ಗಾಂಜಾ ಸೇವನೆ ಕುರಿತು ಪೊಲೀಸರಿಗೆ ತಿಳಿಸಿದ್ದಕ್ಕೆ ಹಲ್ಲೆ
KannadaprabhaNewsNetwork | Published : Nov 02 2023, 01:00 AM IST
ಗಾಂಜಾ ಸೇವನೆ ಕುರಿತು ಪೊಲೀಸರಿಗೆ ತಿಳಿಸಿದ್ದಕ್ಕೆ ಹಲ್ಲೆ
ಸಾರಾಂಶ
ಗಾಂಜಾ ಸೇವನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ವ್ಯಕ್ತಿಗೆ ಹಲ್ಲೆ
ಮಂಗಳೂರು: ಗಾಂಜಾ ಸೇವನೆ ಮಾಡಿದವನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೀಷ್ ಹಲ್ಲೆಗೊಳಗಾದವರು. ಅವರು ಮಣ್ಣಗುಡ್ಡೆಯಲ್ಲಿ ಮೀನು ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ಅ.30ರಂದು ಕೆಲಸ ಮುಗಿಸಿ ಕಾಳಿ ಚರಣ್ ಫ್ರೆಂಡ್ಸ್ ಕ್ಲಬ್‌ನಲ್ಲಿ ಸ್ನೇಹಿತರೊಂದಿಗೆ ಮಾತನಾಡಿಕೊಂಡು ಅಲ್ಲಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಅವರ ಪರಿಚಯದ ಅವಿನಾಶ್, ರೋಶನ್ ಕಿಣಿ ಮತ್ತು ಶಿವು ತಡೆದು ನಿಲ್ಲಿಸಿ ‘ಗಾಂಜಾ ಸೇವನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೀಯಾ?’ ಎನ್ನುತ್ತಾ ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೆ ಫ್ರೆಂಡ್ಸ್ ಕ್ಲಬ್ ಬಾಗಿಲಿನ ಬೀಗ ಒಡೆದು ಹಾಕಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.