ಸಾರಾಂಶ
ಈ ಜಾತಿ ಗಣತಿ ವರದಿಯಲ್ಲಿ ಸರಿಯಾದ ಮಾಹಿತಿಯೇ ಇಲ್ಲ ಎಂಬುದನ್ನು ಕಾಂಗ್ರೆಸ್‌ನವರೇ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಜಯಪ್ರಕಾಶ ಹೆಗ್ಡೆ ಅವರ ವರದಿ ಬಗ್ಗೆ ತಮ್ಮ ನಿಲುವೇನು? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೆ ಜಾತಿ ಗಣತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಸಲ್ಲಿಸಿದ ಜಾತಿ ಗಣತಿ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವರದಿ ವಾಸ್ತವಿಕವಾಗಿಲ್ಲ ಎಂದು ನಮಗಿಂತ ಮೊದಲು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಯಾವುದೇ ರೀತಿಯ ಪೂರ್ವ ತಯಾರಿ ಇಲ್ಲದೇ ಜಾತಿ ಗಣತಿ ಮಾಡಿದ್ದಾರೆ ಎಂದು ಹೇಳಿದರು.
ಈ ಜಾತಿ ಗಣತಿ ವರದಿಯಲ್ಲಿ ಸರಿಯಾದ ಮಾಹಿತಿಯೇ ಇಲ್ಲ ಎಂಬುದನ್ನು ಕಾಂಗ್ರೆಸ್‌ನವರೇ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಜಯಪ್ರಕಾಶ ಹೆಗ್ಡೆ ಅವರ ವರದಿ ಬಗ್ಗೆ ತಮ್ಮ ನಿಲುವೇನು? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ. ಆಮೇಲೆ ಬಿಜೆಪಿ ತನ್ನ ನಿಲುವನ್ನು ತಿಳಿಸಲಿದೆ ಎಂದರು.ಟಿಕೆಟ್ ಗೊಂದಲ ಏನಿಲ್ಲ:
ಧಾರವಾಡ ಲೋಕಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಈಗಾಗಲೇ ತಯಾರಿ ನಡೆಸಿದ್ದೇನೆ. ನಮ್ಮಲ್ಲಿ ಗೊಂದಲ ಏನಿಲ್ಲ ಎಂದ ಜೋಶಿ, ಎಲ್ಲ ವರ್ಗದ ಜನರ ಬೆಂಬಲ ಇದೆ. ಲೋಕಸಭೆ ಚುನಾವಣೆಯೇ ಇರಲಿ, ಯಾವುದೇ ಚುನಾವಣೆ ಇರಲಿ, ಎಲ್ಲಿ? ಯಾರಿಗೆ? ಟಿಕೆಟ್ ಕೊಡಬೇಕು ಎಂಬುದನ್ನು ಬಿಜೆಪಿಯಲ್ಲಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.ಧಾರವಾಡ ಕ್ಷೇತ್ರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ತಾವು ಚುನಾವಣಾ ಪೂರ್ವ ತಯಾರಿ ಮಾಡಿದ್ದೇವೆ. ಎಲ್ಲ ವರ್ಗದವರ ಬೆಂಬಲವೂ ಸಿಕ್ಕಿದೆ ಎಂದರು.