ಸಾರಾಂಶ
ಹನೂರಿನ ಮಹದೇಶ್ವರ ಬೆಟ್ಟಕ್ಕೆ ತೆರುಳುತ್ತಿದ್ದ ಕಾರೊಂದು ಆನೆ ಕಂದಕಕ್ಕೆ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಎಲ್ಲೇಮಾಳ ಸಮೀಪ ನಡೆದಿದೆ.
ಕನ್ನಡಪ್ರಭ ವಾರ್ತೆ ಹನೂರು
ಮಹದೇಶ್ವರ ಬೆಟ್ಟಕ್ಕೆ ತೆರುಳುತ್ತಿದ್ದ ಕಾರೊಂದು ಆನೆ ಕಂದಕಕ್ಕೆ ಪಲ್ಟಿ ಹೊಡೆದ ಪರಿಣಾಮ ಚಾಲಕನಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಎಲ್ಲೇಮಾಳ ಸಮೀಪ ನಡೆದಿದೆ.ಮೈಸೂರಿನ ಹಿನಕಲ್ ನಿವಾಸಿ ಮೂರ್ತಿ (25) ಎಂಬಾತ ಕಾರಿನಲ್ಲಿ ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ನಿಯಂತ್ರಣ ತಪ್ಪಿ ಎಲ್ಲೇಮಾಳ ಸಮೀಪ ಅರಣ್ಯದಂಚಿನ ಆನೆ ಕಂದಕಕ್ಕೆ ಕಾರು ಉರುಳಿದೆ. ಕಾರು ಉರುಳಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂರ್ತಿ ಎಂಬವರಿಗೆ ಪೆಟ್ಟಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಘಟನೆಗೆ ಏನು ಕಾರಣ?:
ಎಲ್ಲೇಮಾಳ ರಸ್ತೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ದಿನನಿತ್ಯ ನೂರಾರು ವಾಹನಗಳು ದ್ವಿಚಕ್ರ ವಾಹನ ಸವಾರರು ತೆರಳುತ್ತಾರೆ. ಈ ಮಾರ್ಗದಲ್ಲಿ ತೆರಳುವ ವೇಳೆ ಹಲವಾರು ವಾಹನಗಳು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿರುವ ಘಟನೆಗಳು ನಡೆದಿವೆ. ಆದರೂ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ತಿರುವುಗಳ ಸಮೀಪ ಯಾವುದೇ ಎಚ್ಚರಿಕೆಯ ನಾಮಫಲಕಗಳಾಗಲಿ ಅಥವಾ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದಾಗಲಿ ಯಾವುದೇ ಮಾಡದೇ ಇರುವುದು. ಜೊತೆಗೆ ಈ ರಸ್ತೆಯಲ್ಲಿ ಸಿಗುವ ಕಿರು ಸೇತುವೆಗಳ ಕಾಮಗಾರಿಯನ್ನು ಸಹ ಅಪೂರ್ಣಗೊಳಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕಿರು ಸೇತುವೆಗಳನ್ನು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ, ಈ ಭಾಗದಲ್ಲಿ ಸಂಚರಿಸುವ ನಾಗರಿಕರಿಗೆ ಮತ್ತು ಪ್ರಯಾಣಿಕರಿಗೆ ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ನಾಗರಿಕರು ಅಗ್ರಹಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))