ಗೊಂದಲದ ಗೂಡಾದ ಜಾತಿ ಸಮೀಕ್ಷೆ: ಜಿ.ಸುಬ್ರಹ್ಮಣ್ಯ

| Published : Oct 13 2025, 02:01 AM IST

ಗೊಂದಲದ ಗೂಡಾದ ಜಾತಿ ಸಮೀಕ್ಷೆ: ಜಿ.ಸುಬ್ರಹ್ಮಣ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ: ಜಾತಿ ಸಮೀಕ್ಷೆ ಅವಧಿ ಮುಗಿದು ತಮಗೆ ಕೊಟ್ಟಿದ್ದ ಸಮೀಕ್ಷೆ ಕಾರ್ಯ ಮುಗಿಸಿದ ಶಿಕ್ಷಕರಿಗೆ ಸರ್ಕಾರ ದಿನಕ್ಕೊಂದು ನಿರ್ಧಾರ ಪ್ರಕಟಿಸುವ ಮೂಲಕ ಶಿಕ್ಷಕರನ್ನು ಬೀದಿಗೆ ನಿಲ್ಲಿಸಿದೆ ಎಂದು ಬಾಲ ನ್ಯಾಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಜಿ. ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ತರೀಕೆರೆ: ಜಾತಿ ಸಮೀಕ್ಷೆ ಅವಧಿ ಮುಗಿದು ತಮಗೆ ಕೊಟ್ಟಿದ್ದ ಸಮೀಕ್ಷೆ ಕಾರ್ಯ ಮುಗಿಸಿದ ಶಿಕ್ಷಕರಿಗೆ ಸರ್ಕಾರ ದಿನಕ್ಕೊಂದು ನಿರ್ಧಾರ ಪ್ರಕಟಿಸುವ ಮೂಲಕ ಶಿಕ್ಷಕರನ್ನು ಬೀದಿಗೆ ನಿಲ್ಲಿಸಿದೆ ಎಂದು ಬಾಲ ನ್ಯಾಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಜಿ. ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ಮತ್ತೊಂದು ತಲೆ ನೋವನ್ನು ಸರ್ಕಾರ ಅಂಟಿಸಿದೆ. ಹೊಸದಾಗಿ ಪಡೆದಿರುವ ಪಡಿತರ ಚೀಟಿ ಆಧರಿಸಿ ಕುಟುಂಬ ಸಮೀಕ್ಷೆ ಮಾಡುವಂತೆ ಹಾಗೂ ಈ ಹಿಂದೆ 6 ವರ್ಷದ ಒಳಗಿನ ಮಕ್ಕಳನ್ನು ಸಮೀಕ್ಷೆ ಯಲ್ಲಿ ಸೇರಿಸಬಾರದು ಎಂದಿದ್ದ ಸರ್ಕಾರ ಈಗ ಅವರನ್ನು ಸೇರಿಸಿ ಸಮೀಕ್ಷೆ ಮಾಡುವಂತೆ ತಿಳಿಸಿರುವುದರಿಂದ ಸಮೀಕ್ಷಾದಾರರು ಪುನಃ ಹೋಗಿದ್ದ ಮನೆಗಳಿಗೆ ಹೋಗಿ ಸಮೀಕ್ಷೆ ಮಾಡುವ ಪರಿಸ್ಥಿತಿ ಎದುರಾಗಿದೆ.

ಮೊದಲೇ ಸರಿಯಾದ ನೆಟ್ ವರ್ಕ್ ಸಿಗದೇ ಸಮೀಕ್ಷೆ ಗೆ ತೋಡಕಾಗಿ ಸಮೀಕ್ಷೆದಾರರು ಗೂಗಲ್ ಮ್ಯಾಪ್ ನಂಬಿ ಹೋದಾಗ ಕೆರೆ, ಭಾವಿ ಹತ್ತಿರ ಕರೆದೊಯ್ದಿದೆ. ಪ್ರಸ್ತುತ ವಿದ್ಯುತ್ ಮೀಟರ್ ನಂಬರ್ ಆಧಾರಿಸಿ ಸಮೀಕ್ಷೆ ನಡೆಯುತ್ತಿರುವುದರಿಂದ ಕೆಲವೆಡೆ ರೈತರು ಜಮೀನಿನಲ್ಲಿ ಇರುವ ಫಾರಂ ಮನೆಗೆ ತೆಗೆದುಕೊಂಡ ಸಂಪರ್ಕದಿಂದ ಜಮೀನೆಡೆಗೆ ಗೂಗಲ್ ತೋರಿಸಿ ಸಮೀಕ್ಷಕರು ಹೈರಾಣಾಗಿದ್ದು ಇದೆ. ಇನ್ನು ಕೆಲವೆಡೆ ಒಂದೇ ಹೆಸರಿನಲ್ಲಿ ಒಂದೇ ಊರಿನಲ್ಲಿ 2-3 ಸಂಪರ್ಕ ಹೊಂದಿದ್ದು ಅದರಿಂದಲೂ ಸಮೀಕ್ಷೆ ಸಮಯದಲ್ಲಿ ತೊಂದರೆ ಆಗಿದೆ.

