ಸಾರಾಂಶ
ತುರ್ವಿಹಾಳ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ತುರ್ವಿಹಾಳ: ಕೋಪ್ಪಳ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಜಯಬಾರಿಸಿದ್ದು, ಕೈ ಕಾರ್ಯಕರ್ತರು ಪಟ್ಟಣದ ಬಸವ ವೃತ್ತ ಹಾಗೂ ಕನಕದಾಸ ವೃತ್ತದಲ್ಲಿ ಪಟಾಕಿ ಸಿಡಿಸಿ ಕುಣಿದು ಸಂಭ್ರಮಿಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರದ ಐದು ಗ್ಯಾರೆಂಟಿಗಳು ಕೈಹಿಡಿದಿದ್ದಾವೆ ಎಂದರು.ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಮುನ್ನಡೆಯಿದ್ದ ವೇಳೆಯಲ್ಲೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ವಿವಿಧ ಬೀದಿಗಳಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೈಕ್ ರ್ಯಾಲಿ ನಡೆಸಿದರು.
ಈ ವೇಳೆ ಮುಖಂಡರಾದ ಬಾಪುಗೌಡ ದೇವರಮನಿ, ಸಿರಾಜ್ ಪಾಷಾ ದಳಪತಿ, ಶಾಸಕರ ಪುತ್ರ ಸತೀಶ ಗೌಡ, ಮಲ್ಲಪ್ಪ ಕಾನಿಹಾಳ, ಶಾಮಿದ್ ಅಲಿ ಅರಬ್, ಫಕೀರಪ್ಪ ಭಂಗಿ, ಅರವಿಂದ್ ರೆಡ್ಡಿ, ಶಿವಪುತ್ರಪ್ಪ ಕೆಂಗೇರಿ, ಭಿಮದಾಸ ದಾಸರ್, ಮೈಮುದ್ ಅತ್ತಾರ್, ಅಮರೇಶ ನಾಗರಬೆಂಚಿ, ಯುನುಸ್ ಖಾಜಿ, ಮರಿಯಪ್ಪ ನಾಮದ, ಬಿರಪ್ಪಕಲ್ಗೂಡಿ ಸೇರಿ ಅನೇಕ ಯುವಕರು ಪಾಲ್ಗೊಂಡಿದ್ದರು.