ನವಲಗುಂದ: ಪಟ್ಟಣದ ಜನತೆ ಮುಂಬರುವ ಹೋಳಿ ಹುಣ್ಣಿಮೆ ಹಾಗೂ ರಮಜಾನ್‌ ಹಬ್ಬವನ್ನು ಎರಡೂ ಧರ್ಮದ ಸಮಾಜ ಬಾಂಧವರು ಸೇರಿ ಸೌಹಾರ್ದಯುತವಾಗಿ ಆಚರಿಸುವಂತೆ ತಹಸೀಲ್ದಾರ್‌ ಸುಧೀರ್‌ ಸಾಹುಕಾರ ಮನವಿ ಮಾಡಿದರು.

ಅವರು ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಹೊಳಿಹುಣ್ಣಿಮೆ ಹಾಗೂ ರಮಜಾನ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು.

ರಾಮಲಿಂಗ ಕಾಮದೇವರು ರಾಜ್ಯ ಹೊರರಾಜ್ಯಗಳಲ್ಲಿಯೂ ಪ್ರಖ್ಯಾತಿ ಹೊಂದಿ ನವಲಗುಂದದ ಕೀರ್ತಿ ಹೆಚ್ಚುತ್ತಿದ್ದು. ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ, ಸ್ಥಳೀಯ ಭಕ್ತಾದಿಗಳು ತಾವಾಗಲಿ, ತಮ್ಮ ಸಂಬಂಧಿಕರನ್ನಾಗಲಿ ರಾತ್ರಿ ಅಥವಾ ಬೆಳಗಿನ ಜಾವ ದೇವರ ದರ್ಶನಕ್ಕೆ ಕಳುಹಿಸಿದರೆ ಹೊರಗಿನಿಂದ ಬರುವ ಭಕ್ತರಿಗೆ ಅನುಕೂಲವಾಗುತ್ತದೆ ಎಂದರು.

ಸಿಪಿಐ ರವಿಕುಮಾರ ಕಪ್ಪತ್ತನವರ ಮಾತನಾಡಿ, ಕಾಮದೇವರು ಮೆರವಣಿಗೆಯ ಸಮಯವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಈ ಬಾರಿಯ ರಂಜಾನ್ ಹಾಗೂ ಹೋಳಿಹುಣ್ಣಿಮೆ ಹಬ್ಬವನ್ನು ಸೌಹಾರ್ದದಿಂದ ಆಚರಿಸುವ ಮೂಲಕ ಭಾವೈಕ್ಯತೆಯ ತಾಲೂಕನ್ನು ಮಾಡೋಣ ಎಂದರು.

ಗ್ರಾಮಸ್ಥರು ಕಾಮದೇವರ ಮೆರವಣಿಗೆ ಆಗುವುದರಿಂದ ಪಟ್ಟಣದಲ್ಲಿಯ ಗುಂಡಿಗಳನ್ನು ಮುಚ್ಚಬೇಕು ಎಂದು ಪುರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.


ಪಿಎಸ್‌ಐ ಜನಾರ್ಧನ ಭಟ್ರಳ್ಳಿ, ವಿವಿಧ ಇಲಾಖೆ ಅಧಿಕಾರಿಗಳಾದ ಹನಮಂತ ರೋಗಿ, ಸುಭಾಸ ಮಂಗಳಿ, ಅಕ್ಕಮಹಾದೇವಿ ಬಣಕಾರ, ಹಿರಿಯರಾದ ರಾಯನಗೌಡ ಪಾಟೀಲ, ಶಿವಾನಂದ ಕೊಳಲಿನ, ಹುಲಿಗೆಪ್ಪ ಭೋವಿ, ಸಹದೇವಪ್ಪ ಗುಳೇದ, ಬಸವರಾಜ ಹರಿವಾಳದ, ಯಲ್ಲಪ್ಪ ಭೋವಿ, ಶರಣಪ್ಪ ಹಕ್ಕರಕಿ, ಅಬ್ಬಾಸಲಿ ದೇವರಿಡು, ಈಶ್ವರ ಲಕ್ಕುಂಡಿ, ಶಂಕರ ಸುಬೇದಾರಮಠ, ಚಂದ್ರು ಕೋಟಗಿ, ಶಿವು ನಾಯ್ಕ, ಸಂತೋಷ ನಾವಳ್ಳಿ, ರವಿ ತೋಟದ ಸೇರಿ ಕಾಮಣ್ಣ ಸಮಿತಿಯ ನೂರಾರು ಹಿರಿಯರು ಪಾಲ್ಗೊಂಡಿದ್ದರು.