ಪರೀಕ್ಷೆ ಯುದ್ಧ ಅಲ್ಲ ಹಬ್ಬದಂತೆ ಸಂಭ್ರಮಿಸಿ: ಕಲ್ಲಪ್ಪ ಚಿಂಚಲಿ

| Published : Jan 16 2024, 01:45 AM IST

ಸಾರಾಂಶ

ಮಹಾಲಿಂಗಪುರ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದರೆ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬಹುದು ಎಂದು ಬಸವಾನಂದ ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಕಲ್ಲಪ್ಪ ಚಿಂಚಲಿ ಹೇಳಿದರು.ಶ್ರೀ ಬಸವಾನಂದ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ಮಾತನಾಡಿದರು. ಫಲಿತಾಂಶ ಸುಧಾರಣೆಗೆ ಹಾಕಿಕೊಂಡ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಜೀವನದ ಅತ್ಯುನ್ನತ ಘಟ್ಟವಾದ ಎಸ್ಸಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಪರಿಶ್ರಮದಿಂದ ಓದಿದರೆ ಹಬ್ಬದಂತೆ ಸಂಭ್ರಮ ಪಡಬಹುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದರೆ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬಹುದು ಎಂದು ಬಸವಾನಂದ ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಕಲ್ಲಪ್ಪ ಚಿಂಚಲಿ ಹೇಳಿದರು.

ಶ್ರೀ ಬಸವಾನಂದ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ಮಾತನಾಡಿದರು. ಫಲಿತಾಂಶ ಸುಧಾರಣೆಗೆ ಹಾಕಿಕೊಂಡ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಜೀವನದ ಅತ್ಯುನ್ನತ ಘಟ್ಟವಾದ ಎಸ್ಸಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಪರಿಶ್ರಮದಿಂದ ಓದಿದರೆ ಹಬ್ಬದಂತೆ ಸಂಭ್ರಮ ಪಡಬಹುದು ಎಂದು ಹೇಳಿದರು

ವಿಜ್ಞಾನ ಶಿಕ್ಷಕಿಯಾದ ವಿ.ಎ. ಕಾಗಿ ಮಾತನಾಡಿ, ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದ್ದು, ಹೊರಗಿನ ಪ್ರಪಂಚದ ಆಸೆ ಆಮಿಷಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ವಿದ್ಯಾರ್ಥಿಗಳು ಅದನ್ನ ಕಡಿಮೆ ಮಾಡಿ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಓದುವುದನ್ನು ರೂಡಿಸಿಕೊಂಡರೆ ಯಶಸ್ಸು ಶತಸಿದ್ಧ ಎಂದು ಹೇಳಿದರು.

ಸಭೆಯಲ್ಲಿ ಶಾಲೆಯ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳಳ ತಾಯಂದಿರು ಉಪಸ್ಥಿತರಿದ್ದರು. ಶಿಕ್ಷಕರಾದ ಸಿ.ವಿ. ಹುಣಶ್ಯಾಳ್ ನಿರೂಪಿಸಿದರು ದೈಹಿಕ ಶಿಕ್ಷಕರಾದ ಎಸ್‌.ಡಿ. ಕಾಂಬ್ಳೆಕರ್ ವಂದಿಸಿದರು.