ ಜೊತೆಗೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಲಾಗಿತ್ತು.

.........