ಸಾರಾಂಶ
ಕಳೆದ ಮಾರ್ಚ್ ತಿಂಗಳಿನಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಲು ನನ್ನ ಗುರುಗಳು ಹೆಸರನ್ನು ಸೂಚನೆ ಮಾಡಿದ್ದರು. ಅನಂತರ ನನಗೆ ಅಲ್ಲಿಂದ ಮೂರ್ತಿ ಕೆತ್ತನೆಗೆ ಕರೆ ಬಂದಿತ್ತು. ನನ್ನ ಇಬ್ಬರು ವಿದ್ಯಾರ್ಥಿಗಳ ಜೊತೆ ಸುಮಾರು ಏಳು ತಿಂಗಳುಗಳ ಅವಧಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಶ್ರೀರಾಮ ಮೂರ್ತಿ ಕೆತ್ತುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಶಿಲ್ಪಿ ವಿಪಿನ್ ಬದಾರಿಯಾ ಸಾಗರದಲ್ಲಿ ಹೇಳಿದ್ದಾರೆ.
ಕನ್ನಡಪ್ರಭವಾರ್ತೆ ಸಾಗರ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಕೆತ್ತುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಶಿಲ್ಪಿ ವಿಪಿನ್ ಬದಾರಿಯಾ ಹೇಳಿದರು.
ಪಟ್ಟಣದ ಜೋಗ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನ ಸಮಿತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ತಿಂಗಳಿನಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಲು ನನ್ನ ಗುರುಗಳು ಹೆಸರನ್ನು ಸೂಚನೆ ಮಾಡಿದ್ದರು. ಅನಂತರ ನನಗೆ ಅಲ್ಲಿಂದ ಮೂರ್ತಿ ಕೆತ್ತನೆಗೆ ಕರೆ ಬಂದಿತ್ತು. ನನ್ನ ಇಬ್ಬರು ವಿದ್ಯಾರ್ಥಿಗಳ ಜೊತೆ ಸುಮಾರು ಏಳು ತಿಂಗಳುಗಳ ಅವಧಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ ಎಂದು ಹೇಳಿದರು.ನಾವು ಮೂರ್ತಿ ಕೆತ್ತನೆ ಮಾಡುವಷ್ಟು ದಿನವೂ ಒಂದು ರೀತಿಯ ಸಾರ್ಥಕ ಭಾವನೆ ಇತ್ತು. ಶ್ರೀರಾಮನ ಸೇವೆ ಮಾಡಲು ನಮಗೆ ಒಂದು ಅವಕಾಶ ಸಿಕ್ಕಿದೆ ಎನ್ನುವ ಮನೋಭಾವ ಜಾಗೃತವಾಗಿತ್ತು. ಜ.22ರಂದು ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಟೆ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಬಂದಿದೆ. ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಾನು ಕೆತ್ತಿರುವ ಶ್ರೀರಾಮ ಮೂರ್ತಿಯನ್ನು ಮೊದಲ ಅಂತಸ್ತಿನಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ನನ್ನ ಕೆತ್ತನೆಗೆ ಗೌರವ ಸಿಕ್ಕಂತಾಗಿದೆ ಎಂದು ಹೇಳಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಡಿ.ಜಗದೀಶ್, ಪ್ರಮುಖರಾದ ಎಸ್.ಆರ್.ಪ್ರಭಾಕರ್, ಕೆ.ಜಿ.ಅಣ್ಣಪ್ಪ, ಪ್ರಕಾಶ್, ಮೌನೇಶ್, ನಗರಸಭೆ ಸದಸ್ಯ ಗಣೇಶಪ್ರಸಾದ್ ಇನ್ನಿತರರು ಹಾಜರಿದ್ದರು. ರಂಗನಾಥ್ ಸ್ವಾಗತಿಸಿದರು. ಲೋಕೇಶಕುಮಾರ್ ನಿರೂಪಿಸಿ, ದೀಪಕ್ ವಂದಿಸಿದರು.- - -
-17ಕೆ.ಎಸ್.ಎ.ಜಿ.1:ಸಾಗರದ ಶ್ರೀರಾಮ ದೇವಸ್ಥಾನ ಸಮಿತಿಯಿಂದ ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತನೆಯಲ್ಲಿ ಪಾಲ್ಗೊಂಡ ಶಿಲ್ಪಿ ವಿಪಿನ್ ಬದಾರಿಯಾ ಅವರನ್ನು ಗೌರವಿಸಲಾಯಿತು.