ಪ್ರತಿ ದಿನವೂ ಕನ್ನಡ ರಾಜ್ಯೋತ್ಸವ ಆಚರಿಸಿ

| Published : Nov 12 2025, 01:15 AM IST

ಪ್ರತಿ ದಿನವೂ ಕನ್ನಡ ರಾಜ್ಯೋತ್ಸವ ಆಚರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಲ್ಲಿ ಮಾತ್ರವಲ್ಲ ಪ್ರತಿ ದಿನವೂ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಕನ್ನಡ ತಾಯಿ ಭಾಷೆ. ಕನ್ನಡ ನಾಡಿನಲ್ಲಿ ವಾಸಿಸುವ ಇತರೆ ಭಾಷೆಯವರು ಎಲ್ಲರೂ ತಮ್ಮ ಮನೆಗಳಲ್ಲಿ ಕನ್ನಡವನ್ನು ಮಾತನಾಡಿದರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ ಎಂದು ನಗರಸಭಾ ಸದಸ್ಯ ಎಸ್.ಎಲ್.ರಂಗನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಲ್ಲಿ ಮಾತ್ರವಲ್ಲ ಪ್ರತಿ ದಿನವೂ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಕನ್ನಡ ತಾಯಿ ಭಾಷೆ. ಕನ್ನಡ ನಾಡಿನಲ್ಲಿ ವಾಸಿಸುವ ಇತರೆ ಭಾಷೆಯವರು ಎಲ್ಲರೂ ತಮ್ಮ ಮನೆಗಳಲ್ಲಿ ಕನ್ನಡವನ್ನು ಮಾತನಾಡಿದರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ ಎಂದು ನಗರಸಭಾ ಸದಸ್ಯ ಎಸ್.ಎಲ್.ರಂಗನಾಥ್ ಹೇಳಿದರು.

ಅವರು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಚಲನಚಿತ್ರ ನಟ ದಿವಂಗತ ಶಂಕರ್ ನಾಗ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಂಬೇಡ್ಕರ್ ಸರ್ಕಲ್ ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬೇರೆ ಭಾಷೆ ಮಾತನಾಡುವವರ ಜೊತೆ ಕನ್ನಡಿಗರು ಕನ್ನಡ ಮಾತನಾಡಿದರೆ ಸಾಕು ಕನ್ನಡ ಉಳಿಯುತ್ತದೆ. ಆಟೋ ಚಾಲಕರು ಹೆಚ್ಚಿನದಾಗಿ ಬಡವರಾಗಿದ್ದು ಮಳೆ ಚಳಿ ಗಾಳಿ ಲೆಕ್ಕಿಸದೆ ಸೇವೆ ಮಾಡುತ್ತಾರೆ. ಆದ್ದರಿಂದ ಆಟೋ ಚಾಲಕರಿಗೆ ನಗರಸಭೆಯಿಂದ ನಿವೇಶನ ನೀಡಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.

ಕನಕ ಬ್ಯಾಂಕ್ ನಿರ್ದೇಶಕರಾದ ಕಡೆಮನೆ ಎಸ್ ರವಿಕುಮಾರ್ ಮಾತನಾಡಿ, ಕನ್ನಡ ಅನ್ನದ ಭಾಷೆ, ನಮ್ಮ ಅಸ್ಮಿತೆ, ನಮ್ಮ ಹೃದಯ ನಾವೆಲ್ಲರೂ ಕನ್ನಡದಲ್ಲಿಯೇ ವ್ಯವಹರಿಸಿ ಜೀವನ ನಡೆಸುವ ಭಾಷೆ. ಕನ್ನಡಿಗರು ಹೋರಾಟ ಮಾಡಬೇಡಿ ಕನ್ನಡ ಮಾತನಾಡಿ ಸಾಕು ಕನ್ನಡ ಅದಾಗಿಯೇ ಬೆಳೆಯುತ್ತದೆ. ಕನ್ನಡ ಭಾಷೆ ಶ್ರೀಮಂತವಾಗಿದೆ. ನಾಡಿನ ಪ್ರತಿಯೊಬ್ಬರು ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಂಡು ಕನ್ನಡವನ್ನು ಅಂತರಂಗದ ಭಾಷೆ, ಕರುಳಿನ ಭಾಷೆಯನ್ನಾಗಿ ಸ್ವೀಕರಿಸಿ, ಶಿಕ್ಷಣ, ಆಡಳಿತದಲ್ಲಿ ಪ್ರಧಾನವಾಗಿ ಬೆಳೆಸಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿಯಲು-ಬೆಳೆಯಲು ಸಾಧ್ಯ ಎಂದರು.

ಯುವ ಮುಖಂಡ ಬರಗೂರು ಯುವರಾಜ್ ಮಾತನಾಡಿ, ಕನ್ನಡ ಭಾಷೆ ಕನ್ನಡ ನೆಲ ನಾವೆಲ್ಲರೂ ಕಾಪಾಡಬೇಕು. ಕನ್ನಡಿಗರು ವ್ಯವಹಾರದಲ್ಲಿ ಸ್ಥಳೀಯರಿಗೆ ಮಾನ್ಯತೆ ಕೊಟ್ಟರೆ ನಮ್ಮವರು ಅರ್ಥಿಕವಾಗಿ ಸದೃಢರಾಗುತ್ತಾರೆ. ಇದರಿಂದ ಕನ್ನಡಿಗರೂ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹರ್ಷದ್ ಅವರನ್ನು ಅಭಿನಂದಿಸಲಾಯಿತು. ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಸೋಮಶೇಖರ್, ಜಗದೀಶ್, ರಂಗನಾಥ್, ಯಲ್ಲಪ್ಪ, ಶ್ರೀಧರ, ಹರೀಶ್, ಭೂತೇಶ್, ರಂಗ, ರಂಗನಾಥ್ ಜಂಗ್ಲಿ, ಪುನೀತ್, ಗುಡ್ಡದಹಟ್ಟಿ ರಂಗಪ್ಪ, ಅಭಿ, ಸಿದ್ದಪ್ಪ, ಮಾರೇಶ್, ಕೋದಂಡರಾಮ್, ಲೋಕೇಶ್, ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.