ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯ 5ನೇ ವಾರ್ಡಿನ ಎಂ.ಕರೇನಹಳ್ಳಿ ಗ್ರಾಮದಲ್ಲಿ 35 ಲಕ್ಷ ವೆಚ್ಚದ ಸಿಸಿ ಚರಂಡಿ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ‌ ವೇಳೆ ಮಾತನಾಡಿದ ಅಧ್ಯಕ್ಷೆ ಭಾನುಪ್ರಿಯಾ, ಪುರಸಭೆ ನಿಧಿಯಿಂದಲೇ ಸುಮಾರು 35 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ, ಡಕ್ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಹಲವು ವಾರ್ಡ್‌ಗಳಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿ ಮುಗಿದಿದೆ ಎಂದು ತಿಳಿಸಿದರು.

ಸದಸ್ಯೆ ಲಲಿತಾ ನರಸಿಂಹಯ್ಯ ಮಾತನಾಡಿ, ಪುರಸಭೆ ನಿಧಿ ಬಳಸಿಕೊಂಡು ನಮ್ಮ ವಾರ್ಡಿನ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚರಂಡಿ, ಅರಳಿ ಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ‌ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.

ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಗಾಳಿ ಮಳೆಗೆ ಮಹದೇವಯ್ಯ, ಉಮೇಶ್ ಹಾಗೂ ಶಿವಣ್ಣ ಅವರ ಮನೆಗಳಿಗೆ ಹಾನಿಯಾಗಿದ್ದವು. ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಹಾಗೂ 5ನೇ ವಾರ್ಡ್ ಸದಸ್ಯೆ ಲಲಿತಾ ನರಸಿಂಹಯ್ಯ ಅವರು ವೈಯಕ್ತಿಕವಾಗಿ 25 ಸಾವಿರ ರುಪಾಯಿ ಪರಿಹಾರ ವಿತರಿಸಿದರು.

ಈ ವೇಳೆ ಪುರಸಭೆ ಸದಸ್ಯರಾದ ರಾಕೇಶ್ ಕುಮಾರ್, ಪುಟ್ಟಪ್ಪ, ಸಂಪತ್ ಕುಮಾರ್ , ಗ್ರಾಮದ ಮುಖಂಡರಾದ ಯಾಲಕಪ್ಪ ಕುಮಾರ, ಶ್ರೀನಿವಾಸ್, ತಬಲ‌‌ ಶ್ರೀನಿವಾಸ ಸತ್ಯಪ್ಪ, ಗೋಪಾಲ್, ರಾಜು, ಚನ್ನಪ್ಪ ಹಾಜರಿದ್ದರು.


22ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಪುರಸಭೆ ವ್ಯಾಪ್ತಿಯ 5 ನೇ ವಾರ್ಡಿನ ಎಂ.ಕರೇನಹಳ್ಳಿ ಗ್ರಾಮದಲ್ಲಿ ಸಿಸಿ ಚರಂಡಿ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಶುಕ್ರವಾರ ಭೂಮಿಪೂಜೆ ಸಲ್ಲಿಸಿದರು.