ವೈದ್ಯಕೀಯ ಲೋಕದ ಯಶಸ್ಸು ಮನುಷ್ಯನ ವೃತ್ತಿ ನೈಪುಣ್ಯತೆ ಮೇಲೆ ನಿರ್ಣಾಯಕವಾಗಿದೇಯೇ ಹೊರತು, ತಂತ್ರಜ್ಞಾನದ ಮೇಲೆಲ್ಲ ಎಂದು ಮೈಸೂರಿನ ಜೆ.ಎಸ್.ಎಸ್.ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ. ಎಚ್.ಬಸವನಗೌಡಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುವೈದ್ಯಕೀಯ ಲೋಕದ ಯಶಸ್ಸು ಮನುಷ್ಯನ ವೃತ್ತಿ ನೈಪುಣ್ಯತೆ ಮೇಲೆ ನಿರ್ಣಾಯಕವಾಗಿದೇಯೇ ಹೊರತು, ತಂತ್ರಜ್ಞಾನದ ಮೇಲೆಲ್ಲ ಎಂದು ಮೈಸೂರಿನ ಜೆ.ಎಸ್.ಎಸ್.ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿ ಡಾ. ಎಚ್.ಬಸವನಗೌಡಪ್ಪ ತಿಳಿಸಿದರು. ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಶ್ರೀದೇವಿ ಆಸ್ಪತ್ರೆಯ ಆಡಿಟೋರಿಯಂ ಸಭಾಂಗಣದಲ್ಲಿ ಮೂರನೇ ಬ್ಯಾಚ್‌ನ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಹೊಸ-ಹೊಸ ಅವಿಷ್ಕಾರಗಳಿಂದಾಗಿ ತಂತ್ರಜ್ಞಾನ ಎಷ್ಟೇ ಉನ್ನತಿಗೊಂಡರೂ ವೈದ್ಯಕೀಯ ಚಿಕಿತ್ಸೆಯಲ್ಲಿ ಮನುಷ್ಯನ ಬುದ್ದಿಶಕ್ತಿ ನಿರ್ಣಾಯಕ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ರೋಬೋಟಿಕ್ ತಂತ್ರಜ್ಞಾನ ಇತ್ಯಾದಿಗಳು ಮನುಷ್ಯನ ಸಾಮರ್ಥ್ಯಗಳಿಗೆ ಪೂರಕವಾಗುತ್ತವೆ. ಚಿಕಿತ್ಸೆ ಸಂದರ್ಭಗಳಲ್ಲಿ ಮನುಷ್ಯ ನಿರ್ವಹಿಸಬೇಕಾದ ಪಾತ್ರಕ್ಕೆ ಪರ್ಯಾಯವಾಗಲಾರವು ಎಂದರು.ಮುಂದಿನ ತಲೆಮಾರಿನ ಭವಿಷ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ತರವಾಗಿದೆ. ವೈದ್ಯಕೀಯ ಲೋಕದಲ್ಲಿ ಕಲಿಕೆ ಎಂಬುದು ನಿರಂತರ ಮತ್ತು ವೃತ್ತಿಯಲ್ಲಿ ಹೆಸರು ಮಾಡಿ ಸೇವೆ ಮಾಡಲು ಕೌಶಲ್ಯ ಬಹಳ ಮುಖ್ಯವಾಗಿದೆ. ಉತ್ತಮ ವೈದ್ಯರನ್ನು ತಯಾರು ಮಾಡುವಲ್ಲಿ ಶ್ರೀದೇವಿ ವೈದ್ಯಕೀಯ ಕಾಲೇಜು ಮಹತ್ತರ ಕೊಡುಗೆ ನೀಡುತ್ತಿದೆ. ಸತತ ಪರಿಶ್ರಮದಿಂದ ಮನುಷ್ಯ ಎಷ್ಟು ಎತ್ತರಕ್ಕೆ ಹೋಗಬಹುದು ಮತ್ತು ಆದರ್ಶ ವ್ಯಕ್ತಿಯಾಗಿ ಬಾಳಬಹುದು ಎಂಬುದಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಜಾನ್‌ಸ್ಟೀಪನ್ ಮತ್ತು ಹೆಲನ್ ಕೆಲರ್ ಅವರುಗಳನ್ನು ಮತ್ತು ಅವರ ಸಾಧನೆ, ಬದುಕಿನ ರೀತಿಯನ್ನು ಉದಾಹರಣೆಯಾಗಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಮಾತನಾಡಿ ಶಿಕ್ಷಣ ತಂತ್ರಜ್ಞಾನ ಆರ್ಥಿಕ ವಲಯದಲ್ಲಿ ದೇಶ ಅಸಾಧಾರಣ ಸಾಧನೆ ಮಾಡಿದ್ದರೂ, ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಿಲ್ಲ. ಈ ನಿಟ್ಟಿನಲ್ಲಿ ವೃತ್ತಿಗೆ ಕಾಲಿಡುತ್ತಿರುವ ವೈದ್ಯರು ಗಮನ ಹರಿಸಬೇಕಾಗಿದೆ. ಉತ್ತಮ ಶೈಕ್ಷಣಿಕ ವಾತಾವರಣದ ಕಾರಣದಿಂದಾಗಿ ಶ್ರೀದೇವಿ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತಿದೆ ಇದಕ್ಕೆ ಕಾಲೇಜಿನ ಬೋಧಕ-ವರ್ಗದವರು ಕಾರಣವಾಗಿದೆ ಎಂದು ಹೇಳಿದರು.ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ರಮಣ್‌ಎಂ.ಹುಲಿನಾಯ್ಕರ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸುತ್ತಾ, ಶ್ರೀದೇವಿ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದು ವೃತ್ತಿ ಆರಂಭಿಸಿರುವ ವೈದ್ಯರು ದೇಶದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಶೈಕ್ಷಣಿಕ ವಾತಾವರಣದಿಂದಾಗಿ ಪ್ರತಿ ವರ್ಷ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಸ್ಥಾನಗಳಿಸುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್ ಪಾಟೀಲ್, ಡಾ.ಲಾವಣ್ಯ, ಅಂಬಿಕಾ ಹುಲಿನಾಯ್ಕರ್, ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇಂದ್ರಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಕೆ.ಮೋಹನ್‌ಕುಮಾರ್, ಉಪಪ್ರಾಂಶುಪಾಲೆ ಡಾ.ರೇಖಾಗುರುಮೂರ್ತಿ, ಡಾ.ಹೇಮಂತ್‌ರಾಜ್ ಇತರರಿದ್ದರು.