ಸಾರಾಂಶ
ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅಭಿಮತ । ನವರಾತ್ರಿ ಉತ್ಸವಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ದಸರಾ ಸಮಿತಿ ನಗರದಲ್ಲಿ ಹಮ್ಮಿಕೊಂಡಿದ್ದ 9 ದಿನಗಳ ನವರಾತ್ರಿ ಉತ್ಸವದಲ್ಲಿ ವೇದಘೋಷಗಳೊಂದಿಗೆ ಶಮೀಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕೆ.ಆರ್.ಬಡಾವಣೆಯ ಶ್ರೀ ರಾಮ ಮಂದಿರ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಯವರು ದುರ್ಗಾ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್ ಅವರು ಪೂಜೆ ಸಲ್ಲಿಸಿ ಬನ್ನಿ ಮರ ಕಡಿದರು. ನಂತರ ಬಂದಿದ್ದ ಭಕ್ತರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ಸ್ನೇಹ, ಸೌಹಾರ್ದತೆ ಮೆರೆದರು.ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಸಂಪ್ರದಾಯ, ಪರಂಪರೆ ಸಾರುವ ನಾಡಹಬ್ಬ ದಸರಾ ವಿಶ್ವವಿಖ್ಯಾತವಾಗಿದೆ. ತುಮಕೂರು ದಸರಾ ಸಮಿತಿ 9 ದಿನಗಳ ಕಾಲ ಯಾವುದೇ ಚ್ಯುತಿ ಬಾರದಂತೆ ಸಂಪ್ರದಾಯಬದ್ಧವಾಗಿ ನವರಾತ್ರಿ ಉತ್ಸವ ಆಚರಿಸಿದೆ. ಪ್ರತಿದಿನ ನಮ್ಮ ಕಲೆ, ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಮೆಚ್ಚುಗೆ ಗಳಿಸಿದೆ ಎಂದರು.ಹಬ್ಬಗಳ ಆಚರಣೆಗಳಿಂದ ನಮ್ಮ ಆತ್ಮಾವಲೋಕಲವಾಗಬೇಕಾಗಿದೆ. ನಮ್ಮ ಅಂತರಂಗ, ಬಹಿರಂಗಗಳನ್ನು ಶುದ್ಧಗೊಳಿಸಿಕೊಳ್ಳುವುದು. ನಮ್ಮ ಆಚರಣೆ, ಆಲೋಚನೆ, ಕ್ರಿಯೆಯನ್ನು ಯಾವ ರೀತಿ ಉತ್ತಮಗೊಳಿಸಿಕೊಳ್ಳಬೇಕು ಎಂಬ ಅವಲೋಕನ ಮಾಡಿಕೊಳ್ಳಬೇಕು. ನಮ್ಮಲ್ಲಿನ ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಹೆಚ್ಚು ಮಾಡಿಕೊಳ್ಳಲು ಹಬ್ಬದ ಆಚರಣೆಗಳ ಆಶಯವಾಗಿದೆ ಎಂದು ಹೇಳಿದರು.ನಂತರ ಶ್ರೀ ರಾಮನ ಪ್ರಾಕಾರೋತ್ಸವ ನಡೆಯಿತು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಚಿಂತಕ ಎಂ.ಕೆ.ನಾಗರಾಜ ರಾವ್, ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು.ನಂತರ ನಡೆದ ಸಮಾರಂಭದಲ್ಲಿ ವಿವಿಧ ಸಮಾಜಗಳ ಮುಖಂಡರನ್ನು ಗೌರವಿಸಲಾಯಿತು. ವೀರಶೈವ ಸಮಾಜದ ಟಿ.ಬಿ.ಶೇಖರ್, ಒಕ್ಕಲಿಗ ಸಮಾಜದ ನರಸಿಂಹಮೂರ್ತಿ, ಕುರುಬ ಸಮಾಜದ ಟಿ.ಆರ್.ಸುರೇಶ್, ಆರ್ಯವೈಶ್ಯ ಸಮಾಜದ ಆರ್.ಎಲ್.ರಮೇಶ್‌ಬಾಬು, ಬ್ರಾಹ್ಮಣ ಸಮಾಜದ ಚಂದ್ರಶೇಖರ್, ಅಗ್ನಿವಂಶ ಕ್ಷತ್ರಿಯ ಸಮಾಜದ ಕುಂಭಯ್ಯ, ವಾಲ್ಮೀಕಿ ಸಮಾಜದ ಪುರುಷೋತ್ತಮ್, ಛಲವಾದಿ ಸಮಾಜದ ನಾಗೇಶ್, ವಿಶ್ವಕರ್ಮ ಸಮಾಜದ ನಾಗರಾಜು, ಸವಿತಾ ಸಮಾಜದ ಮಂಜೇಶ್, ಉಪ್ಪಾರ ಸಮಾಜದ ಮಂಜುನಾಥ್, ನೇಕಾರರ ಸಮಾಜದ ರಾಮಕೃಷ್ಣಯ್ಯ, ಈಡಿಗ ಸಮಾಜದ ವೇದಮೂರ್ತಿ, ಯಾದವ ಸಮಾಜದ ಕರಿಯಪ್ಪ, ಬಲಿಜ ಸಮಾಜದ ಆಂಜನಪ್ಪ, ಬೆಸ್ತರ ಸಮಾಜದ ಯೋಗಾನಂದ್, ಭೋವಿ ಸಮಾಜದ ಓಂಕಾರ್, ಮರಾಠ ಸಮಾಜದ ಜನಾರ್ದನರಾವ್, ಜೈನ ಸಮಾಜದ ಉತ್ತಮ್‌ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ಈ ವರ್ಷದ ನವರಾತ್ರಿ ಉತ್ಸವ ಸಮಾರೋಪಗೊಂಡಿತು. ಬೆಳಿಗ್ಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ನವರಾತ್ರಿ ಕಾರ್ಯಕ್ರಮದಲ್ಲಿ ಪ್ರತಿದಿನ ಲಲಿತ ಸಹಸ್ರನಾಮ ಪಠಿಸಿದ ಮಹಿಳೆಯರಿಗೆ ಗೌರವಾರ್ಪಣೆ ಮಾಡಲಾಯಿತು.ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್, ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಹನುಮಂತರಾಜು, ಕೆ.ಶಂಕರ್, ಸಹಕಾರ್ಯದರ್ಶಿ ಕೆ.ಪರಶುರಾಮಯ್ಯ, ಮುಖಂಡರಾದ ಎಚ್.ಎಂರವೀಶಯ್ಯ ಮತ್ತಿತರ ಮುಖಂಡರು ಭಾಗವಹಿಸಿದ್ದರು.