ಸಾರಾಂಶ
ಹರಪನಹಳ್ಳಿ: ಜನರ ಆರ್ಥಿಕ ಸ್ಥಿತಿ, ಗತಿ ತಿಳಿದು ಅದಕ್ಕೆ ತಕ್ಕ ಹಾಗೆ ಸೌಲಭ್ಯ ಒದಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಆರಂಭಿಸಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಅವರು ಪಟ್ಟಣದ ಕುರುಬರಗೇರಿಯಲ್ಲಿ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಸೋಮವಾರ ಸುದ್ದಿಗೊರರೊಂದಿಗೆ ಮಾತನಾಡಿದರು. ಇಂತಹ ಗಣತಿ ಕಾರ್ಯ ಹೊಸದೇನಲ್ಲ, ಮೊದಲಿನಿಂದಲೂ ಮಾಡಲಾಗುತ್ತದೆ, ಕೇಂದ್ರ ಸರ್ಕಾರ ಸಹ ಮಾಡುತ್ತಿದೆ ಎಂದು ನುಡಿದರು.ಗಣಿತಿದಾರರು ಮನೆ ಬಾಗಿಲಿಗೆ ಆಗಮಿಸಿದಾಗ ಸಾರ್ವಜನಿಕರು ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ವೀರಶೈವ ಲಿಂಗಾಯುತರು ಜಾತಿ ಕಲಂನಲ್ಲಿ ವೀರಶೈವ ಲಿಂಗಾಯುತ ಎಂತಲೂ ಉಪ ಜಾತಿ ಕಲಂ ನಲ್ಲಿ ಅವರವರ ಒಳಪಂಗಡ ಜಾತಿಗಳನ್ನು ಬರೆಸಿ ಎಂದು ತಿಳಿಸಿದರು.ಧರ್ಮದ ಬಗ್ಗೆ ಹೇಳುವಷ್ಟು ನಾನು ದೊಡ್ಡವಳಲ್ಲ. ನಾನು ವೈಯಕ್ತಿಕವಾಗಿ ಹಿಂದೂಗಳು ಎಂದು ಹೇಳಲು ಇಷ್ಟ ಪಡುತ್ತೇನೆ. ಆದರೆ ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧಳಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಬೀಮಪ್ಪ ಮಾಹಿತಿ ನೀಡಿ ಹರಪನಹಳ್ಳಿ ತಾಲೂಕಿನಲ್ಲಿ 670 ಬ್ಲಾಕ್ ಗಳು ಇವೆ. 74322 ಕುಟುಂಬಗಳು ಇದ್ದು, 670 ಗಣತಿದಾರರು ಹಾಗೂ 34 ಮೇಲ್ವಿಚಾರಕರು 11 ಜನ ಮಾಸ್ಟರ್ ಟ್ರೈನರ್ ಗಳು ಗಣತಿ ಕಾರ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.ತಹಶೀಲ್ದಾರ ಬಿ.ವಿ.ಗಿರೀಶಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ತಾಪಂ ಇಒ ಚಂದ್ರಶೇಖರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭೀಮಪ್ಪ, ಪುರಸಭಾ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಸಾಹೇಬ್, ಉದ್ದಾರ ಗಣೇಶ, ಲಾಟಿದಾದಾಪೀರ, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಉದಯಶಂಕರ, ಬಿಸಿಎಂ ಕಚೇರಿ ಯ ಸಿದ್ದೇಶ , ಸಿಆರ್ ಪಿ.ಎಚ್.ಸಲೀಂ, ಗಣತಿದಾರಿರ್ತಿ ಸಾವಿತ್ರಮ್ಮ, ಶಿಕ್ಷಕ ಶಿವಶಂಕರ, ಮತ್ತೂರು ಬಸವರಾಜ ಇತರರು ಉಪಸ್ಥಿತರಿದ್ದರು.
ಹರಪನಹಳ್ಳಿ ಪಟ್ಟಣದ ಕುರುಬರಗೇರಿಯಲ್ಲಿ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸೋಮವಾರ ಚಾಲನೆ ನೀಡಿದರು.