ನಂತರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ನಿರ್ವಾಹಣೆಯನ್ನು ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್ ಮೂಲಕ ನೀಡಲಾಗಿತ್ತು.ಅಂತೆಯೇ ಗುತ್ತಿಗೆದಾರರು ನಗರದಲ್ಲಿ 10 ಕಡೆ ಸುತ್ತುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರು.ಆದರೆ ಗುತ್ತಿಗೆದಾರರು ಇನ್ನೂ ಪುರಸಭೆ ವಶಕ್ಕೆ ನೀಡಿಲ್ಲ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಸ್ತೆಗಳಲ್ಲಿ ಅಹಿತಕರ ಘಟನೆಗಳನ್ನು ಪತ್ತೆ ಹಚ್ಚಲು ಹಾಗು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸುಲಭವಾಗಲಿದೆ ಎಂದು ಪಟ್ಟಣದಲ್ಲಿ 10 ಕಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಾಲ್ಕು ವರ್ಷಗಳಾದರೂ ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 2021 ನೇ ಸಾಲಿನಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿಹಾಗೂ ಜನದಟ್ಟಣೆ ಹೆಚ್ಚಾಗಿರುವ ಕಡೆ ಅಳವಡಿಸಿರುವ ಸುತ್ತುವ ಹತ್ತು ಸಿಸಿಟಿವಿ ಕ್ಯಾಮೆರಾಗಳು ಕಂಬಗಳಲ್ಲಿ ದೃಷ್ಟಿ ಬೊಂಬೆಗಳಂತೆ ಇದೆ ವಿನಃ ಇದುವರೆಗೂ ಕಾರ್ಯನಿರ್ವಹಣೆ ಇಲ್ಲ.ಸಿಸಿಟಿವಿ ಕ್ಯಾಮೆರಾಗಳು ಅಳವಡಿಸುವ ಸಂದರ್ಭದಲ್ಲಿ ಬಾರೀ ಸುದ್ದು ಮಾಡಿ ಈಗ ಠುಸ್ಸ್ ಪಟಾಕಿಯಾಗಿದೆ.ಏನಿದು ಕ್ಯಾಮೆರಾ ಕಥೆ;ನಾಲ್ಕು ವರ್ಷಗಳ ಹಿಂದೆ ನಗರೋತ್ಥಾನ ಅಭಿವೃದ್ಧಿ ಯೋಜನೆ ವತಿಯಿಂದ ಪುರಸಭೆ ಮುತುವರ್ಜಿ ವಹಿಸಿ ಅಂದಿನ ಮುಖ್ಯಾಧಿಕಾರಿ ಆಗಿದ್ದವರು ಕೋಲಾರ ಮುಖ್ಯರಸ್ತೆಯಲ್ಲಿ ಬರುವ ಐದು ಪ್ರಮುಖ ಸ್ಥಳಗಳಲ್ಲಿ ಹಾಗೂ ಜನದಟ್ಟಣೆ ಹೆಚ್ಚಾಗಿರುವ ಕಡೆ ಒಟ್ಟು ಹತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.ನಗರದಲ್ಲಿ ಯಾವುದು ಅಕ್ರಮ ಚಟುವಟಿಕೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಪುಂಡರು ಪೋಕರಿಗಳಿಗೆ ಎಚ್ಚರಿಕೆಯ ಅಸ್ತ್ರವಾಗಿತ್ತು. ಪುರಸಭೆ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಗರೋತ್ಥಾನ ಅಭಿವೃದ್ಧಿ ಯೋಜನೆಯಡಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆಗೆ ಕ್ರಿಯಾ ಯೋಜನೆ ತಯಾರಿಸಿ ಮುಖ್ಯಾಧಿಕಾರಿಗಳ ಮುಖಾಂತರ ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಅನುಮೋದನೆಗೆ ಕಳುಹಿಸುಕೊಡಲಾಗಿತ್ತು.
ನಗರದಲ್ಲಿ 10 ಕಡೆ ಸಿಸಿ ಟಿವಿನಂತರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ನಿರ್ವಾಹಣೆಯನ್ನು ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್ ಮೂಲಕ ನೀಡಲಾಗಿತ್ತು.ಅಂತೆಯೇ ಗುತ್ತಿಗೆದಾರರು ನಗರದಲ್ಲಿ 10 ಕಡೆ ಸುತ್ತುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರು.ಆದರೆ ಗುತ್ತಿಗೆದಾರರು ಇನ್ನೂ ಪುರಸಭೆ ವಶಕ್ಕೆ ನೀಡಿಲ್ಲ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ನಂತರ ಅದರ ಕಂಟ್ರೋಲ್ ಅನ್ನು ಬಂಗಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗಿತ್ತು. ಆದರೆ ಇದುವರೆವಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಠಾಣೆಗೆ ಒಪ್ಪಿಸಿಲ್ಲ. ಠಾಣೆಗೆ ಹಸ್ತಾಂತರ ಮಾಡಿಲ್ಲ
ಒಂದು ಮೂಲದ ಪ್ರಕಾರ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪ್ರಾಯೋಗಿಕವಾಗಿ ಚಾಲನೆ ಮಾಡಿ ಪರೀಕ್ಷಿಸಿದ ನಂತರ ಜಿಲ್ಲಾ ಯೋಜನಾ ನಿರ್ದೇಶಕರಿಗೆ ವರದಿಯನ್ನು ಕಳುಹಿಸಿದ್ದು, ಅವರ ಮುಖಾಂತರ ಠಾಣೆಗೆ ಒಪ್ಪಿಸಬೇಕಾಗಿದೆ. ಆದರೆ ಇದುವರೆವಿಗೂ ಠಾಣೆಗೆ ಯಾಕೆ ಒಪ್ಪಿಸಿಲ್ಲ ಎಂಬ ಪ್ರಶ್ನಗೆ ಸೂಕ್ತ ಸಿಗುತ್ತಿಲ್ಲ. 4 ವರ್ಷದಲ್ಲಿ ಅಳವಡಿಸಿರುವ ಈ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿದೆಯೇ ಅಥವಾ ಜೀವಂತವಾಗಿದೆಯೇ ಬಗ್ಗೆ ಪರಿಶೀಲಿಸಿ ಅಕ್ರಮ ಚಟುವಟಿಕೆಗಳ ಬಗ್ಗೆ ಕಡಿವಾಣ ಹಾಕಲು ಆದಷ್ಟು ಬೇಗ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ನಾಗರೀಕರು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.