ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂರನೇ ದಿನವಾದ ಬುಧವಾರ ತುಸು ವೇಗ ಕಂಡಿದ್ದು, ಬುಧವಾರ ಸಂಜೆ 6 ಗಂಟೆ ವೇಳೆಗೆ ಒಟ್ಟು 84,180 ಕುಟುಂಬಗಳ 3,19,829 ಜನಸಂಖ್ಯೆಯ ಸಮೀಕ್ಷೆ ನಡೆಸಲಾಗಿದೆ.ತೀವ್ರ ವಿರೋಧ, ಗೊಂದಲ, ಸಮೀಕ್ಷೆಗೆ ತಡೆ ಕೋರಿ ಹಲವರು ನ್ಯಾಯಾಲಯದ ಮೊರೆ ಹೋಗಿರುವ ನಡುವೆಯೇ ಸಮೀಕ್ಷೆ ಮೂರು ದಿನ ಪೂರೈಸಿದೆ. ಮೊದಲ ದಿನವಾದ ಸೋಮವಾರ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿತ್ತು. ಎರಡನೇ ದಿನ ತುಸು ಪ್ರಗತಿ ಕಾಣಿಸಿಕೊಂಡಿತ್ತು. 3ನೇ ದಿನ ಸಂಜೆ 6 ಗಂಟೆ ವೇಳೆಗೆ ಬುಧವಾರ ಒಂದೇ ದಿನ 1.5 ಲಕ್ಷದಷ್ಟು ಜನಸಂಖ್ಯೆಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಈ ಮೂಲಕ ಮೂರು ದಿನ ಸೇರಿ ಒಟ್ಟು 3,19,829 ಮಂದಿಯ ಸಮೀಕ್ಷೆ ನಡೆಸಲಾಗಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭಿಸದಿದ್ದರೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ ಆನೇಕಲ್ ಭಾಗದಲ್ಲಿ 338 ಮನೆಗಳ 1,168 ಮಂದಿಯ ಸಮೀಕ್ಷೆ ನಡೆಸಲಾಗಿದೆ.ಜಿಲ್ಲಾವಾರು ಗಣತಿ ಪ್ರಗತಿ:
ಹಾವೇರಿಯಲ್ಲಿ 7,942 ಕುಟುಂಬಗಳ 30,791 ಜನಸಂಖ್ಯೆ, ಬಾಗಲಕೋಟೆಯಲ್ಲಿ 5,873 ಕುಟುಂಬಗಳ 23,593 ಜನಸಂಖ್ಯೆಯ ಗಣತಿ ನಡೆಸಲಾಗಿದೆ. ಬೆಳಗಾವಿಯಲ್ಲಿ 7146 ಕುಟುಂಬಗಳ 26,494 ಮಂದಿ, ರಾಯಚೂರಲ್ಲಿ 2,723 ಕುಟುಂಬಗಳ 10,728 ಸದಸ್ಯರು, ಚಿತ್ರದುರ್ಗದಲ್ಲಿ 4,436 ಕುಟುಂಬಗಳ 16,957, ದಾವಣಗೆರೆ 4174 ಕುಟುಂಬಗಳ 16,057 ಮಂದಿ, ಗದಗ ಜಿಲ್ಲೆಯಲ್ಲಿ 5082 ಕುಟುಂಬಗಳ 18,892 ಜನ, ಮಂಡ್ಯದಲ್ಲಿ 4,865 ಕುಟುಂಬಗಳ 17,465, ಧಾರವಾಡ ಜಿಲ್ಲೆಯಲ್ಲಿ 3587 ಕುಟುಂಬಗಳ 13,363 ಸದಸ್ಯರನ್ನು ಸಮೀಕ್ಷೆಗೆ ಅಳವಡಿಸಲಾಗಿದೆ.ಉಳಿದಂತೆ ಬಳ್ಳಾರಿಯಲ್ಲಿ 887 ಕುಟುಂಬಗಳ 3,641 ಮಂದಿ, ಬೀದರ್ ಜಿಲ್ಲೆಯ 1784 ಕುಟುಂಬಗಳ 7,407 ಮಂದಿ, ವಿಜಯಪುರದಲ್ಲಿ 1781 ಕುಟುಂಬಗಳ 6828 ಮಂದಿ, ಚಾಮರಾಜನಗರದಲ್ಲಿ 1060 ಕುಟುಂಬಗಳ 3658, ಚಿಕ್ಕಮಗಳೂರು 3409 ಕುಟುಂಬಗಳ 12,127, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,115 ಕುಟುಂಬಗಳ 4603, ಕಲಬುರಗಿಯಲ್ಲಿ 5,526 ಕುಟುಂಬಗಳ 22,078 ಸದಸ್ಯರು, ಹಾಸನದಲ್ಲಿ 2,169 ಕುಟುಂಬಗಳ 7671 ಸದಸ್ಯರು, ಕೊಡಗು ಜಿಲ್ಲೆಯಲ್ಲಿ 1261 ಕುಟುಂಬಗಳ 4,402, ಕೋಲಾರದಲ್ಲಿ 1504 ಕುಟುಂಬಗಳ 5,737, ಕೊಪ್ಪಳದಲ್ಲಿ 3447 ಕುಟುಂಬಗಳ 13,903, ಮೈಸೂರಿನಲ್ಲಿ 1444 ಕುಟುಂಬಗಳ 4982, ಶಿವಮೊಗ್ಗದ 2,124 ಕುಟುಂಬಗಳ 7,628 ಸದಸ್ಯರು, ತುಮಕೂರಿನ 849 ಕುಟುಂಬಗಳ 3,121, ಉಡುಪಿಯ 283 ಕುಟುಂಬಗಳ 1,173 ಸದಸ್ಯರು, ಉತ್ತರ ಕನ್ನಡದ 3,289 ಕುಟುಂಬಗಳ 11,879 ಮಂದಿ, ಚಿಕ್ಕಬಳ್ಳಾಪುರದ 723 ಕುಟುಂಬಗಳ 2,591 ಮಂದಿ, ರಾಮನಗರದ 1,406 ಕುಟುಂಬಗಳ 4,932 ಮಂದಿ, ಯಾದಗಿರಿಯಲ್ಲಿ 1,688 ಕುಟುಂಬಗಳ 7,242 ಸದಸ್ಯರು, ವಿಜಯನಗರದ 1,643 ಕುಟುಂಬಗಳ 6,568 ಸದಸ್ಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.