ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಐತಿಹಾಸಿಕ ಜಯಗಳಿಸುವುದರೊಂದಿಗೆ ಕಾಂಗ್ರೆಸ್ ಮತ್ತಿತರ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ನಟ-ರಾಜಕಾರಣಿ ಸಿ.ಜೋಸೆಫ್ ವಿಜಯ್ ಅವರು ಮೇ 10ರಂದು ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಈ ಐತಿಹಾಸಿಕ ಕ್ಷಣವನ್ನು ಸಿದ್ದಾಪುರದಲ್ಲೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮದಿಂದ ಆಚರಿಸಿದರು.

ಮಡಿಕೇರಿ: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಐತಿಹಾಸಿಕ ಜಯಗಳಿಸುವುದರೊಂದಿಗೆ ಕಾಂಗ್ರೆಸ್ ಮತ್ತಿತರ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ನಟ-ರಾಜಕಾರಣಿ ಸಿ.ಜೋಸೆಫ್ ವಿಜಯ್ ಅವರು ಮೇ 10ರಂದು ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಈ ಐತಿಹಾಸಿಕ ಕ್ಷಣವನ್ನು ಸಿದ್ದಾಪುರದಲ್ಲೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭ ವಿಜಯ್ ಅವರ ಅಭಿಮಾನಿ ಹಾಗೂ ಜೈ ಭೀಮ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರವಿ ಹಾಗೂ ಉಪಾಧ್ಯಕ್ಷ ಮಹದೇವ, ಡಿಸಿಸಿ ಸದಸ್ಯ ಶೂಕುರ್ ಪ್ರಮುಖರಾದ ಪ್ರಭು, ಜಗ್ಗು, ರವಿ, ಟೋನಿ, ಮಂಜ, ಜಂಬೂಲಿ, ಜಾಫು, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.