ಸಾರಾಂಶ
ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಹೋರಾಟ ಮಾಡುತ್ತೇವೆ ಎಂದು ಅಭಿವೃದ್ಧಿಗೆ ವಿರೋಧ ಮಾಡಬಾರದು. ಹೋರಾಟ ಮಾಡುವುದಾದರೆ ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಲಿ. ಅಭಿವೃದ್ಧಿ ವಿಚಾರವಾಗಿ ಹೋರಾಟ ಮಾಡಲಿ. ಸುಖಾ ಸುಮ್ಮನೆ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್‌ಗೆ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ .
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ಕೈಬಿಡುವ ಪ್ರಶ್ನೆಯೇ ಇಲ್ಲ. ಅವರೆಡನ್ನು ಮಾಡೇ ಮಾಡುತ್ತೇವೆ ಎಂದು ಶಾಸಕ ಪಿ.ರವಿಕುಮಾರ್ ಖಡಕ್ಕಾಗಿ ಹೇಳಿದರು. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತಸಂಘದವರು ಸುಮ್ಮನೆ ಎಲ್ಲದಕ್ಕೂ ವಿರೋಧ ಮಾಡುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಬಾರದು. ಯಾರೇ ವಿರೋಧ ಮಾಡಿದರೂ ಕಾವೇರಿ ಆರತಿಯನ್ನೂ ಮಾಡುತ್ತೇವೆ. ಅಮ್ಯೂಸ್‌ಮೆಂಟ್ ಪಾರ್ಕ್‌ಅನ್ನೂ ಜಾರಿಗೊಳಿಸುತ್ತೇವೆ ಎಂದು ನಿಷ್ಠುರವಾಗಿ ಹೇಳಿದರು.ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದರಿಂದ ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
ಈಗಿನ ಮಾರುಕಟ್ಟೆ ದರದಲ್ಲೇ ರೈತರ ಜಮೀನನ್ನು ಕೊಂಡುಕೊಳ್ಳುತ್ತೇವೆ. ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸುವ ಭರವಸೆ ನೀಡಿದರು.ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಹೋರಾಟ ಮಾಡುತ್ತೇವೆ ಎಂದು ಅಭಿವೃದ್ಧಿಗೆ ವಿರೋಧ ಮಾಡಬಾರದು. ಹೋರಾಟ ಮಾಡುವುದಾದರೆ ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಲಿ. ಅಭಿವೃದ್ಧಿ ವಿಚಾರವಾಗಿ ಹೋರಾಟ ಮಾಡಲಿ. ಸುಖಾ ಸುಮ್ಮನೆ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್‌ಗೆ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.