ನಾಲೆ ಸ್ವಚ್ಛತೆ ಮಾಡದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು

| Published : Jul 21 2025, 01:30 AM IST

ನಾಲೆ ಸ್ವಚ್ಛತೆ ಮಾಡದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗೊಳ ಗ್ರಾಮದ ಬಲಮುರಿ ವಿರಿಜಾ ನಾಲೆಯ 4ನೇ ಬಚ್ಚಲು ಬಳಿ ಸುಮಾರು 200 ಎಕರೆಯಷ್ಟು ಜಮೀನಿಗೆ ಸುಮಾರು 2 ಕಿಮೀ ಉದ್ದಕ್ಕೆ ಹೋಗುವ ನಾಲೆಯಲ್ಲಿ ಗಿಡಗೆಂಟೆ ಬೆಳೆದು, ಹೂಳು ತುಂಬಿ ನೀರು ಸರಾಗವಾಗಿ ರೈತರ ಜಮೀನುಗಳಿಗೆ ಹರಿಯದೆ ತೊಂದರೆಯಾಗಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮುಂಗಾರು ಆರಂಭವಾಗಿದ್ದರೂ ಕಾವೇರಿ ನೀರಾವರಿ ನಿಗಮದಿಂದ ನಾಲೆ ಸ್ವಚ್ಛತೆ ಮಾಡದ ಹಿನ್ನೆಲೆಯಲ್ಲಿ ಬೇಸತ್ತ ಬೆಳಗೊಳ ಗ್ರಾಮದ ರೈತರೇ ನಾಲೆಗಳಿದು ಸ್ವಚ್ಛತೆ ಕ್ರಮ ಕೈಗೊಂಡು ದುರಸ್ತಿಗೆ ಮುಂದಾಗಿದ್ದಾರೆ.

ಗ್ರಾಮದ ಬಲಮುರಿ ವಿರಿಜಾ ನಾಲೆಯ 4ನೇ ಬಚ್ಚಲು ಬಳಿ ಸುಮಾರು 200 ಎಕರೆಯಷ್ಟು ಜಮೀನಿಗೆ ಸುಮಾರು 2 ಕಿಮೀ ಉದ್ದಕ್ಕೆ ಹೋಗುವ ನಾಲೆಯಲ್ಲಿ ಗಿಡಗೆಂಟೆ ಬೆಳೆದು, ಹೂಳು ತುಂಬಿ ನೀರು ಸರಾಗವಾಗಿ ರೈತರ ಜಮೀನುಗಳಿಗೆ ಹರಿಯದೆ ತೊಂದರೆಯಾಗಿತ್ತು.

ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ನಾಲೆ ಸ್ವಚ್ಛತಾ ಜೊತೆ ಹೂಳು ತೆಗೆಯದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ ರೈತರು ನಂತರ ತಾವೇ ಗುದ್ದಲಿ ಕುಡುಗೋಲು ಹಿಡಿದು ನಾಲೆಯನ್ನು ಸ್ವಚ್ಛತೆಗೊಳಿಸಿ ಗುದ್ದಲಿಯಿಂದ ಊಳು ತೆಗೆದುಕೊಳ್ಳಲು ಕಾಮಗಾರಿ ಆರಂಭಿಸಿದರು.

ಈಗಾಗಲೇ ಮಂಡ್ಯ ಜಿಲ್ಲೆಗೆ 2 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ನಾಲೆಗಳ ಆಧುನೀಕರಣ ಮಾಡುವಂತೆ ಸೂಚುಸಿದೆ. ಪಟ್ಟಣದ ವಿವಿಧೆಡೆ ನಾಲಾ ಆಧುನೀಕರಣ ಕಾಮಗಾರಿಗೆ ಸುಮಾರು 300 ರಿಂದ 400 ಕೋಟಿಯಷ್ಟು ಅನುದಾನ ನೀಡಿ ಕಾಮಗಾರಿ ನಡೆಸಲಾಯಿತು.

ಕೆಲವು ಕಡೆ ಕಾಮಗಾರಿಗಳು ವಿಳಂಭವಾಗಿದೆ. ಮುಂಗಾರು ಬೆಳೆಗೆ ಬಿತ್ತನೆ ಬೀಜವನ್ನು ಹಾಕಲು ರೈತರಿಗೆ ತಡವಾಗುತ್ತಿದೆ. ಇತ್ತ ನೀರಾವರಿ ಅಧಿಕಾರಿಗಳು ಕಿವಿಗೊಡದೆ ನಾಲಾ ಸ್ವಚ್ಛತೆ ಹಾಗೂ ಊಳು ತೆಗೆಸಲು ಮುಂದಾಗಿಲ್ಲ. ಹೀಗಾಗಿ ಬೆಳಗೊಳ, ಕಾರೇಕುರ, ಹೊಸಹಳ್ಳಿ ಸೇರಿದಂತೆ ಈ ಭಾಗದ ರೈತರು ತಾವೇ ನಾಲೆ ಸ್ವಚ್ಛತೆಗೆ ಮುಂದಾಗಿದ್ದಾರೆ.

ಕೆಲವು ನಾಲೆಗಳಲ್ಲಿ ಈಗಾಗಲೇ ನೀರು ಹರಿಸಲಾಗಿದೆ. ಮತ್ತೊಂದು ಕಡೆಯಲ್ಲಿ ಕೆಲವು ನಾಲೆಗಳ ಆಧುನೀಕರಣ ನಡೆಯದೆ ಇರುವ ಭಾಗಗಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ರೈತರು ಬೆಳಗ್ಗೆಯಿಂದಲೆ ನಾಲೆಗೆ ಇಳಿದು ತಾವೇ ನಾಲೆ ಸ್ವಚ್ಛತೆಗೆ ಮುಂದಾಗಿದ್ದಾರೆ.

ಸ್ಥಳೀಯ ಶಾಸಕರು ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದು ನಾಲೆ ಸ್ವಚ್ಛತೆ ಮತ್ತು ಊಳು ತೆಗೆಸಲು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ಕಷ್ಟಕ್ಕೆ ಸ್ವಂದಿಸುವಂತೆ ಒತ್ತಾಯಿಸಿದ್ದಾರೆ.