ಸಾರಾಂಶ
ಕಾಮಗಾರಿಗಳಿಗೆ ಉತ್ತಮ ಗುಣಮಟ್ಟದ ಸಾಮಗ್ರಿ ಬಳಕೆ ಮಾಡಬೇಕು
ಕುಷ್ಟಗಿ: ಸ್ಥಳೀಯರ ಸಲಹೆ ಪರಿಗಣಿಸಿ, ಗುತ್ತಿಗೆದಾರರು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ತಾಲೂಕಿನ ಗುಮಗೇರಿ ಗ್ರಾಪಂ ವ್ಯಾಪ್ತಿಯ ಗಂಗನಾಳ ಗ್ರಾಮದಲ್ಲಿ ಟಿಎಸ್ಪಿ ಯೋಜನೆಯಡಿಯಲ್ಲಿ ಮಂಜೂರಾದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಕಾಮಗಾರಿಗಳು ನಡೆಯುವ ಸ್ಥಳದಲ್ಲಿನ ಜನರ ವಿಶ್ವಾಸ ಗಳಿಸುವುದರ jತೆಗೆ ಅವರ ಸಲಹೆ ಪರಿಗಣನೆಗೆ ತೆಗೆದುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಕಾಮಗಾರಿಗಳಿಗೆ ಉತ್ತಮ ಗುಣಮಟ್ಟದ ಸಾಮಗ್ರಿ ಬಳಕೆ ಮಾಡಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಒಂದು ವೇಳೆ ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದರೆ ಸ್ಥಳೀಯ ಜನರು ನೇರವಾಗಿ ಅಥವಾ ದೂರವಾಣಿಯ ಮೂಲಕ ನನ್ನನ್ನು ಸಂಪರ್ಕಿಸಿ ಕಾಮಗಾರಿಯಲ್ಲಿ ಉಂಟಾಗಿರುವ ಲೋಪದೋಷ ತಿಳಿಸುವ ಮೂಲಕ ಉತ್ತಮ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ಮಾಡಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಮಗೇರಿ ಗ್ರಾಪಂ ಅಧ್ಯಕ್ಷ ಪರಸಪ್ಪ ಗಂಗನಾಳ, ಅಶೋಕ ಬಳೂಟಗಿ, ದುರಗಪ್ಪ ವಡಿಗೇರಿ, ರಾಜು ಗಂಗನಾಳ, ರಾಘವೇಂದ್ರ ದೇಸಾಯಿ, ಶರಣಪ್ಪ ವಂದಾಲಿ, ರವಿ ಮ್ಯಾಗೇರಿ, ನಿರೂಪಾದೆಪ್ಪ ಯಾಪಲದಿನ್ನಿ, ಬಸವರಾಜ ನಂದಿಹಾಳ, ಕರಿಯಪ್ಪ ಕಂಬಳಿ, ಯಮನೂರಪ್ಪ ಯಾಪಲದಿನ್ನಿ ಸೇರಿದಂತೆ ಅನೇಕರು ಇದ್ದರು.;Resize=(128,128))
;Resize=(128,128))
;Resize=(128,128))