ಸಾರಾಂಶ
ಗುರುಮಠಕಲ್: ಕಾನೂನು ಪಾಲಿಸುವ ಮೂಲಕ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಆಚರಿಸಬೇಕು ಎಂದು ಪೊಲೀಸ್ ಇನ್ಸ್ ಪೆಕ್ಟರ್ ದೇವಿಂದ್ರಪ್ಪ ಧೂಳಖೇಡ ಹೇಳಿದರು.ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬ ಆಚರಣೆಗೆ ಸರ್ಕಾರ ಹಲವು ನಿಯಮ ಜಾರಿಗೊಳಿಸಿದ್ದು, ತಪ್ಪದೇ ನಿಯಮಗಳನ್ನು ಪಾಲಿಸಬೇಕು. ಗಣೇಶ ಮಂಡಳಿ ವಿವಾದಿತ ಸ್ಥಳದಲ್ಲಿ ಗಣೇಶ ವಿಗ್ರಹ ಸ್ಥಾಪಿಸುವುದು ಬೇಡ ಎಂದರು. ವಿದ್ಯುತ್ ಪ್ರಸರಣಾಧಿಕಾರಿ ನರಸಿಂಹಲು ಯಾದವ್ ಮಾತನಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿದ್ಯುತ್ ಅವಘಡಗಳಿಂದ ಎಚ್ಚರಿಕೆ ವಹಿಸಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ಇಲಾಖೆಗಳಿಂದ ಪಡೆಯುವ ಅನುಮತಿ, ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದರು. ಭೀಮಶಪ್ಪ ಗುಡಸೆ ಮಾತನಾಡಿದರು. ತಹಸೀಲ್ದಾರ್ ದುಂಡಪ್ಪ ಕೋಮರ, ಪರಿಸರ ಅಭಿಯಂತರ ಪ್ರಶಾಂತ, ಜಿ. ತಮ್ಮಣ್ಣ, ಸೈಯದ್ ಅಕ್ಬರ್, ಲಾಲಪ್ಪ ತಲಾರಿ, ಜಗದೀಶ ಮೇಂಗಜಿ, ನವಾಜ್ ಹಫೀಜ್, ಚಾಂದಪಾಶ ಇದ್ದರು.
----ಫೋಟೊ: 6ವೈಡಿಆರ್4: ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ದೇವಿಂದ್ರಪ್ಪ ಧೂಳಖೇಡ ಮಾತನಾಡಿದರು.
------