ಸಾರಾಂಶ
ಈ ವೇಳೆ ಉಚಿತ ಸೇವೆ ಸಲ್ಲಿಸುವ ದಾದಿಯರ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಕನ್ನಡ ಪುಸ್ತಕಗಳನ್ನು ಹಂಚಲಾಯಿತು. ಹನುಕ್ ಮ್ಯೂಸಿಕ್ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಿಕ್ಷಕರ ಬಡಾವಣೆಯ ರಾಧಾಕೃಷ್ಣ ಉದ್ಯಾನವನದಲ್ಲಿ ನೆರೆದಿದ್ದ ನೂರಾರು ಕನ್ನಡ ಅಭಿಮಾನಿಗಳ ಸಮ್ಮುಖದಲ್ಲಿ ಕವಿಗಳು, ಸಾಹಿತಿಗಳು, ರಚಿಸಿದ ಕನ್ನಡ ಹಾಡುಗಳನ್ನು ಗಾಯಕರು ಹಾಡಿ ಸಂಭ್ರಮಿಸಿದರು.ಈ ವೇಳೆ ಉಚಿತ ಸೇವೆ ಸಲ್ಲಿಸುವ ದಾದಿಯರ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಕನ್ನಡ ಪುಸ್ತಕಗಳನ್ನು ಹಂಚಲಾಯಿತು. ಹನುಕ್ ಮ್ಯೂಸಿಕ್ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮ ಆಯೋಜಿಸಿದ್ದ ಪ್ರಚಾರಕ ಮೈಕ್ ಪ್ರಕಾಶ್ ಮಾತನಾಡಿ, ಸಂತೆಯಲ್ಲಿ ಭಾಗವಹಿಸಿ ಚಿಂತೆ ಮರೆಯಿರಿ ಬೇರೆ ಭಾಷೆಯಲ್ಲಿ ಮಾತನಾಡುವವರಿಗೆ ಕನ್ನಡದಲ್ಲಿ ಉತ್ತರ ಕೊಡಿ. ಪುಟ್ಟ ಮಕ್ಕಳಿಗೆ ಡ್ಯಾಡಿ, ಮಮ್ಮಿ ಎನ್ನುವ ಬದಲು ಅಪ್ಪ- ಅಮ್ಮ ಎಂದು ಹೇಳಿಕೊಡಿ ಎಂದು ಕಿವಿಮಾತು ಹೇಳಿದರು.ಮುಖ್ಯ ಅತಿಥಿಯಾಗಿದ್ದ ರಾಧಾಕೃಷ್ಣ ಅಯ್ಯರ್ ಅವರನ್ನು ಗೌರವಿಸಲಾಯಿತು. ರಮೇಶಣ್ಣ, ರುಕ್ಮಿಣಿಯಮ್ಮ ಪೊಲೀಸ್ ಬಾಬಣ್ಣ, ವೇದವಾಸಗನ್ ಬಡಾವಣೆಯ ಹಿರಿಯರು, ಕಿರಿಯರು ಇದ್ದರು.