ಸಾರಾಂಶ
-ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗಣೇಶ ಚತುರ್ಥಿ, ಈದ್ ಮಿಲಾದ್ ಪ್ರಯುಕ್ತ ಕರೆದಿದ್ದ ಶಾಂತಿ ಸಭೆ
-----ಕನ್ನಡಪ್ರಭ ವಾರ್ತೆ ಹಿರಿಯೂರು: ಯಾವುದೇ ಧರ್ಮದ ಆಚರಣೆಯಾಗಲಿ ಸಮಾಜಕ್ಕೆ ಒಳಿತಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಡಿವೈಎಸ್ ಪಿ ಚೈತ್ರಾ ಹೇಳಿದರು. ನಗರಠಾಣೆಯಲ್ಲಿ ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕರೆದಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ.
ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ನಿಯಮಾನುಸಾರ ಇಲಾಖೆಗಳ ಅಧಿಕೃತ ಅನುಮತಿ ಪಡೆದು ಪ್ರತಿಷ್ಟಾಪನೆ ಮಾಡಬೇಕು.ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಿತಿ ಸದಸ್ಯರ ವಿವರ. ಡಿಜೆಗೆ ಅವಕಾಶವಿಲ್ಲ. ಅನ್ನಸಂತರ್ಪಣೆ ಮಾಡುವಾಗ ಜಾಗೃತರವಾಗಿ. ನೆಹರೂ ಮೈದಾನದಲ್ಲಿನ ಎಕ್ಷಿಬಿಷನ್ ನ ಯಂತ್ರಗಳ ಸಾಮರ್ಥ್ಯ ಪರೀಕ್ಷೆ ಮತ್ತು ಸುರಕ್ಷತೆಯ ಬಗ್ಗೆ ಎಚ್ಚರವಿರಬೇಕು. ಹಿರಿಯೂರು ನಗರದಲ್ಲಿ ನಡೆಯುವ ಗೌರಿ ಗಣೇಶ, ಯುಗಾದಿ, ಬಕ್ರೀದ್, ಈದ್ ಮಿಲಾದ್, ದೀಪಾವಳಿ, ರಂಜಾನ್ ಹಬ್ಬಗಳಿಗೆ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಯೋಚಿಸುವುದಿಲ್ಲ. ಶಾಂತಿಯುತ ಜನರಾಗಿದ್ದರೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ.ಸಿಪಿಐ ರಾಘವೇಂದ್ರ ಕಾಂಡಿಕೇಟ್ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳಿಗೆ ಪೊಲೀಸ್ ಇಲಾಖೆ ಬಂದೋಬಸ್ತ್‌ನಲ್ಲಿ ಆಯಾ ಸಮಿತಿಗಳ ಸದಸ್ಯರು ಸ್ವಯಂ ಸೇವಕರನ್ನು ನೇಮಿಸಿ ಯಾವುದೇ ರೀತಿಯ ಶಾಂತಿ ಭಂಗವಾಗದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆ ಕಣ್ಗಾವಲು ಎಲ್ಲಾ ಕಡೆಯೂ ಪ್ರತಿಭಟನೆ ನಡೆಸಬೇಕು. ದ್ವೇಷದ ಘೋಷಣೆಗಳನ್ನು ಕೂಗುವುದು, ದ್ವೇಷದ ಫ್ಲೆಕ್ಸ್, ಬಾವುಟ ಹಾಕುವುದು ಕಂಡರೆ ಕಾನೂನು ರೀತಿಯ ಕ್ರಮಗಳು ನಡೆಯುತ್ತವೆ.
....(ಬಾಕ್ಸ್) ....ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಷ್ಟಾಪಿಸಿನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ನಗರವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಆಸ್ಪದವಾಗದಂತೆ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗುವಂತಹ ಸ್ಥಳಗಳಲ್ಲಿ ಪ್ರತಿಷ್ಟಾಪನೆ ಮಾಡಲು ಅವಕಾಶ ನಿರಾಕರಣೆ ಮಾಡಲಾಗುವುದು. ಸೆ.1 ರಿಂದ ಏಕಗವಾಕ್ಷಿ ರೀತಿಯಲ್ಲಿ ನಗರಸಭೆಗೆ ಅನುಮತಿ ನೀಡಲಾಗಿದೆ. ನಗರಸಭೆ ಪ್ರಭಾರಿ ಪೌರಾಯುಕ್ತ ರಾಜು, ನಗರಸಭೆ ಅಧ್ಯಕ್ಷೆ ಅಂಬಿಕಾ ಆರಾಧ್ಯ, ಮುಖಂಡರಾದ ಕೇಶವಮೂರ್ತಿ, ಅಸ್ಗರ್ ಅಹಮದ್, ಚೇತನ್, ಮುನೀರ್ ಮುಲ್ಲಾ, ಪ್ರಶಾಂತ್, ಪಿ.ಐ ಶಶಿಕಲಾ, ಸಿಬ್ಬಂದಿ ರಾಘವರೆಡ್ಡಿ, ಹನುಮಂತಪ್ಪ, ನಳಿನ, ರವಿ ಇದ್ದರು.
-----ಫೋಟೊ: 1,2
ನಗರಠಾಣೆಯಲ್ಲಿ ಗಣೇಶನ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕರೆದಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಡಿವೈಎಸ್ ಪಿ ಚೈತ್ರಾ ಮಾತನಾಡಿದರು.;Resize=(128,128))
;Resize=(128,128))