ರೋಟರಿ ಸಂಸ್ಧೆಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ​

ಕನ್ನಡಪ್ರಭ ವಾರ್ತೆ, ತರೀಕೆರೆ

ರೋಟರಿ ಸಂಸ್ಥೆ ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪುವಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಪಾಲಾಕ್ಷ ಕೆ.ಹೇಳಿದ್ದಾರೆ.ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಪಾಲಾಕ್ಷ ಕೆ.ಅವರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಅನಾವರಣ ವೇಳೆ ಮಾತನಾಡಿದರು.

ಸಹಾಯಕ ಗವರ್ನರ್ ವಲಯ-7 ಪ್ರವೀಣ್ ನಹರ್ ಮಾತನಾಡಿ ರೋಟರಿ ಸಂಸ್ಥೆ ಕೈಗೊಳ್ಳುತ್ತಿರುವ ವೈವಿಧ್ಯಮಯ ಸಮಾಜಮುಖಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಾಗಿ ಹೇಳಿದರು.

ರೋಟರಿ ಸಂಸ್ಥೆ ಅಧ್ಯಕ್ಷ ರವಿಕುಮಾರ್ ಬಿ.ಪಿ. ಮಾತನಾಡಿ ನಮ್ಮ ಸಂಸ್ಥೆ ಕೆಲಸಗಳು ಕೇವಲ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದ ಜನರಿಗೂ ತಲುಪಬೇಕಿದೆ ಎಂದರು.


ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಾದ ಜಿ.ಎಸ್. ಪ್ರಮೀಳಾ (ನರ್ಸ್). ​ಗುರು ಶಾಂತಪ್ಪ ಸಿ.ಕೆ. (ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು). ಉಮೇಶ್ ನಾಯ್ಕ್ (ಪತ್ರಕರ್ತರು) , ಸೇವಾ ನಾಯ್ಕ್ (ಅಂಚೆ ಇಲಾಖೆ) ಕೃಷ್ಣ ಮೂರ್ತಿ (ಪಾರಂಪರಿಕ ವೈದ್ಯರು) ಅವರನ್ನು ಸನ್ಮಾನಿಸಲಾಯಿತು.

ಹಲಸೂರಿನ ಹಿ.ಪ್ರಾ. ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಕುಡಿಯುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿದ ಗವರ್ನರ್ ಮಕ್ಕಳೊಂದಿಗೆ ಸಂವಾದ ನಡೆಸಿದರು.​ ಗೋಪಾಲ ಕಾಲೋನಿಯಲ್ಲಿ ಬಿ.ವಿ. ದಿನೇಶ್ ಕುಮಾರ್ ತಮ್ಮ ತಂದೆ ಸ್ಮರಣಾರ್ಥ ನಿರ್ಮಿಸಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಖರೀದಿಸಲು ₹5000 ಆರ್ಥಿಕ ನೆರವು ನೀಡಿದರು. ವಲಯ -7ರ ಅಸಿಸ್ಟೆಂಟ್ ಗವರ್ನರ್ ರೋ ಪ್ರವಿಣ್ ನಹಾರ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ವಲಯ ಲೆಫ್ಟಿನೆಂಟ್ ಮಂಜುನಾಥ್, ಕಾರ್ಯದರ್ಶಿ ಪ್ರವೀಣ್ ಸಿ. ಸದಸ್ಯರಾದ ರಾಜಪ್ಪ, ಮಂಜುನಾಥ್ ಬಿ.ಕೆ., ಡಾ. ಎಸ್.ಎನ್. ಆಚಾರ್ಯ, ಡಾ.ಕಿಶೋರ್ ಕುಮಾರ್, ಬಿ.ವಿ. ದಿನೇಶ್ ಕುಮಾರ್, ಗೋವರ್ಧನ್, ಶಿವರಾಜ್, ಕಾರ್ತಿಕ್ ಕೆ.ಎಂ. ಇನ್ನರ್ವಿಲ್ ಕ್ಲಬ್ ಅಧ್ಯಕ್ಷೆ ಮೀರಾ ವಾಸು ಮತ್ತು ಸದಸ್ಯೆನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.--

27ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ರೋಟರಿ ಸಂಸ್ಥೆಯಿಂದ ರೋಟರಿ ಸಂಸ್ಥೆ ಜಿಲ್ಲಾ ಗವರ್ನರ್ ಪಾಲಾಕ್ಷೆ ಕೆ. ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರವಿಕುಮಾರ್ ಬಿ.ಪಿ ಮತ್ತಿತರರು ಇದ್ದರು.