ಕನ್ನಡಪ್ರಭ ವಾರ್ತೆ ಕೊಲ್ಹಾರ ಭಾರತದ ಜನಗಣತಿ ಡಿಜಿಟಿಲೀಕರಣವಾಗಿದ್ದು, ಅದನ್ನು ಮೊಬೈಲ್ ಮೂಲಕ ಸುಲಭವಾಗಿ ಮಾಡಬಹುದು. ಯಾರು ಸಹ ಗೊಂದಲಕ್ಕೆ ಎಡೆಮಾಡಿಕೊಳ್ಳದೇ ಹಂತದ ಮನೆಪಟ್ಟಿ ಹಾಗೂ ಮನೆ ಗಣತಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಭಾರತದ ಜನಗಣತಿ ಡಿಜಿಟಿಲೀಕರಣವಾಗಿದ್ದು, ಅದನ್ನು ಮೊಬೈಲ್ ಮೂಲಕ ಸುಲಭವಾಗಿ ಮಾಡಬಹುದು. ಯಾರು ಸಹ ಗೊಂದಲಕ್ಕೆ ಎಡೆಮಾಡಿಕೊಳ್ಳದೇ ಹಂತದ ಮನೆಪಟ್ಟಿ ಹಾಗೂ ಮನೆ ಗಣತಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು.

ಪಟ್ಟಣದ ಸರ್ಕಾರಿ ಪಾಲ್ ಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಪಪಂ ಸಹಯೋಗದಲ್ಲಿ ಆಯೋಜಿಸಿದ್ದ ಗಣತಿದಾರರು ಹಾಗೂ ಗಣತಿದಾರರ ಮೇಲ್ವಿಚಾರಕರ 3 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

2021ರಲ್ಲಿ ಆಗಬೇಕಾದ ರಾಷ್ಟ್ರೀಯ ಜನಗಣತಿ ಕೋವಿಡ್ ಕಾರಣದಿಂದ ತೊಂದರೆಯಾಗಿ ಈ ವರ್ಷದಿಂದ ಮತ್ತೆ ಗಣತಿ ಪ್ರಾರಂಭವಾಗಿದೆ. ಗಣತಿಯು ಏ.16 ರಿಂದ ಮೇ 15ರವರೆಗೆ ನಡೆಯುತ್ತದೆ. ಈ ವೇಳೆ ಯಾರು ಗಣತಿ ಬಗ್ಗೆ ಭಯ ಪಡದೆ ಎಲ್ಲರೂ ಹುರುಪಿನಿಂದ ಗಣತಿ ಮಾಡಿ ಮನೆ ಪಟ್ಟಿ ಹಾಗೂ ಏರಿಯಾ ಮ್ಯಾಪ್ ನ್ನು ಸಿದ್ಧಪಡಿಸಿಕೊಳ್ಳಬೇಕು. ಇಡೀ ಜಿಲ್ಲೆಯಲ್ಲಿ ಕೊಲ್ಹಾರ ತಾಲೂಕಿನ ಗಣತಿ ಕಾರ್ಯ ಮೊದಲು ಬೇಗ ಮುಗಿಬೇಕು. ಅದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು. ಗಣತಿದಾರರಿಗೆ ಗಣತಿ ಸಂದರ್ಭದಲ್ಲಿ ಏನಾದರೂ ಸಮಸ್ಯೆ, ತೊಂದರೆಗಳಾದರೆ ಗಣತಿ ಮೇಲ್ವಿಚಾರಕರಿಗೆ, ಚಾರ್ಜ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ ಮಾತನಾಡಿದರು, ಜನಗಣತಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದರ ಮೂಲಕ ದೇಶದಲ್ಲಿ ಯೋಜನೆಗಳು, ಸೌಲಭ್ಯಗಳು ಹಾಗೂ ಜನಸಂಖ್ಯೆ ಆಧಾರದ ಮೇಲೆ ವಿಧಾನ ಸಭೆ, ಲೋಕಸಭೆ ಕ್ಷೇತ್ರಗಳು ಮರುವಿಂಗಡಣೆ ಆಗಲಿವೆ ಕಾರಣ ಎಲ್ಲ ಗಣತಿದಾರರು ಮನೆ ಮನೆಗೆ ತೆರಳಿ ನಿಖರವಾಗಿ ಮನೆ ಪಟ್ಟಿ ಮಾಡಿ ಸರಿಯಾದ ಮಾಹಿತಿ ಕೊಡಬೇಕು ಎಂದರು.

ಈ ವೇಳೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಿನ್ಸಿಪಾಲ್ ಎಂ.ಬಿ.ಗರಸಂಗಿ ಅತಿಥಿಯಾಗಿ ಭಾಗವಹಿಸಿದ್ದರು.

ಮಾಸ್ಟರ್ ಟ್ರೈನರ್ ಶಿಕ್ಷಕ ಸಂಗಮೇಶ ಕಮತಗಿ ಹಾಗೂ ಕಂಠಿ ಯವರು ಗಣತಿ ತರಬೇತಿ ನೀಡಿದರು. ಕೊಲ್ಹಾರ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಗಣತಿ ತರಬೇತಿಯು ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜರುಗಿತು.