ದಾಬಸ್‍ಪೇಟೆ: ಬರ್ತಡೆ ಪಾರ್ಟಿ ಮಾಡಿ ಮುಗಿಸಿ ಕಾರಿನಲ್ಲಿ ಬರುವಾಗ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಂಪುರ ಹೋಬಳಿ ಕಂಬಾಳು ಗ್ರಾಮದ ಸಮೀಪ ಸಂಭವಿಸಿದೆ

ದಾಬಸ್‍ಪೇಟೆ: ಬರ್ತಡೆ ಪಾರ್ಟಿ ಮಾಡಿ ಮುಗಿಸಿ ಕಾರಿನಲ್ಲಿ ಬರುವಾಗ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಂಪುರ ಹೋಬಳಿ ಕಂಬಾಳು ಗ್ರಾಮದ ಸಮೀಪ ಸಂಭವಿಸಿದೆ.

ಹೊನ್ನೇನಹಳ್ಳಿ ಗ್ರಾಮದ ದಿಲೀಪ್ ಅಲಿಯಾಸ್ ಪವನ್(23), ದಾಬಸ್‍ಪೇಟೆ ವಾಸಿ, ಕುಂದಾಪುರ ಮೂಲದ ನಿತೀಶ್(26) ಸ್ಥಳದಲ್ಲೇ ಮೃತಪಟ್ಟ ಯುವಕರು. ಕೆ.ಜಿ.ಶ್ರೀನಿವಾಸಪುರದ ಅರುಣ್ ಕುಮಾರ್(25), ತ್ಯಾಮಗೊಂಡ್ಲು ಹೋಬಳಿಯ ಕೆಂಪಾಪುರ ಅಗ್ರಹಾರದ ಸಂದೀಪ್‌ಗೌಡ(25), ಬೀದನಪಾಳ್ಯದ ಮಂಜುನಾಥ್(26) ಗಂಭೀರವಾಗಿ ಗಾಯಗೊಂಡವರು.

ಘಟನಾ ವಿವರ: ಕೆ.ಜಿ.ಶ್ರೀನಿವಾಸಪುರದ ಅರುಣ್ ಕುಮಾರ್ ಬರ್ತಡೇ ಪಾರ್ಟಿಗೆ ಹೋಗಿ ಐವರು ಸ್ನೇಹಿತರು ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿಯ ಡಾಬಾದಲ್ಲಿ ಊಟ ಮಾಡಿಕೊಂಡು ದಾಬಸ್‍ಪೇಟೆಗೆ ಬರುವಾಗ ರಾತ್ರಿ ಕಂಬಾಳು ಕೆರೆಯ ಏರಿಯ ಮೇಲೆ ಥಾರ್ ಕಾರು ನಿಯಂತ್ರಣ ತಪ್ಪಿ ಏರಿ ಕೆಳಗಿನ ಹಳ್ಳಕ್ಕೆ ಬಿದ್ದು ಸುಮಾರು 12 ಸಲ ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೂವರಿಗೆ ಗಂಭೀರ ಗಾಯ:

ಕಾರು ಚಾಲನೆ ಮಾಡುತ್ತಿದ್ದ ದಿಲೀಪ್‌ ಹಾಗೂ ಹಿಂಬದಿ ಕುಳಿತಿದ್ದ ನಿತೀಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುನಾಥ್, ಸಂದೀಪ್, ಅರುಣ ಗಂಭೀರ ಗಾಯಗಳಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿಲೀಪ್ ಕಳೆದ ಐದು ತಿಂಗಳ ಹಿಂದೆ ಹೊಸ ಥಾರ್ ಖರೀದಿಸಿದ್ದ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳೀಯ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು.

ಕುಟುಂಬಸ್ಥರ ಆಕ್ರಂದನ: ಅಪಘಾತದಲ್ಲಿ ಮೃತಪಟ್ಟ ದಿಲೀಪ್ ಹಾಗೂ ನಿತೇಶ್ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾಯಿಸಿದ್ದ ಕುಟುಂಬಸ್ಥರು ಮಕ್ಕಳನ್ನು ನೆನೆದು ಕಣ್ಣೀರುಡಿತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಅಧಿಕಾರಿಗಳ ಭೇಟಿ: ಅಪಘಾತ ನಡೆದ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್, ಡಿವೈಎಸ್ಪಿ ಉಮಾರಾಣಿ, ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಸೇರಿದಂತೆ ಸೋಕೋ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಟೋ 5 : ಅಪಘಾತದಲ್ಲಿ ಮೃತಪಟ್ಟ ದಿಲೀಪ್

ಪೋಟೋ 6 : ಅಪಘಾತದಲ್ಲಿ ಮೃತಪಟ್ಟ ನಿತೇಶ್

ಪೋಟೋ 7 : ಅಪಘಾತದಲ್ಲಿ ಕಾರು ಜಖಂಗೊಂಡಿರುವುದು

ಪೋಟೋ 8 : ಘಟನಾ ಸ್ಥಳಕ್ಕೆ ಎಸ್ ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲಿಸಿದರು.