ಸಾರಾಂಶ
ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆ ಎಂದರೆ ಎಲ್ಲರಿಗೂ ಸಂತಸದ ವಿಷಯ. ಆದರೆ, ಪ್ರತಿಯೊಬ್ಬರು ಗಣೇಶೋತ್ಸವನ್ನು ಶಾಂತಿಯಿಂದ ಆಚರಣೆ ಮಾಡಬೇಕು ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆ ಎಂದರೆ ಎಲ್ಲರಿಗೂ ಸಂತಸದ ವಿಷಯ. ಆದರೆ, ಪ್ರತಿಯೊಬ್ಬರು ಗಣೇಶೋತ್ಸವನ್ನು ಶಾಂತಿಯಿಂದ ಆಚರಣೆ ಮಾಡಬೇಕು ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ತಿಳಿಸಿದರು.ನಗರದ ಶಹರ ಪೊಲೀಸ್ ಠಾಣೆಯಲ್ಲಿ ಕರೆದ ಗಣೇಶ ಚತುರ್ಥಿಯ ಶಾಂತತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇಶಾದ್ಯಂತ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಅದು ಭಯ ಭಕ್ತಿಯಿಂದ ನಡೆಯ ಬೇಕು ಮತ್ತು ಸರಕಾರದ ನಿಯಮ ಏನಿದೆಯೋ ಅದರಂತ್ತೆ ನಡೆಯಬೇಕು ಎಂದು. ವಿಸರ್ಜನೆಯನ್ನು ರಾತ್ರಿ 10 ಗಂಟೆಯ ಒಳಗೆ ಮುಗಿಸಬೇಕು ಮತ್ತು ಡಿಜೆ ಹಾಕಬಾರದು. ಬಜನೆ ಮುಖಾಂತರ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ಸಾರ್ವಜನಿಕರ ಪರವಾಗಿ ಬಸವರಾಜ ಮಠದ, ಮಹೇಶ ಪಾಟೀಲ, ಸಂತೋಷ ಪೂಜಾರಿ ಹಾಗೂ ಇತರರು ಮಾತನಾಡಿದರು. ವೇದಿಕೆಯ ಮೇಲೆ ಶಹರ ಠಾಣೆಯ ಪಿಎಸ್‌ಐ ಶಹಜವಾನ ನಾಯಕ ಮೇಡಂ ಹಾಗೂ ಉಪ ತಹಸೀಲ್ದಾರ್ ಗಡ್ಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹೋಲಗೇರಿ ಇತರರು ಇದ್ದರು.