ಪಾವಗಡ: ಪಟ್ಟಣದ ಪ್ರಸಿದ್ಧ ಶ್ರೀ ಶನಿಮಹಾತ್ಮಸ್ವಾಮಿ ದೇವಸ್ಥಾನದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಜಗನ್ನಾಥ್
(50) ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಚನ್ನಗಿರಿ ಬಳಿ ನಡೆದಿದೆ. ಕುಟುಂಬ ಸಮೇತ ಮೇ 19ರಂದು ಪಾವಗಡದಿಂದ ಶಿವಮೊಗ್ಗ ಕಡೆ ಪ್ರವಾಸ ತೆರಳಿದ್ದರು. ಚನ್ನಗಿರಿ ಪಟ್ಟಣದ ಸಮೀಪ ಇವರು ಪ್ರಯಾಣಿಸುತ್ತಿದ್ದ ಎರ್ಟಿಗಾ ಕಾರು ಟೈರ್ ಪಂಚರ್ ಆಗಿ ಮರಕ್ಕೆ ಗುದ್ದಿದ ಪರಿಣಾಮ ಈ ಅವಘಡ ಜರುಗಿದೆ. ಅಪಘಾತದಲ್ಲಿ ಜಗನ್ನಾಥ್ ಅವರ ಅತ್ತೆ, ಪತ್ನಿ, ಮಗಳು ಹಾಗೂ ವಾಹನ ಚಾಲಕ ರಘು ಆವರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಎಚ್.ವಿ.ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ತಿಮ್ಮರಾಯಪ್ಪ, ಶ್ರೀ ಶನಿಮಹಾತ್ಮ ದೇವಸ್ಥಾನದ ಸಮಿತಿ ಅಧ್ಯಕ್ಷ ಜಿ.ಎಸ್. ಅನಿಲ್ ಕುಮಾರ್, ಜಿ.ಎಸ್.ಸುದೇಶ್ ಬಾಬು, ವಕೀಲ ವೆಂಕಟರಾಮರೆಡ್ಡಿ, ಪುರಸಭೆ ಮಾಜಿ ಸದಸ್ಯ ವೆಂಕಟರಮಣಪ್ಪ, ಅನಿಲ್ ಕುಮಾರ್, ಶ್ರೀರಾಮಗುಪ್ತ, ದೇವಸ್ಥಾನದ ಅರ್ಚಕ ಮನೋಹರ್ ಶಾಸ್ತ್ರಿ, ಎಸ್.ಎಸ್. ಕೆ ಸಂಘದಸಿಇಒ ಮಂಜುನಾಥ್, ದೇವಸ್ಥಾನದ ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟೇಶ್, ಸುಧಾಕರ್, ರಮೇಶ್, ಪನೀಂದ್ರ ನಾಗರಾಜ್,
ಮತ್ತಿತರರು ಕಂಬನಿ ಮಿಡದಿದ್ದಾರೆ.