ಹೋಳಿ, ರಂಜಾನ್ ಶಾಂತಿಯುತವಾಗಿ ಆಚರಿಸಿ: ಸಿಪಿಐ ಸಂಜೀವ

| Published : Mar 09 2025, 01:48 AM IST

ಹೋಳಿ, ರಂಜಾನ್ ಶಾಂತಿಯುತವಾಗಿ ಆಚರಿಸಿ: ಸಿಪಿಐ ಸಂಜೀವ
Share this Article
  • FB
  • TW
  • Linkdin
  • Email

ಸಾರಾಂಶ

ಹೋಳಿಹಬ್ಬ ಹಾಗೂ ರಂಜಾನ್ ಇರುವುದರಿಂದ ಯಾರೂ ಶಾಂತಿ ಭಂಗವಾಗದಂತೆ ನಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಹೋಳಿಹಬ್ಬ ಹಾಗೂ ರಂಜಾನ್ ಇರುವುದರಿಂದ ಯಾರೂ ಶಾಂತಿ ಭಂಗವಾಗದಂತೆ ನಡೆದುಕೊಳ್ಳಬೇಕು. ಹಿರಿಯರು ಇದಕ್ಕೆ ಅವಕಾಶ ನೀಡದೇ ಶಾಂತಿಯಿಂದ ಹಬ್ಬ ಆಚರಿಸುವಂತೆ ನೋಡಿಕೊಳ್ಳಬೇಕು ಎಂದು ಸಿಪಿಐ ಸಂಜೀವ ಬಳಿಗಾರ ಹೇಳಿದರು.

ನಗರದ ಪೊಲೀಸ್ ಠಾಣೆಯಲ್ಲಿ ಹೋಳಿಹಬ್ಬ ಹಾಗೂ ರಂಜಾನ್ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಸಮುದಾಯದ ಪ್ರತಿಯೊಬ್ಬರೂ ಎರಡೂ ಹಬ್ಬಗಳನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ಹಬ್ಬದ ಆಚರಣೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಎರಡೂ ಕೋಮಿನವರು ಹಬ್ಬಗಳನ್ನು ಆಚರಿಸಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಿರಿಯರು ಸಹಕರಿಸಬೇಕು ಎಂದರು. ಇನ್ನೂ ಬಲವಂತದಿಂದ ಯಾರಿಗೂ ಬಣ್ಣ ಹಾಕಬೇಡಿ, ವಿದ್ಯಾರ್ಥಿಗಳ ಪರೀಕ್ಷೆ ಇರುವುದರಿಂದ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನೈಸರ್ಗಿಕ ಬಣ್ಣ ಮಾತ್ರ ಬಳಸಿ, ಹಾನಿಕಾರಕ ಬಣ್ಣ ಬಳಸಬೇಡಿ ಎಂದು ಹೇಳಿದರು.

ಪಿಎಸ್‌ಐ ಕಿರಣ ಸತ್ತಿಗೇರಿ ಮಾತನಾಡಿ, ಎರಡೂ ಹಬ್ಬಗಳಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಾವು ಮೊದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದರು.

ಈ ವೇಳೆ ಪಿಎಸ್‌ಐ ಮಧು.ಎಲ್, ಎಎಸ್ಐ ಮುತ್ತಪ್ಪ ಕೊಲೂರ, ಲಕ್ಷ್ಮಣ ದುದ್ದಣಗಿ, ಪುರಸಭೆ ಅಧಿಕಾರಿಯಾದ ಸಿ.ಎಸ್‌.ಮಠಪತಿ, ಪ್ರಮುಖರಾದ ಮುಸ್ತಾಕ ಚಿಕ್ಕೋಡಿ, ಶಿವಾನಂದ ಅಂಗಡಿ, ರಾಜು ಚಮಕೇರಿ, ಚನಬಸು ಯರಗಟ್ಟಿ, ಲಕ್ಕಪ್ಪ ಭಜಂತ್ರಿ, ಅರ್ಜುನ ದೊಡಮನಿ, ಶಂಕರಗೌಡ ಪಾಟೀಲ, ರಮೇಶ ಕೇಸರಗೋಪ್ಪ, ಭೀಮಶಿ ಗೌಂಡಿ, ಜಮೀರ ಯಕ್ಸಂಬಿ, ವಿಷ್ಟುಗೌಡ ಪಾಟೀಲ, ನಜೀರ ಅತ್ತಾರ, ಶ್ರೀಶೈಲ ದೊಡಮನಿ, ಮಹೇಶ ಜಿಡ್ಡಿಮನಿ, ರಾಘು ಗರಘಟಗಿ, ಮಾರುತಿ ಕರೋಶಿ, ದಾದಾ ಸನದಿ, ಮುತ್ತಪ್ಪ ದಲಾಲ, ಹನಮಂತ ಬಂಡಿವಡ್ಡರ, ರಸೂಲ್ ಸಾಂಗ್ಲೀಕರ, ದಾದಾಪೀರ ಪೆಂಡಾರಿ, ಚನ್ನಪ್ಪ ಪಟ್ಟಣಶೆಟ್ಟಿ, ಶಿವಾನಂದ ಹುಣಸ್ಯಾಳ, ಶಿವನಗೌಡ ಪಾಟೀಲ, ಉದಯ ಪವಾರ, ಚೇತನ ಬಂಡಿವಡ್ಡರ, ಶಶಿಕಾಂತ ಮುಕ್ಕೆನ್ನವರ, ಹನಮಂತ ಮಾದರ, ಲಗಮಣ್ಣಾ ಮರಾಪುರ, ಹೆಸ್ಕಾಂ ಅಧಿಕಾರಿ ಕೃಷ್ಟಾ ಡೊಂಬರ, ಪೊಲೀಸ್ ಸಿಬ್ಬಂದಿ ಜಗದೀಶ ಪಾಟೀಲ, ಮಂಜುನಾಥ ಸಣ್ಣಕ್ಕಿ, ವೈ.ವೈ.ಗಚ್ಚನ್ನವರ ಭಾಗಿಯಾಗಿದ್ದರು.