ಆರೋಪಿಗಳ ಬಂಧನ ಸಂದರ್ಭ ಅಸಭ್ಯ ವರ್ತನೆಯೊಂದಿಗೆ ನಿಮ್ಮ ಮಕ್ಕಳನ್ನು ಕರೆಸಿ ಎಂದು ಹೊಡಿ ಬಡಿ ಮಾಡಿ ಜಾತಿ ನಿಂದನೆ ಮಾಡಿದ್ದರಾರೆಂದು ನಾವಲಗಿ ಗ್ರಾಮದ ಚಂದ್ರವ್ವ ಬಸಪ್ಪ ಕದಂ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಆರೋಪಿಗಳ ಬಂಧನ ಸಂದರ್ಭ ಅಸಭ್ಯ ವರ್ತನೆಯೊಂದಿಗೆ ನಿಮ್ಮ ಮಕ್ಕಳನ್ನು ಕರೆಸಿ ಎಂದು ಹೊಡಿ ಬಡಿ ಮಾಡಿ ಜಾತಿ ನಿಂದನೆ ಮಾಡಿದ್ದರಾರೆಂದು ನಾವಲಗಿ ಗ್ರಾಮದ ಚಂದ್ರವ್ವ ಬಸಪ್ಪ ಕದಂ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಗಿದ್ದೇನು?:ಮೇ ೩ರಂದು ನಸುಕಿನ ಜಾವ ೩ ಗಂಟೆ ವೇಳೆ ಅಕ್ರಮ ಸಾರಾಯಿ ಮಾರಾಟದಡಿ ಆರೋಪಿತರಾದ ಚಂದ್ರವ್ವ ಕದಂ ಎಂಬುವವರ ಮಕ್ಕಳಿಬ್ಬರ ಮೇಲೆ ಪ್ರಕರಣ ದಾಖಲಾದ ಕಾರಣ ಬಂಧಿಸಲು ನಾವಲಗಿ ಗ್ರಾಮದ ಅವರ ಮನೆಗೆ ತೆರಳಿದ್ದ ಜಮಖಂಡಿ ಅಬಕಾರಿ ನಿರೀಕ್ಷಕಿ ಗೀತಾ ತೆಗ್ಗಿಯವರಿಗೆ ಆರೋಪಿಗಳು ಸಿಗದಿದ್ದಾಗ ಮನೆಯಲ್ಲಿದ್ದ ಅವರ ತಾಯಿ ಚಂದ್ರವ್ವಳಿಗೆ ನಿಮ್ಮ ಮಕ್ಕಳನ್ನು ಕರೆಸಿ ಇಲ್ಲದಿದ್ದಾರೆ ಮುಂದೆ ಪರಿಣಾಮ ನೆಟ್ಟಗಿರೋದಿಲ್ಲವೆಂದು ಹೊಡಿ-ಬಡಿ ಮಾಡಿ ಜಾತಿ ನಿಂದನೆ ಮಾಡಿದ್ದಾರೆಂದು ಚಂದ್ರವ್ವ ಕದಂ ದೂರಿದ್ದಾರೆ.

ಪ್ರಕರಣದ ಕುರಿತು ಅಬಕಾರಿ ನಿರೀಕ್ಷಕಿ ಗೀತಾ ತೆಗ್ಗಿ ಸೇರಿದಂತೆ ಒಟ್ಟು ೭ ಜನರ ಸಿಬ್ಬಂದಿ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ರೋಷಣ್ ಜಮೀರ್, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್‌ಐ ಶಿವರಾಜ ದರಿಗೋಣ ತನಿಖೆ ಮುಂದುವರೆಸಿದ್ದಾರೆ.