ಸಾರಾಂಶ
ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಸಲ್ಲಿಸುವ ಧಾರ್ಮಿಕ ಆರತಿ ಸಮಾರಂಭದ ಜೊತೆಗೆ, ರಾಫ್ಟಿಂಗ್ ಸೇರಿದಂತೆ ಹಲವು ಜಲ ಕ್ರೀಡೆಗಳು ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈ ಬಾರಿ ದಸರಾದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಕಾವೇರಿ ಆರತಿ ಜೊತೆಗೆ ಸಾಹಸ ಹಾಗೂ ಜಲ ಕ್ರೀಡೆಗಳು ಪ್ರವಾಸೋದ್ಯಮಕ್ಕೆ ಹೊಸ ಹೊನಲು ತಂದಿದೆ ಎಂದು ಕಾವೇರಿ ಸಮಿತಿ ಅಧ್ಯಕ್ಷ ಡಾ.ರಾಮ ಪ್ರಸಾತ್ ಮನೋಹರ್ ಹೇಳಿದರು.ತಾಲೂಕಿನ ಕೆಆರ್‌ಎಸ್‌ನ ಕಾವೇರಿ ಆರತಿದಲ್ಲಿ ಭಾಗವಹಿಸಿ ಮಾತನಾಡಿ, ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಸಲ್ಲಿಸುವ ಧಾರ್ಮಿಕ ಆರತಿ ಸಮಾರಂಭದ ಜೊತೆಗೆ, ರಾಫ್ಟಿಂಗ್ ಸೇರಿದಂತೆ ಹಲವು ಜಲ ಕ್ರೀಡೆಗಳು ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ ಎಂದರು.
ಸಾಹಸ ಕ್ರೀಡೆಗಳು ಯುವಕರಿಗೆ ಹೊಸ ಉತ್ಸಾಹ ನೀಡುತ್ತಿದ್ದರೆ, ಜಲಕ್ರೀಡೆಗಳು ಕುಟುಂಬ ಸಮೇತರಾಗಿ ಬರುವವರಿಗೆ ವಿಶೇಷ ಅನುಭವ ನೀಡುತ್ತಿವೆ. ಕೆಆರ್‌ಎಸ್‌ನಲ್ಲಿ ಜಲಕ್ರೀಡೆಗಳು ಪ್ರವಾಸಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಾಹಸ, ಮನರಂಜನೆ ಮತ್ತು ಸಂಸ್ಕೃತಿಯ ಸಂಯೋಜನೆಯಿಂದ ಕೆಆರ್‌ಎಸ್ ಪ್ರವಾಸೋದ್ಯಮದ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಮಕ್ಕಳಿಗಾಗಿ ಸುಮಾರು 80 ಆಟಗಳನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.ದಸರಾ: ದೇಹದಾರ್ಢ್ಯ ಸ್ಪರ್ಧೆಶ್ರೀರಂಗಪಟ್ಟಣ:
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ದಸರಾ ಅಂಗವಾಗಿ ಮಿಸ್ಟರ್ ಶ್ರೀರಂಗಪಟ್ಟಣ ದಸರಾಶ್ರೀ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ರವಿಕುಮಾರ್ ಹುಣಸೂರು- ಶಶಾಂಕ್ ಫಿಟ್ನೆಸ್ ಜಿಮ್ ಹಾಗೂ ಬೆಸ್ಟ್ ಮಸ್ಕ್ಯುಲರ್ ಆಗಿ ಮೈಸೂರಿನ ಸೈಯದ್ ಫಾಸಲ್ ರವರು ಪಡೆದುಕೊಂಡರು. ಮತ್ತೊಂದು ಬೆಸ್ಟ್ ಪೋಜರ್ ಆಗಿ ಹುಣಸೂರಿನ ಸುನೀಲ್ ಪಡೆದುಕೊಂಡರು. ವಿಜೇತರಿಗೆ ಏಕಲವ್ಯ ಪ್ರಶಸ್ತಿ ವಿಜೇತ ಹಾಗೂ ಇಂಟರ್ ನ್ಯಾಷನಲ್ ಬಾಡಿ ಬಿಲ್ಡರ್ ಪ್ರಸಾದ್ ಕುಮಾರ್ ಪ್ರಶಸ್ತಿ ವಿತರಿಸಿದರು.
ಈ ವೇಳೆ ಸುರೇಶ್ ಫಿಟ್ನೆಸ್ ಮಾಲೀಕ ಸುರೇಶ್, ರಫಿ, ನಿಶಾಂತ್, ರೋಹಿತ್, ದಿನೇಶ್, ಸಂತೋಷ್, ಸಿಂಹ, ರಕ್ಷಿತ್, ನಿಖಿಲ್, ಶರೀಫ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.