ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ನಾಡಿನ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿದವರಲ್ಲಿ ಪಾರಿಜಾತ ಕಲಾವಿದರು ಮೊದಲಿಗರು ಎಂದು ಜಿಲ್ಲಾಧಿಕಾರಿ ಜಾನಕಿ.ಕೆ.ಎಂ.ಹೇಳಿದರು.ಪಟ್ಟಣದ ವೆಂಕಟಾಪುರ ಓಣಿಯಲ್ಲಿ ಮಂಗಳವಾರ ವೀರಭದ್ರೇಶ್ವರ ಕಾರ್ತಿಕೋತ್ಸವದಲ್ಲಿ ಪಾರಿಜಾತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶರಣರ ಸಂದೇಶ ಇಡೀ ಮನಕುಲಕ್ಕೆ ಉತ್ತಮ ಸಂದೇಶ ನೀಡಿದೆ. ಪಾರಿಜಾತ ರಂಗಭೂಮಿ ಕಲಾವಿದರ ನೂರಾರು ಬದುಕಿನ ಭವಣೆಯಲ್ಲಿ ಕಲಾರಸಿಕರ ಮನಸು ಸಂತಸಗೊಳಿಸುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಎಷ್ಟೋ ಕಲಾವಿದರು ಪಾರಿಜಾತಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದರು.
ತಹಶೀಲ್ದಾರ ವಿನೋದ ಹತ್ತಳ್ಳಿ ಮಾತನಾಡಿ, ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಅವನತಿಯ ಹಾದಿ ಹಿಡಿದಿರುವ ಪಾರಿಜಾತ ಉಳಿವಿಗೆ ಎಷ್ಟೋ ಕಲಾವಿದರು ಅಪಾರ ಕೊಡುಗೆ ನೀಡಿದ್ದಾರೆ. ಎಷ್ಟೋ ಕಲಾವಿದರು ಬಡಕುಟುಂಬದಿಂದ ಬಂದವರಿದ್ದಾರೆ. ಪಾರಿಜಾತ ಮಾಡುತ್ತಾರೆ ಹೊರತು ಹಣ ಗಳಿಸಲು ಅಲ್ಲ. ಪಾರಿಜಾತವೇ ಕಲಾವಿದರ ಉಸಿರು ಎಂದು ಹೇಳಿದರು.ಗಣಿ ಉದ್ಯಮಿ ಎಂ.ಎ.ವಿರಕ್ತಮಠ ಮಾತನಾಡಿ, ಸರ್ಕಾರ ಪಾರಿಜಾತ ಕಲಾವಿದರಿಗೆ ಮಾಸಾಶನವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿ. ಇಂದಿನ ದಿನ ಬೆಲೆಗಳು ಹೆಚ್ಚಾಗಿವೆ. ಪ್ರತಿ ತಿಂಗಳು ಸರಿಯಾಗಿ ಮಾಸಾಶನ ಕಲಾವಿದರಿಗೆ ಬರುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರದ ಗಮನ ಸೆಳೆಯಬೇಕು. ಸಂಕಷ್ಟದಲ್ಲಿರುವ ಪಾರಿಜಾತ ಕಂಪನಿಗಳಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಆಗ್ರಹಿಸಿದ ಅವರು, ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಅವನತಿಯ ಹಾದಿ ಹಿಡಿದಿರುವ ಪಾರಿಜಾತ ಕಲೆಯ ಉಳಿವಿಗಾಗಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಇದೆ ವೇಳೆ ಜಿಲ್ಲಾಧಿಕಾರಿ ಜಾನಕಿ ಅವರು ಭಕ್ತಿಗೀತೆ ಹಾಡಿ ಎಲ್ಲರನ್ನು ರಂಜಿಸಿದರು. ವಿವಿಧ ಕಲಾತಂಡಗಳಿಂದ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ಸಾಯಂಕಾಲ ಮದ್ದು ಸುಡುವ ಕಾರ್ಯಕ್ರಮ ಜರುಗಿತು. ಇದೇ ವೇಳೆ ಕಲಾವಿದರನ್ನು, ದಾನಿಗಳನ್ನು, ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.ಚಂದ್ರಶೇಖರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳದ, ಕಲಾವಿದರಾದ ಮಲ್ಲಮ್ಮ ಮ್ಯಾಗೇರಿ, ಯಲ್ಲವ್ವ ರೊಡ್ಡಪ್ಪನವರ, ಮಲ್ಲಿಕಾರ್ಜುನ ಮುದಕವಿ, ಕಾಶಿಬಾಯಿ ದಾದನಟ್ಟಿ, ಕೃಷ್ಣಾ ಭಜಂತ್ರಿ, ನಾರಾಯಣ ಪತ್ತಾರ, ಮಲ್ಲಯ್ಯ ಸಂಬಾಳದ, ಲಕ್ಷ್ಮಣ ಮುದ್ದಾಪುರ, ಚೆನ್ನಪ್ಪ ಮುದ್ದಾಪುರ, ಕಾಶಲಿಂಗ ಮಾಳಿ, ಲೋಕಣ್ಣ ದೊಡಮನಿ, ಈರಣ್ಣ ಬಳಿಗಾರ, ಗುತ್ತಿಗೆದಾರ ಚಂದ್ರಶೇಖರ ರಡ್ಡಿ, ಎಸ್.ಎನ್.ಹಿರೇಮಠ, ರವಿ ಬೋಳಿಶೆಟ್ಟಿ, ಆನಂದ ಹವಳಖೋಡ, ಷಣ್ಮೂಖಪ್ಪ ಕೋಲ್ಹಾರ, ಮಲ್ಲಪ್ಪ ಬೆಳಗಲಿ, ಮಂಜು ದೊಡಮನಿ, ಬಸಪ್ಪ ಮುದ್ದಾಪುರ, ಲೋಕಣ್ಣ ಗದ್ಯಾಳ, ಶಂಕರ ದುಂಡಪ್ಪಗೋಳ, ವಿಠ್ಠಲ ಕಲಾಲ, ಈರಪ್ಪ ಮುದ್ದಾಪುರ, ಬಸವರಾಜ ಬೂದಿಹಾಳ, ಬಸವರಾಜ ಚಿಪ್ಪಲಕಟ್ಟಿ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಸರ್ವ ಸದಸ್ಯರು, ಯುವಕ ಸಂಘ, ಸ್ತ್ರೀ ಶಕ್ತಿ ಸಂಘ, ಮಹಿಳಾ ಮಂಡಳಗಳ ಗ್ರಾಮದ ಹಿರಿಯರು, ಯುವಕ ಮಿತ್ರರು ಇದ್ದರು.