ನರಸಿಂಹರಾಜಪುರ: ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿ ದುಂದು ವೆಚ್ಚ ಮಾಡುವುದಕ್ಕಿಂತ ಹುಟ್ಟು ಹಬ್ಬ ಗಳನ್ನು ಸಾಮಾಜಿಕ ಕಾರ್ಯ ಮಾಡುವ ಮೂಲಕ ಆಚರಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಕರೆ ನೀಡಿದರು.

ನರಸಿಂಹರಾಜಪುರ: ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿ ದುಂದು ವೆಚ್ಚ ಮಾಡುವುದಕ್ಕಿಂತ ಹುಟ್ಟು ಹಬ್ಬ ಗಳನ್ನು ಸಾಮಾಜಿಕ ಕಾರ್ಯ ಮಾಡುವ ಮೂಲಕ ಆಚರಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಕರೆ ನೀಡಿದರು.

ಗುರುವಾರ ಪಟ್ಟಣದ ಸುಂಕದ ಕಟ್ಟೆಯ ಮೈಪಾನ್ ಫಿಜಿಯಾ ಥೆರಫಿ ಕೇಂದ್ರದ ಆಸ್ಪತ್ರೆ ಆವರಣದಲ್ಲಿ ರೋಟರಿ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಣಿವೆ ನಾಗಚಂದ್ರ ಪ್ರತಿಷ್ಠಾನದಿಂದ ಬೆನ್ನು ಹುರಿ ಸ್ವಾಧೀನ ಕಳೆದುಕೊಂಡ ಇಂದಿರಾ ನಗರ ಸಂಜಯ್ ಅವರಿಗೆ ₹72 ಸಾವಿರ ವೆಚ್ಚದ ವಿದ್ಯುತ್ ಚಾಲಿತ ವ್ಹೀಲ್ ಚೇರ್ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಾನ ಮಾಡುವುದರಿಂದ ದಾನ ನೀಡಿದವರಿಗೆ ಆತ್ಮತೃಪ್ತಿ ಸಿಗಲಿದೆ. ಕಳೆದ ವರ್ಷ ನನ್ನ ಹುಟ್ಟುಹಬ್ಬದಂದು ಮತ್ತೀಮರ ಆಶ್ರಮದ ಅನಾಥರಿಗೆ ಆಹಾರ ಕಿಟ್ ನೀಡಿದ್ದೆ ಎಂದು ನೆನಪಿಸಿಕೊಂಡರು.

ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಟಿ.ವಿ.ವಿಜಯ್ ಮಾತನಾಡಿ, ಈ ವರ್ಷ ರೋಟರಿ ಕ್ಲಬ್ ಹಲವಾರು ಸಾಮಾಜಿಕ ಕಾರ್ಯದ ಮೂಲಕ ರೋಟರಿ ಸಂಸ್ಥೆ ಹೆಸರು ಶಾಶ್ವತವಾಗಿ ಉಳಿಯು ವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ನ ಇನ್ನೊಬ್ಬ ಪೂರ್ವಾಧ್ಯಕ್ಷ ಎಸ್‌.ಎಸ್. ಶಾಂತಕುಮಾರ್ ಮಾತನಾಡಿ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೆನ್ನು ಹುರಿ ಸ್ವಾಧೀನ ಕಳೆದುಕೊಂಡು ನಡೆಯಲು ಸಾಧ್ಯವಾಗದೆ ಇರುವ ವ್ಯಕ್ತಿಗೆ ವ್ಹೀಲ್ ಚೇರ್ ನೀಡಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಅತಿಥಿಗಳಾಗಿ ಪುಷ್ಪ ಆಸ್ಪತ್ರೆ ವೈದ್ಯೆ ಡಾ.ಮೇರಿ ಸೂಸನ್ನ, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್, ಪುಷ್ಪ ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಪ್ರಿನ್ಸಿ, ಮೈಪಾನ್ ಫಿಜಿಯಾ ಥೆರಫಿ ಆಸ್ಪತ್ರೆಯ ವೈದ್ಯ ಡಾ.ನಿಖಿಲ್ ಇದ್ದರು.