ಕೆಲವೆಡೆ ವಿದ್ಯುತ್ ಆರ್. ಆರ್. ನಂಬರ್ ಹುಡುಕಿ ಕೊಂಡು ಹೋದವರಿಗೆ ಆ ಮೀಟರ್ ಇಲ್ಲದೆ ಇರುವುದು. ಕೆಲವರು ಮೀಟರ್ ತೆಗೆದಿಟ್ಟಿರುವುದು ಕಂಡು ಪಜೀತಿಗೆ ಬಿದ್ದಿರುವುದು ಒಂದೆಡೆ ಯಾದರೆ. ಸಮೀಕ್ಷೆ ನಡೆಸುವವರಿಗೂ, ನಿಗದಿತ ಬೀದಿ, ಏರಿಯಗಳ ಮನೆ ನೀಡದೆ, ಒಂದೊಂದು ಮನೆ ಬೇರೆ ಬೇರೆ ಬೀದಿ, ಏರಿಯಾಗಳಲ್ಲಿ ಹತ್ತಿರದ ಅಕ್ಕ ಪಕ್ಕ ಊರು ಗಳಲ್ಲಿ ಇದ್ದಿದ್ದರಿಂದ ಹುಡುಕಿ ಕೊಂಡು ಅಲೆಯುವ ಸ್ಥಿತಿ ಎದುರಾಗಿತ್ತು.

