ಸಾರಾಂಶ
ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಪಾವಗಡ: ತಾಲೂಕಿನ ಅಪ್ಪಾಜಿಹಳ್ಳಿಯಲ್ಲಿ ದಲಿತ ವ್ಯಕ್ತಿಯ ಮೇಲೆ ಮೇಲ್ಜಾತಿಯವರ ದೌರ್ಜನ್ಯ ಹಾಗೂ ಹಲ್ಲೆ ಘಟನೆಗೆ ಸಂಬಂಧಪಟ್ಟಂತೆ ಅಪ್ಪಾಜಿಹಳ್ಳಿಯ ಆರು ಮಂದಿ ಸರ್ಣೀಯರ ವಿರುದ್ದ ಭಾನುವಾರ ತಾಲೂಕಿನ ತಿರುಮಣಿ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ತಾಲೂಕಿನ ನಾಗಲಮಡಿಕೆ ಹೋಬಳಿ ರ್ಯಾಪ್ಟೆ ಗ್ರಾಪಂನ ಅಪ್ಪಾಜಿಹಳ್ಳಿಯಲ್ಲಿ ಜು 17ರಂದು ವೀರಚಿನ್ನಯ್ಯಸ್ವಾಮಿಯ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಎತ್ತಿನಗಾಡಿ ಮುಂದೆ ತಮಟೆ ಹೊಡೆಯುವ ವಿಚಾರವಾಗಿ ದಲಿತ ಸಮುದಾಯ ನಾಗರಾಜು ಮೇಲೆ ಕೆಲವರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಮಾಧ್ಯಮಗಳು ಹಾಗೂ ದಲಿತ ಮುಖಂಡರು ಪೊಲೀಸರ ಗಮನ ಸೆಳೆದ ಮೇಲೆ ಈಗ ಒಟ್ಟು 6 ಜನರ ಮೇಲೆ ಪ್ರಕರಣ ದಾಖಲಾಗಿದೆ.