ಹಲಗೂರು:
ನಾಡಕಚೇರಿಯಲ್ಲಿ ಕೆಂಪೇಗೌಡರ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಉಪ ತಹಸೀಲ್ದಾರ್ ಕೆ.ನಟರಾಜು ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬೆಂದಕಾಳೂರನ್ನು ಸುಂದರ ಬೆಂಗಳೂರನ್ನಾಗಿ ಪರಿವರ್ತಿಸಿದ ಕೆಂಪೇಗೌಡರು ಕೆರೆಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ದೀನದಲಿತರಿಗೆ ಬಡವರಿಗೆ ಸಾಕಷ್ಟು ಅವರ ಏಳಿಗೆಗಾಗಿ ಶ್ರಮಿಸಿದ್ದರು ಎಂದರು.
ನಂದಿಪುರದ ಕುಮಾರ್ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಿಜಯನಗರದಲ್ಲಿ ರಸ್ತೆ ಬದಿಗಳಲ್ಲಿ ಮುತ್ತು ರತ್ನಗಳನ್ನು ವ್ಯಾಪಾರ ಮಾಡುತ್ತಿದ್ದನ್ನು ಕಂಡು ಅಂತಹ ರಾಜ್ಯವನ್ನು ತಾವು ಕಟ್ಟಬೇಕೆಂದು ಕನಸು ಕಂಡು ಬೆಂಗಳೂರಿನಲ್ಲಿ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಮಾರುಕಟ್ಟೆ ಸ್ಥಾಪಿಸಿದರು ಎಂದರು.ಈ ಸಂದರ್ಭದಲ್ಲಿ ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಗಳಾದ ಜೆ.ಲತಾ, ಸಿದ್ದರಾಯ ಮೌಳಿ, ನರಸಪ್ಪ, ಗ್ರಾಮ ಸಹಾಯಕರಾದ ಜೆ.ಎಸ್. ಶಿವಪ್ರಕಾಶ್, ಮಹದೇವಸ್ವಾಮಿ, ಪುಟ್ಟಸ್ವಾಮಿ, ಜೆ.ಎಸ್.ಅನಿಲ್ ಕುಮಾರ್, ನವೀನ, ಗ್ರಾಪಂ ಮಾಜಿ ಸದಸ್ಯ ಸುರೇಂದ್ರ, ಎನ್. ಕೆ ಕುಮಾರ್ ಸೇರಿದಂತೆ ಇತರರು ಇದ್ದರು.
ಕೆಂಪೇಗೌಡರು ಆದರ್ಶ ವ್ಯಕ್ತಿ: ಎ.ಟಿ.ಶ್ರೀನಿವಾಸ್
ಹಲಗೂರು:ಕೆಂಪೇಗೌಡರು ಆದರ್ಶ ವ್ಯಕ್ತಿಯಾಗಿ, ಸಾಮಂತ ದೊರೆಯಾಗಿ ಬೆಂಗಳೂರನ್ನು ವಾಣಿಜ್ಯ ಕೇಂದ್ರವಾಗಿ ರೂಪಿಸಿದರು ಎಂದು ಕಸಾಪ ಮಾಜಿ ಅಧ್ಯಕ್ಷ ಎ.ಟಿ.ಶ್ರೀನಿವಾಸ ತಿಳಿಸಿದರು.
ಹಲಗೂರು ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣಾ ಸಮಿತಿಯಿಂದ ಕೆಂಪೇಗೌಡರ 517ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಮಾತನಾಡಿ, ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ವಿವಿಧ ಪೇಟೆಗಳನ್ನು ನಿರ್ಮಿಸಿ ಬೆಂಗಳೂರು ನಗರವನ್ನು ವಾಣಿಜ್ಯ ಕೇಂದ್ರವಾಗಿ ಬೆಳೆಯುವಂತೆ ಮಾಡಿದರು. ಅದರ ಫಲವಾಗಿ ಇಂದು ಬೆಂಗಳೂರು ವಿಶ್ವಪ್ರಸಿದ್ಧ ನಗರವಾಗಿ ಹೊರಹೊಮ್ಮಿದೆ ಎಂದರು.ನಂದಿಪುರ ಕುಮಾರ್ ಮಾತನಾಡಿ, ಬೆಂಗಳೂರು ಇಂದು ಸಿಲಿಕಾನ್ ವ್ಯಾಲಿ, ಗಾರ್ಡನ್ ಸಿಟಿ ಹಾಗೂ ಐಟಿ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಜಗತ್ತಿನ ಭೂಪಟದಲ್ಲಿ ಪ್ರಖ್ಯಾತಿ ಗಳಿಸಲು ಕೆಂಪೇಗೌಡರೇ ಕಾರಣ ಎಂದರು.ಗ್ರಾಪಂ ಮಾಜಿ ಸದಸ್ಯ ಸುರೇಂದ್ರ ಮಾತನಾಡಿ, ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಅವರು ತೋರಿಸಿದ ಮಾರ್ಗದಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.ಗಣ್ಯರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಜನರಿಗೆ ಲಘು ಉಪಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿವಕುಮಾರ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಲಿಂಗಪಟ್ಟಣ ಗಂಗಾಧರ್, ಗೊಲ್ಲರಹಳ್ಳಿ ನಾಗೇಶ್, ಕರೀಗೌಡ, ಗ್ರಾಪಂ ಮಾಜಿ ಸದಸ್ಯರಾದ ಆನಂದ್, ಶಿವಲಿಂಗು, ರವೀಶ್, ವಂದರಿ ಬಾಬು, ಶಿವರಾಜು, ಜಗದೀಶ್, ಚಂದನ್, ಮಹದೇವ , ಗಂಗಾಧರ, ಆನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.