ಗಣೇಶೋತ್ಸವವನ್ನು ಸರಕಾರದ ನಿಯಮಾನುಸಾರ ಶಿಸ್ತಿನಿಂದ ಸಂಘಟಿಸಿ ಯಾವುದೇ ವಿವಾದಕ್ಕೆ ಆಸ್ಪದ ನೀಡದೇ ಶಾಂತಿ, ಸೌಹಾರ್ದಯಿಂದ ಆಚರಿಸಬೇಕು.
ಕನ್ನಡಪ್ರಭ ವಾರ್ತೆ ಡಂಬಳ
ಗಣೇಶೋತ್ಸವವನ್ನು ಸರಕಾರದ ನಿಯಮಾನುಸಾರ ಶಿಸ್ತಿನಿಂದ ಸಂಘಟಿಸಿ ಯಾವುದೇ ವಿವಾದಕ್ಕೆ ಆಸ್ಪದ ನೀಡದೇ ಶಾಂತಿ, ಸೌಹಾರ್ದಯಿಂದ ಆಚರಿಸಬೇಕು. ಹಬ್ಬದ ನೆಪದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಮುಂಡರಗಿ ಸಿಪಿಐ ಅಯ್ಯನಗೌಡ ಪಾಟೀಲ ಹೇಳಿದರು.ಡಂಬಳ ಗ್ರಾಮದ ಪೊಲೀಸ್ ಹೊರಠಾಣೆಯ ಆವರಣದಲ್ಲಿ ಗಣೇಶೋತ್ಸವದ ನಿಮಿತ್ತವಾಗಿ ನಡೆದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು.
ಗಣೇಶೋತ್ಸವ ನಿಮಿತ್ತ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆ, ರಂಗೋಲಿ ಹೀಗೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ. ಪರಿಸರ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಉತ್ತಮ ಆಮ್ಲಜನಕ ನಮ್ಮದಾಗಬೇಕಾದರೆ ಪಟಾಕಿ ಸಿಡಿಮದ್ದುಗಳ ಮೇಲೆ ನಿಯಂತ್ರಣವಿರಲಿ. ಡಿಜೆ ಸೌಂಡ್ ಗಿಂತ ನಮ್ಮ ದೇಶಿಯ ಸಂಸ್ಕೃತಿಯ ಉಳಿಸಿ-ಬೆಳಸುವ ಜಾನಪದ ಕಲೆಗಳಿಗೆ ಆದ್ಯತೆ ನೀಡಿದರೆ ನಮ್ಮ ಗ್ರಾಮೀಣ ಸೋಗಡಿನ ಕಲೆ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.ಗ್ರಾಮದ ಹಲವು ಹಿರಿಯರು ಪವಿತ್ರ ಸ್ಥಳವಾಗಿರುವ ಸ್ಮಶಾನದಲ್ಲಿ ಸರಾಯಿ ಕುಡಿದು ಎಲ್ಲೆಂದರಲ್ಲಿ ಬಾಟಲಿ ಎಸೆಯುತ್ತಿದ್ದು, ಅದನ್ನು ತಡೆಯುವ ಕೆಲಸವಾಗಲಿ. ಗ್ರಾಮದಲ್ಲಿ 20 ಕಡೆಗಳಲ್ಲಿ ಸರಾಯಿ, ಗಾಂಜಾ ಮಾರಾಟ ಮಾಡುತ್ತಿದ್ದು, ಸೂಕ್ತ ಕಾನೂನಿನ ಕ್ರಮಕ್ಕೆ ಮುಂದಾಗಬೇಕು ಎಂದು ಮುಖಂಡರು ಆಗ್ರಹಿಸಿದರು. ನಂತರ ಸಿಪಿಐ ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳಿಗೆ ತುರ್ತಾಗಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಉಪತಹಶಿಲ್ದಾರ ಎಸ್.ಎಸ್. ಬಿಚಾಲಿ, ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ, ಪಿಡಿಒ ಪಾರ್ವತಿ ಹೊಂಬಳ, ಬಿಲ್ ಕಲೇಕ್ಟರ್ ಯಲ್ಲಪ್ಪ ಹಾದಿಮನಿ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ಮಹೇಶ ಬಿಸನಳ್ಳಿ, ಬಶೀರಹಮ್ಮದ ತಾಂಬೋಟಿ, ಪ್ರಕಾಶ ಕೋತಂಬ್ರಿ, ಬಸವಂತಪ್ಪ ಪಟ್ಟಣಶೇಟ್ಟರ, ಶಿವಾನಂದ ಬಂಡಿ, ಉಮೇಶ ಹಾದಿಮನಿ, ಮುತ್ತು ಮಠದ, ಹನಮಂತಪ್ಪ ಚವಡಕಿ, ರಾಚಪ್ಪ ಅಂಗಡಿ, ನವೀನ ಕರದಾನಿ, ಕಾಶಿಮಲಿ ಬೆನಕೊಪ್ಪ, ಮಾಂತೇಶ ಬಂಡಿ, ಸಂತೋಷ ಕೊಳ್ಳಾರ, ಪೋಲಿಸ್ ಸಿಬ್ಬಂದಿಗಳಾದ ಎಸ್.ಎಚ್. ಕಂಚಗಾರ, ಆನಂದ ಲಮಾಣಿ, ಬಾಬುಜಾನ ಕಮ್ಮಾರ, ನಿಂಗಪ್ಪ ಪೂಜಾರ ಇದ್ದರು.