ಸಾರಾಂಶ
ಎಸ್.ಜಿ. ತೆಗ್ಗಿನಮನಿ
ನರಗುಂದ: ಪ್ರಸಕ್ತ ವರ್ಷ ರೈತರು ಹಿಂಗಾರು ಹಂಗಾಮಿನಲ್ಲಿ "ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ " ಬಿತ್ತನೆ ಮಾಡಿದ್ದು, ಬೀಜ ಮೊಳಕೆಯೊಡೆಯದೆ ರೈತರಿಗೆ ಅಪಾರ ಹಾನಿಯುಂಟಾಗಿದೆ.ಉತ್ತಮ ಮಳೆ ಆಗಿದ್ದರಿಂದ ತಾಲೂಕಿನ ರೈತರು ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿ 20 ದಿನ ಗತಿಸಿದರೂ ಬೀಜ ಮೊಳಕೆಯೊಡೆಯದಿರುವುದರಿಂದ ರೈತ ಸಮುದಾಯಕ್ಕೆ ದಿಕ್ಕುತೋಚದಾಗಿದೆ.
20 ಸಾವಿರ ಖರ್ಚುಈ ವರ್ಷ ಮಲಪ್ರಭಾ ಜಲಾಶಯ ಭರ್ತಿಯಾಗಿದೆ. ನೀರಾವರಿ ಜಮೀನಿಗೆ ಕನಿಷ್ಠ 6 ತಿಂಗಳ ಕಾಲ ಕಾಲುವೆಗಳ ಮೂಲಕ ನೀರು ಪೂರೈಕೆ ಆಗಬಹುದೆಂದು ರೈತರು ಪ್ರತಿ ಎಕರೆಗೆ ₹20 ಸಾವಿರ ಖರ್ಚು ಮಾಡಿ ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದು, ಸಂಪೂರ್ಣ ನಷ್ಟವಾಗಿದೆ.
ಪರಿಹಾರಕ್ಕೆ ಆಗ್ರಹಉತ್ತಮ ಫಸಲು ಬರುತ್ತದೆ ಎಂದು 1 ಪಾಕೆಟ್ ಕಾವೇರಿ ಚಾಂಪ್ ಸೂರ್ಯಕಾಂತಿ ಬೀಜಕ್ಕೆ ₹2000ರಿಂದ ₹2200 ನೀಡಿ ಖರೀದಿ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ, ಬೀಜ ಮೊಳಕೆಯೊಡೆದಿಲ್ಲ. ಆದ್ದರಿಂದ ಕಂಪನಿ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಪರಿಹಾರ ನೀಡದಿದ್ದರೆ ಕಂಪನಿ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಗದಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳೆ ಎಚ್ಚರಿಕೆ ನೀಡಿದ್ದಾರೆ.
ಪರಿಶೀಲನೆಹಿಂಗಾರು ಹಂಗಾಮಿನಲ್ಲಿ ಕಾವೇರಿ ಕಂಪನಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ ಭೈರನಹಟ್ಟಿ, ಕೊಣ್ಣೂರು, ಶಿರೋಳ, ಕಪ್ಲಿ, ಕಲ್ಲಾಪುರ ಗ್ರಾಮಗಳ ರೈತರು ನಮಗೆ ದೂರು ನೀಡಿದ್ದಾರೆ. ಈ ದೂರು ಅನ್ವಯಿಸಿ ಕೃಷಿ ವಿಶ್ವವಿದ್ಯಾಲಯದ ಬೀಜ ತಜ್ಞರಿಗೆ ಪತ್ರ ಬರೆದು ಜಮೀನು ಪರಿಶೀಲನೆ ಮಾಡಲು ಮನವಿ ಮಾಡಿದ್ದೇವೆ.ಮಂಜುನಾಥ ಜನಮಟ್ಟಿ, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