ಸಾರಾಂಶ
ದಾವಣಗೆರೆ : ಅಧಿಕಾರಿಗಳು ಗಾಂಧಿನಗರ, ಬಾಷ ನಗರ ಸೇರಿದಂತೆ ಎಲ್ಲೆಲ್ಲಿ ಮನೆಗಳಿಗೆ ಮಳೆನೀರು ನುಗ್ಗುವುದೋ ಅಲ್ಲಲ್ಲಿ ಮಳೆನೀರು ತಡೆಗಟ್ಟುವ ಕಾಮಗಾರಿಗಳನ್ನು ಮಾಡಬೇಕು. ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚಿಸಿದರು.
ನಗರದ ದೇವರಾಜ ಅರಸು ಬಡಾವಣೆಯ ದಾವಣಗೆರೆ ಮತ್ತು ಹರಿಹರ ನಗರಾಭಿವೃದ್ಧಿ ಪಾಧಿಕಾರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳನ್ನು ಅಭಿವೃದ್ಧಿ ಹೆಚ್ಚು ಒತ್ತನ್ನು ನೀಡಬೇಕು. ಕಳಪೆ ಕಾಮಗಾರಿಯಿಂದಾಗಿ ಕುಂದವಾಡ ಕೆರೆ ಅಭಿವೃದ್ಧಿ ವಂಚಿತವಾಗಿದೆ. ಬಾತಿ ಕೆರೆ ಕಾಮಗಾರಿಯನ್ನು ಕುಂದವಾಡ ಕೆರೆ ಕಾಮಗಾರಿಯಂತೆ ಮಾಡದಿರಿ. ಕೆರೆಗೆ ಹೈಟೆಕ್ ಸ್ಪರ್ಶ ನೀಡಿ, ಪ್ರವಾಸಿ ತಾಣವನ್ನಾಗಿಸಬೇಕು. ಅಲ್ಲದೇ, ಪ್ರಾಧಿಕಾರ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಡೆ ಗಮನಹರಿಸಿ ಎಂದರು.
ಗಾಂಧಿನಗರ ಸಾರ್ವಜನಿಕರ ರುದ್ರಭೂಮಿಯು ಅವ್ಯವಸ್ಥೆಯಿಂದ ಕೂಡಿದೆ ಎಂದು ಸದಸ್ಯರೊಬ್ಬರು ದೂರಿದ ಹಿನ್ನಲೆ ಸಚಿವರು. ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕು. ಎಸ್.ಎಸ್.ಎಂ. ನಗರದಲ್ಲಿನ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಮಾಡಬೇಕು. ದಾವಣಗೆರೆ ಹಾಗೂ ಹರಿಹರ ನಗರದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿತ್ತ ಕೊಂಡೊಯ್ಯಬೇಕು ಎಂದರು.
ಸಭೆ ನಂತರ ಸಚಿವರು ವಿವಿಧ ಬಡಾವಣೆಗಳಿಂದ ಆಗಮಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಂಎಲ್‌ಸಿ ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಆಯುಕ್ತ ಹುಲ್ಲುಮನಿ ತಿಪ್ಪಣ್ಣ, ಪಾಲಿಕೆ ಆಯುಕ್ತೆ ರೇಣುಕಾ, ಹರಿಹರ ನಗರಸಭೆ ಆಯುಕ್ತ ಸುಬ್ರಮಣ್ಯ ಶೆಟ್ಟಿ, ಅಧಿಕಾರಿಗಳು ಹಾಗೂ ದೂಡಾ ಸದಸ್ಯರು ಇದ್ದರು.