ಸಮೀಕ್ಷೆಗೆ ಹೋದಾಗ ಕೆಲವರು ಸ್ಪಂದಿಸದೇ, ಕೆಲವು ಮನೆಗಳಲ್ಲಿ ನಾಯಿ ಕಾಟ ಅನುಭವಿಸಿದರೆ, ಒಂದೊಂದೇ ಮನೆ ಇರುವ ಕಡೆ ಮಹಿಳಾ ಸಮೀಕ್ಷೆ ದಾರರು ಹೋಗುವುದು ಒಂದು ರೀತಿಯ ದುಸ್ಸಾಹಸ ಮತ್ತು ಸುರಕ್ಷತಾ ದೃಷ್ಟಿಯಲ್ಲಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪರಿಹಾರ ಹುಡುಕದೆ, ಇದ್ಯಾವುದನ್ನೂ ಗಮನಿಸದ ಸರ್ಕಾರ ಮೇಲಾಧಿಕಾರಿಗಳಿಂದ ಒತ್ತಡ ಹಾಕಿಸಿ, ಅಮಾನತ್ತು ಮತ್ತು ಇನ್ನಿತರ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ದಿನಕ್ಕೆ 20 ಕುಟುಂಬಗಳ ಸಮೀಕ್ಷೆ ನಿಗಧಿ ಪಡಿಸಿದ್ದು, ಒಂದೊಂದು ಮನೆ ಸಮೀಕ್ಷೆ ನಡೆಸಲು ಸ್ಪಂದಿಸಿ ದಾಖಲೆ ನೀಡಿದರೆ ಕನಿಷ್ಠ 1ರಿಂದ 1ವರೆ ಗಂಟೆ ಅವಶ್ಯಕತೆ ಇದೆ. ಬೆಳಿಗ್ಗೆಯಿಂದ ಸಮೀಕ್ಷೆಯಲ್ಲಿ ತೊಡಗಿದರು ಗರಿಷ್ಠ ದಿನಕ್ಕೆ10 ಸಮೀಕ್ಷೆ ಮಾಡಲು ಸಾಧ್ಯ. ಹೀಗಿರುವಾಗ ಸರ್ಕಾರ ಸಾರ್ವತ್ರಿಕೆ ರಜೆ, ನವರಾತ್ರಿಯಲ್ಲೂ ಕುಟುಂಬ ದವ ರೊಂದಿಗೆ ನೆಮ್ಮದಿಯಾಗಿ ಹಬ್ಬ ಆಚರಿಸಲು ಅವಕಾಶ ನೀಡದೆ ಸಮೀಕ್ಷೆದಾರರನ್ನು ಹಿಂಸಿಸಿದೆ ಎಂದಿದ್ದಾರೆ.ಹಳ್ಳಿಗಳಲ್ಲಿ ಜನ ತೋಟ, ಗದ್ದೆ, ಕೂಲಿ ಕೆಲಸಕ್ಕೆ ಹೋಗುವುದರಿಂದ ಮುಂಜಾನೆ ಇಲ್ಲವೇ ಸಂಜೆ ನಂತರವೆ ಸಮೀಕ್ಷೆ ಸಾಧ್ಯ. ಸಂಜೆ 7ರ ನಂತರ ಕೆಲವು ಏರಿಯಾಗಳಿಗೆ ಅದರಲ್ಲೂ ಮಹಿಳೆಯರು ಹೋಗಲು ಸಾಧ್ಯವಿಲ್ಲ. ಈ ಎಲ್ಲಾ ಸಮಸ್ಯೆ ನಡುವೆ ನಿಗದಿ ಪಡಿಸಿದ ಕುಟುಂಬ ಸಮೀಕ್ಷೆ ಮುಗಿಯಿತು ಎನ್ನುವಾಗಲೇ 6 ವರ್ಷದ ಕೆಳಗಿನ ಮತ್ತು ಹೊಸ ಪಡಿತರ ಚೀಟಿ ಪಡೆದವರ ಸಮೀಕ್ಷೆ ಗೆ ಆದೇಶಿಸಿದ್ದು, ಹಳೇ ಪಡಿತರ ಚೀಟಿಯಲ್ಲಿನ ಕುಟುಂಬದಲ್ಲಿರುವವರೇ ಹೊಸ ಪಡಿತರ ಚೀಟಿಯಲ್ಲಿ ಇರುವುದು ಇದರಿಂದ ಈಗಾಗಲೇ ಸಮೀಕ್ಷೆ ಮುಗಿದಿದೆ ಎಂದು ತೋರಿಸುವುದರಿಂದ. ಲಾಗಿನ್ ನಲ್ಲಿ ಪೆಂಡಿಂಗ್ ತೋರಿಸಿ ಸಮಸ್ಯೆಗೆ ಕಾರಣವಾಗಿದೆ. ಕುಟುಂಬದ ಕೆಲವು ಸದಸ್ಯರು ಹೊರ ಭಾಗದಲ್ಲಿ ಇದ್ದು ಬೇರೆ ಬೇರೆ ಪಡಿತರ ಚೀಟಿ ಪಡೆದಿದ್ದರೂ ಎರಡರಲ್ಲೂ ಹೆಸರಿರುವ ಕಾರಣ ಸಮೀಕ್ಷೆಗೆ ತೊಂದರೆ ಆಗುತ್ತಿದೆ.

ಸಮೀಕ್ಷೆ ಮುಗಿದರೆ ಸಾಕು ಎನ್ನುವಂತೆ ಕುಟುಂಬದವರಿಂದ ಒಂದೆರಡು ಪ್ರಶ್ನೆಗೆ ಉತ್ತರ ಪಡೆದು ಇನ್ನುಳಿದವುಗಳಿಗೆ ಸಮೀಕ್ಷಾಕರೇ ಉತ್ತರ ನಮೂದಿಸುವ ಪರಿಪಾಟ ನಡೆದು ಹೋಗಿದೆ. ಇದರಿಂದ ಸಮರ್ಪಕ ಸಮೀಕ್ಷೆ ಸಾಧ್ಯವಿಲ್ಲದಂತೆ ಆಗಿದೆ. ಹಾಗಾಗಿ ಸಮೀಕ್ಷೆ ಯಿಂದ ಯಾವ ಪ್ರಯೋಜನ ಸಹ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.-

11ಕೆಟಿಆರ್.ಕೆ.15ಃ ಜಿ.ಸುಬ್ರಹ್ಮಣ್ಯ