ಕನ್ನಡಪ್ರಭ ವಾರ್ತೆ ಮಧುಗಿರಿ

ಜನ್ಮ ಕೊಟ್ಟ ತಂದೆ- ತಾಯಿಯರನ್ನು ಅನಾಥಶ್ರಮಕ್ಕೆ ಸೇರಿಸುವುದು ಅಕ್ಷಮ್ಯ ಅಪರಾಧ ನಿಮ್ಮ ಬೆಳವಣಿಗೆಗೆ , ಶಿಕ್ಷಣಕ್ಕೆ ಆಸಕ್ತಿ ವಹಿಸಿ ದೊಡ್ಡವರನ್ನಾಗಿ ರೂಪಿಸಿದ ತಮ್ಮ ಜನ್ಮದಾತರನ್ನು ಕಡೆಯ ತನಕ ಮರೆಯದೆ ಜೋಪಾನ ಮಾಡಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಕಸಬಾ ಹೋಬಳಿ ಮೀನಗೊಂದಿ ಮಲ್ಲೇರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ರಂಗನಾಥ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಯಿ ಸೇವಾ ವೃದ್ಧಾಶ್ರಮ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಂತಾನವಿಲ್ಲದರಿಗೆ ವೃದ್ಧಾಶ್ರಮ ಆಶ್ರಯ ತಾಣ. ಆದರೆ ಮಕ್ಕಳಿದ್ದವರು ಹೆತ್ತವರನ್ನು ಜೋಪನ ಮಾಡದೆ ವೃದ್ಧಾಶ್ರಮಗಳಿಗೆ ತಳ್ಳುವುದು ಅಮಾನವೀಯ ಗುಣಲಕ್ಷಣ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ಧರಬೆಟ್ಟ ಕ್ಷೇತ್ರದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ವೃದ್ಧಾಶ್ರಮಗಳ ಪ್ರಸ್ತಾಪವಿಲ್ಲ. ಇದು ನಮ್ಮ ಸಂಸ್ಕೃತಿಯಲ್ಲ, ಆದರೆ ದೇಶದ ಕಾಲ ಮಾನ ಪರಿಸ್ಥಿತಿಯಿಂದಾಗಿ ವೃದ್ಧಾಶ್ರಮಗಳು ಬೆಳೆಯುತ್ತಿವೆ. ಮಕ್ಕಳು ತಮ್ಮ ಪೋಷಕರನ್ನು ಪ್ರೀತಿ,ವಿಶ್ವಾಸ ,ಗೌರವದಿಂದ ಕೊನೆತನಕ ಪಾಲಿಸಿ ಪೋಷಿಸಬೇಕು ಎಂದರು. ಶ್ರೀಕ್ಷೇತ್ರದ ಭಕ್ತಮುನೀಶ್ವರ ಆಶ್ರಮದ ರಂಗನಾಥನಂದ ಸ್ವಾಮೀಜಿ ಜಿ.ಜೆ.ರಾಜಣ್ಣ , ಬಿ.ವಿ.ನಾಗರಾಜಪ್ಪ, ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಬಿ.ನಾಗೇಶ್ ಬಾಬು, ಮಲ್ಲೇರಂಗನಾಥಸ್ವಾಮಿ ಎಂ.ಆರ್.ನಾರಾಯಣ್ ಶಟ್ಟಿ,, ದೇವದಾಸ್ ಮೂಡ್ಲಗಿರೀಶ್ , ಎನ್‌.ಮಹಾಲಿಂಗೇಶ್, ರಂಗಧಾಮಯ್ಯ ಇತರರಿದ್ದರು.