ಕಟೀಲು ಪದವಿ ಕಾಲೇಜಿನಲ್ಲಿ ಕೆರಿಯರ್ ಸೆಕ್ಟ್ರಮ್ 2024

| Published : Nov 24 2024, 01:48 AM IST

ಸಾರಾಂಶ

ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ರಸ ಪ್ರಶ್ನಾ ಸ್ಪರ್ಧೆಯನ್ನು ಯೇನಪೋಯ ವಿಶ್ವ ವಿದ್ಯಾಲಯ ಪ್ರೊ ಸಾಜನ್.ಎಂ ಅವರು ಜನಪದ ಸಮೂಹ ಗೀತೆ ಸ್ಪರ್ಧೆಯನ್ನು ಹರೀಶ್ ಮಲ್ಲಾರ್ ಹಾಗೂ ಮನ್ಸೂನ್ ರಾಜ್ ನಡೆಸಿಕೊಟ್ಟರು.

ಕನ್ನಡಪ್ರಭವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು, ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಹಾಗೂ ಅಂತರಾಷ್ಟ್ರೀಯ ಶಿಕ್ಷಣಕ್ಕಾಗಿ ಪ್ರವರ್ತಕ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ಜರುಗಿದ ‘ಕೆರಿಯರ್ ಸ್ಪೆಕ್ಟ್ರಮ್ - 2024 ದ್ವಿತೀಯ ಪಿಯುಸಿ ನಂತರ ಮುಂದೇನು ಎನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ, ಅಂತರ್ ಪದವಿಪೂರ್ವ ಕಾಲೇಜು ರಸಪ್ರಶ್ನೆ ಸ್ಪರ್ಧೆ ಮತ್ತು ಜಾನಪದ ಸಮೂಹ ಗೀತೆ ಸ್ಪರ್ಧೆ ಕಾರ್ಯಕ್ರಮವನ್ನು ಕಟೀಲು ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್‌ ವಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕ್ಯಾಪ್ಸ್ ಪೌಂಡೇಶನ್ ನ ಸಂಸ್ಥಾಪಕ ಸಿ.ಎ ಚಂದ್ರಶೇಖರ್ ಶೆಟ್ಟಿ ಯವರು ದ್ವಿತೀಯ ಪಿ.ಯು.ಸಿ ನಂತರ ಮುಂದೇನು ಎಂಬ ವಿಷಯದಲ್ಲಿ ವಾಣಿಜ್ಯ ವಿಷಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಸಿ.ಎ, ಸಿ.ಎಸ್, ಎಂ.ಸಿ.ಎ ವಿಷಯದ ಬಗ್ಗೆ ತಿಳಿಸಿದರು.

ದ್ವಿತೀಯ ಪಿಯುಸಿ ವಾಣಿಜ್ಯ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ರಸ ಪ್ರಶ್ನಾ ಸ್ಪರ್ಧೆಯನ್ನು ಯೇನಪೋಯ ವಿಶ್ವ ವಿದ್ಯಾಲಯ ಪ್ರೊ ಸಾಜನ್.ಎಂ ಅವರು ಜನಪದ ಸಮೂಹ ಗೀತೆ ಸ್ಪರ್ಧೆಯನ್ನು ಹರೀಶ್ ಮಲ್ಲಾರ್ ಹಾಗೂ ಮನ್ಸೂನ್ ರಾಜ್ ನಡೆಸಿಕೊಟ್ಟರು.

ದ್ವಿತೀಯ ಪಿಯುಸಿ ನಂತರ ಅರಿವು ಕಾರ್ಯಕ್ರಮ ಮತ್ತು ರಸ ಪ್ರಶ್ನೆ ಮತ್ತು ಜಾನಪದ ಸಮೂಹ ಗೀತೆ ಸ್ಪರ್ಧೆಗಳಿಗೆ ಮೂಲ್ಕಿ ಮತ್ತು ಮೂಡಬಿದಿರೆ ವಲಯದ ಒಟ್ಟು ಎಂಟು ಪದವಿ ಪೂರ್ವ ಕಾಲೇಜಿನ ಇನ್ನೂರ ಅರವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ ಮಟ್ಟಿ, ಬ್ಯಾಂಕ್ ಆಫ್ ಬರೋಡಾ(ಬಿ.ಒ.ಬಿ) ಕಟೀಲು ಶಾಖೆಯ ಹಿರಿಯ ಮ್ಯಾನೇಜರ್ ಗಿರೀಶ್.ಎಂ. ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಜೇತ ಕಾಲೇಜುಗಳ ವಿವರ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ- ಪೊಂಪೈ ಪಿ.ಯು ಕಾಲೇಜು ಐಕಳ, ದ್ವಿತೀಯ - ಗೋವಿಂದದಾಸ ಪಿಯುಸಿ ಕಾಲೇಜು ಸುರತ್ಕಲ್‌, ತೃತೀಯ ವಿದ್ಯಾವರ್ಧಕ ಪಿಯು ಕಾಲೇಜು ಮುಂಡ್ಕೂರು, ಜಾನಪದ ಸಮೂಹ ಗೀತೆ ಸ್ಪರ್ಧೆಯಲ್ಲಿ ಪ್ರಥಮ - ವಿದ್ಯಾವರ್ಧಕ ಪಿಯು ಕಾಲೇಜು ಮುಂಡ್ಕೂರು, ದ್ವಿತೀಯ ಸಂತ ಜೋಸೆಫ್ ಪಿಯು ಕಾಲೇಜು ಬಜಪೆ, ತೃತೀಯ- ಸರ್ಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ ತಂಡಗಳು ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡರು. ಸಂಸ್ಕ್ರತ ಉಪನ್ಯಾಸಕ ಡಾ.ಪದ್ಮನಾಭ ಮರಾಠೆ ಹಾಗೂ ಇಂಗ್ಲೀಷ್ ಭಾಷಾ ಉಪನ್ಯಾಸಕಿ ಲತಾಶ್ರೀ ನಿರೂಪಿಸಿದರು. ಉಪನ್ಯಾಸಕಿ ರೇಷ್ಮಾ ರೈ.ಬಿ. ವಂದಿಸಿದರು. ಗ್ರಂಥಪಾಲಕಿ ಸುಮಿತ್ರಾ ಬಹುಮಾನ ಪಟ್ಟಿ ವಾಚಿಸಿದರು. ಐಕ್ಯೂಎಸಿ ಮತ್ತು ಎಚ್.ಆರ್.ಡಿ .ಮುಖ್ಯಸ್ಥ ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್.ಹಾವಂಜೆಯವರು ಕಾರ್ಯಕ್ರಮ ನಡೆಸಿಕೊಟ್ಟರು.