ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾಗಲಿ

| Published : Nov 05 2024, 12:40 AM IST

ಸಾರಾಂಶ

8 ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಭಾವನೆಗಳ ವಿನಿಮಯಕ್ಕೆ ಸಾಧನವಾದ ಭಾಷೆ ಮತ್ತು ಭಾಷಾಭಿಮಾನ ಉಸಿರಿನಷ್ಟೇ ಸಹಜವಾಗಬೇಕು. ಕರ್ನಾಟಕದ ಮಾತೃ ಭಾಷೆಯಾದ ಕನ್ನಡದ ಬಗ್ಗೆ ಭಾಷಣಕ್ಕಿಂತ ಆಚರಣೆ ಮುಖ್ಯ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯದರ್ಶನ್ ಅಭಿಪ್ರಾಯಪಟ್ಟರು.ನಗರದ ಎಂ.ಜಿ. ರಸ್ತೆಯ ಸಿ.ಎಸ್.ಐ ಬಾಲಕಿಯರ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಎಸ್. ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಣ್ಣು ಹಾಗೂ ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, 8 ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾಗಬೇಕು. ಅನ್ಯ ಭಾಷೆಯ ವ್ಯಾಮೋಹದಿಂದ ಹೊರಬಂದು ನಮ್ಮತನವನ್ನು ರೂಢಿಸಿಕೊಂಡಾಗ ಮಾತೃ ಇಂತಹ ಆಚರಣೆಗೆ ಅರ್ಥ ಬರಲು ಸಾಧ್ಯ ಎಂದರು.

ನಮ್ಮ ನೆಲ– ಜಲ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಬೇಕು. ಕನ್ನಡ ಮನೆ ಮನ ಭಾಷೆಯಾಗಬೇಕು ಎಂದರು. ಈ ವೇಳೆ ಬೋರ್ಡಿಂಗ್ ಹೋಮ್ ನ ಗೀತಾ, ವೀರಭದ್ರಸ್ವಾಮಿ, ಮಹೇಶ್, ಮಹಾದೇವ್, ಮಹದೇವಸ್ವಾಮಿ, ಎಸ್.ಪಿ. ವಿನಯ್ ದಾಸ್, ಅಕ್ಷಯ್ ಪ್ರಿಯದರ್ಶನ್, ಹರ್ಷಿತ್ ಎಸ್. ನಾಗೇಶ್ ಮೊದಲಾದವರು ಇದ್ದರು.