ಸಾರಾಂಶ
ಪಾನಕ, ಮಜ್ಜಿಗೆ ಕೋಸಂಬರಿ ವಿತರಣೆ । ರಾಮ,ಸೀತೆ ಲಕ್ಷ್ಮಣ ಹಾಗೂ ಆಂಜನೇಯನ ವೇಷ ಧರಿಸಿದ್ದ ಮಕ್ಕಳು
ಕನ್ನಡಪ್ರಭ ವಾರ್ತೆ ಹನೂರುಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನದ ಕಾರ್ಯಕ್ರಮದ ಶುಭದಿನದ ಪ್ರಯುಕ್ತ ಪಟ್ಟಣದ ರಾಮಮಂದಿರ ಹಾಗೂ ವಿವಿಧಡೆ ಧಾರ್ಮಿಕವಾಗಿ ಸಂಭ್ರಮ ಸಡಗರದಿಂದ ಪೂಜಾ ಕಾರ್ಯಕ್ರಮಗಳು ನಡೆಯಿತು.
ಹನೂರು ಪಟ್ಟಣದ ರಾಮಮಂದಿರದಲ್ಲಿ ಸೋಮವಾರ ಬೆಳಗ್ಗೆ ಧಾರ್ಮಿಕವಾಗಿ ರಾಮ ಸೀತೆ ಲಕ್ಷ್ಮಣ ಹಾಗೂ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಗುರು ಪ್ರಾರ್ಥನೆ ಕಂಕಣ ಧಾರಣೆ, ಬಿಂಬಾರಾಧನೆ, ಕಳಸರಾದನೆ, ನವಗ್ರಹ ಹೋಮ, ವಾಸ್ತುಹೋಮ, ಗಣ ಹೋಮ, ರಾಮ ತಾರಕ, ಪ್ರಧಾನ ಹೋಮ, ಪೂರ್ಣಹುತಿ, ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ಸೋಮವಾರ ಅಯೋಧ್ಯೆಯಲ್ಲಿ ರಾಮನಿಗೆ ಪ್ರಾಣ ಪ್ರತಿಷ್ಠಾಪನ ವೇಳೆಯಲ್ಲಿ ಪಟ್ಟಣದಲ್ಲಿಯೂ ಸಹ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿತು. ವಿವಿಧ ವೇಷಧಾರಿಗಳು :ಪಟ್ಟಣದ ರಾಮಮಂದಿರ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಯುಕ್ತ ಮಕ್ಕಳು ರಾಮಾ ಲಕ್ಷ್ಮಣ ಹಾಗೂ ರಾಮನ ಬಂಟ ಆಂಜನೇಯ ವೇಷ ಧರಿಸಿ ಮಕ್ಕಳು ಗಮನ ಸೆಳೆದರು. ಇದೆ ವೇಳೆಯಲ್ಲಿ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ವಿವಿಧಡೆ ರಾಮ ಜಪ: ಪಟ್ಟಣದ ಬಸ್ ನಿಲ್ದಾಣ ಹಾಗೂ ಬಂಡಳ್ಳಿ ರಸ್ತೆ ಗುಪ್ತ ಮೆಡಿಕಲ್ ಮುಂಭಾಗ ಹಾಗೂ ಆರ್ ಎಸ್ ದೊಡ್ಡಿ ಬಸ್ ನಿಲ್ದಾಣದ ಮುಂಭಾಗದಲ್ಲಿ ರಾಮ ಪ್ರಾಣಪ್ರತಿಷ್ಠಾನ ಕಾರ್ಯಕ್ರಮದ ಪ್ರಯುಕ್ತ ಒಳಗೊಂಡಂತೆ ತಾಲೂಕಿನ ವಿವಿಧಡೆ ರಾಮಜಪ ಹಮ್ಮಿಕೊಳ್ಳುವ ಮೂಲಕ ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಆರ್ ಎಸ್ ದೊಡ್ಡಿ ಜನಶ್ರೀ ಟ್ರಸ್ಟ್ ಕಚೇರಿ ಹಾಗೂ ರಾಮಪುರ ಮಲೆ ಮಹದೇಶ್ವರ ಬೆಟ್ಟ ಶಾಖೆಯ ಬಂಡಳ್ಳಿ ಲೊಕ್ಕನಹಳ್ಳಿ ವಿವಿಧ ಹೋಬಳಿ ಕೇಂದ್ರಗಳಲ್ಲಿಯೂ ಸಹ ಶ್ರೀ ರಾಮ ಸೀತೆ ಮಾತೆ ಹನುಮ ಭಾವಚಿತ್ರಗಳನ್ನು ಒಳಗೊಂಡಂತೆ ಬೃಹತ್ ಕಟೌಟ್ ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿತ್ತು. ಪಾನಕ, ಮಜ್ಜಿಗೆ ವಿತರಣೆ: ರಾಮಪ್ರಾಣ ಪ್ರತಿಷ್ಠಾಪನ ವೇಳೆಯಲ್ಲಿ ನಡೆಯುತ್ತಿರುವ ದೇಶಾದ್ಯಂತ ಅಯೋಧ್ಯ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ವಿವಿಧಡೆ ರಾಮನ ಭಕ್ತ ವೃಂದ ಅನ್ನ ಸಂಪರ್ಕ ಪಾನಕ ಮಜ್ಜಿಗೆ ಕೋಸುಂಬರಿ ವಿತರಣೆ ಮಾಡಿದರು ಹಬ್ಬದ ವಾತಾವರಣ: ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ರಾಮ ಮಂದಿರ ಬಡಾವಣೆ, ಬಂಡಳ್ಳಿ ರಸ್ತೆ ಹಾಗೂ ಮಲೆ ಮಾದೇಶ್ವರ ಬೆಟ್ಟ ಕೊಳ್ಳೇಗಾಲ ಮುಖ್ಯರಸ್ತೆ ವಿವಿಧಡೆ ಅಯೋಧ್ಯೆ ರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮದ ಅಂಗವಾಗಿ ರಾಮನ ಭಕ್ತರು ಬಂಟಿಂಗ್ಸ್ ಬ್ಯಾನರ್ಸ್ ಗಳನ್ನು ಹಾಕುವ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೃಹತ್ ಪರದೆ ಅಳವಡಿಕೆ:ಪಟ್ಟಣದ ರಾಮಮಂದಿರ ದೇವಾಲಯದ ಹಿಂಭಾಗದಲ್ಲಿರುವ ಮಹಲ್‌ನಲ್ಲಿ ಬೃಹತ್ ಪರದೆ ಅಳವಡಿಸಿ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ನಡೆಯುವ ಪೂಜಾ ಕಾರ್ಯಕ್ರಮವನ್ನು ಪರದೆಯ ಮೇಲೆ ನೋಡಲು ಬೃಹತ್ ಪರದೆಯನ್ನು ಅಳವಡಿಸಲಾಗಿತ್ತು.ಬಿಗಿ ಬಂದೋಬಸ್ತ್: ಅಯೋಧ್ಯ ರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯಲ್ಲಿ ವಿವಿಧಡೆ ರಾಮನ ಭಕ್ತರು ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸುವುದರ ಮೂಲಕ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿ ಸೂಕ್ತ ರಕ್ಷಣೆ ನೀಡಲಾಗಿತ್ತು