12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಬಸವಾದಿ ಶರಣರ, ತತ್ವ ಆದರ್ಶಗಳನ್ನು ಮಾಚಯ್ಯನವರು ನಿಷ್ಠೆ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದರು. ಮಡಿವಾಳ ಮಾಚಿದೇವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು ಎಲ್ಲರೂ ಇವರು ನಡೆದ ಬಂದ ದಾರಿಯಲ್ಲಿ ಸಾಗಬೇಕು.
ಪಾಂಡವಪುರ:
ತಾಲೂಕಿನ ಎಂ.ಬೆಟ್ಟಹಳ್ಳಿ ಶ್ರೀಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಡಿವಾಳ ಮಾಚಿದೇವರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಡಿವಾಳ ಸಮುದಾಯದಿಂದ ನಡೆದ ಜಯಂತಿಯಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್.ರಾಮಚಂದ್ರ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಅಧ್ಯಕ್ಷ ಎಚ್.ಎನ್.ರಾಮಚಂದ್ರ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಬಸವಾದಿ ಶರಣರ, ತತ್ವ ಆದರ್ಶಗಳನ್ನು ಮಾಚಯ್ಯನವರು ನಿಷ್ಠೆ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದರು. ಮಡಿವಾಳ ಮಾಚಿದೇವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು ಎಲ್ಲರೂ ಇವರು ನಡೆದ ಬಂದ ದಾರಿಯಲ್ಲಿ ಸಾಗಬೇಕು ಎಂದರು.ತಾಲೂಕು ಮಟ್ಟದಲ್ಲಿ ಫೆ.12ರಂದು ಆಚರಣೆ ಮಾಡಲು ತಾಲೂಕು ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಆಹ್ವಾನಿಸಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿ, ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ ಮತ್ತು ತಂಡದ ಸದಸ್ಯರು, ತಾಲೂಕಿನಲ್ಲಿ ಸಂಚರಿಸಿ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣದ ಅವರ ಆಸ್ಥಾನದಲ್ಲಿ ಇದ್ದಂತಹ ಮಡಿವಾಳ ಮಾಚಿದೇವರು ಬಸವಾದಿ ಶರಣರು ರಚಿಸಿ ವಚನಗಳನ್ನು ರಕ್ಷಿಸುವ ಜತೆಗೆ ವಿಶ್ವಾಸಿಗರಾಗಿದ್ದರು, ಇಂತಹ ನಾಯಕರು ನಮಗೆಲ್ಲ ಆದರ್ಶ ವ್ಯಕ್ತಿಗಳಾಗಲಿದ್ದಾರೆ ಎಂದರು.ಇದೇ ವೇಳೆ ಸಾಹಿತಿ ದೇವಪ್ಪ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಕಾರ್‍ಯಕ್ರದಲ್ಲಿ ಕೃಷ್ಣ, ಜಗದೀಶ್, ಗಿರಿಶೆಟ್ಟಿ, ವೆಂಕಟೇಶ್, ಗೋಪಾಲ್, ಲೋಕೇಶ್, ದೇವರಾಜ್, ಶಂಭುಲಿಂಗಪ್ಪ, ನಾಗೇಶ್, ಮಹದೇವಸ್ವಾಮಿ, ಪ್ರಮೀಳಾ, ಅನಿತಾ, ರಾಜಮ್ಮ, ಪ್ರೇಮ, ಅಜಯ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಇಂದು ವಿದ್ಯುತ್ ವ್ಯತ್ಯಯಹಲಗೂರು: ಸಮೀಪದ ಹಾಡ್ಲಿ ಬಳಿ ಇರುವ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.9 ರಂದು ಲಿಂಕ್ ಲೈನ್ ಕಾಮಗಾರಿ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಡ್ಲಿ, ಅಗಸನಪುರ, ಜೋಗಿಪುರ, ಮೇಗಳಾಪುರ, ಕಂಸಾಗರ, ಲಿಂಗಣಾಪುರ, ನಡಕಲಪುರ, ನಂಜೇಗೌಡನದೊಡ್ಡಿ, ಗ್ರಾಮದೇವತೆಪುರ, ಕೋಡಿಪುರ, ಹುಲ್ಲಹಳ್ಳಿ, ಹುಲ್ಲಾಗಾಲ, ಚೆನ್ನೀಪುರ, ಬಸವನಪುರ, ಡಿ.ಹಲಸಹಳ್ಳಿ, ಧನಗೂರು, ಕೂನನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಮಳವಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.