- ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಟೂಲ್‌ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಶ್ವಕರ್ಮ ಯೋಜನೆಯಡಿ ವಿವಿಧ ಕುಶಲಕರ್ಮಿ ವೃತ್ತಿ ಬಾಂಧವರಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಕಲ್ಪಿಸಲು ಕೇಂದ್ರ‍್ರ ಸರ್ಕಾರ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ₹12 ಸಾವಿರ ಕೋಟಿ ಆರ್ಥಿಕ ಭದ್ರತೆ ನೀಡುವ ಮೂಲಕ ಮೂಲ ಕಸುಬನ್ನು ಪ್ರೋತ್ಸಾಹಿಸುತ್ತಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ನಗರದ ದಂಟರಮಕ್ಕಿ ಸಮೀಪ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಟೂಲ್‌ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 2023ನೇ ಸಾಲಿನಿಂದ ಆರಂಭಗೊಂಡು ವಿಶ್ವಕರ್ಮ ಯೋಜನೆ ಐದು ವರ್ಷಗಳ ಯೋಜನೆ ಆಗಿದೆ. ಈ ಯೋಜನೆಯಡಿ ಬಡಗಿ, ಕಮ್ಮಾರ, ಚಮ್ಮಾರ, ಶಿಂಪಿಗ, ದೋಬಿ, ಕ್ಷೌರಿಕ, ಹೂಮಾಲೆ ತಯಾರಕರು, ಕುಂಬಾರ ಮುಂತಾದ ವಂಶ ಪಾರಂಪರಿಕ ವೃತ್ತಿಗಳಲ್ಲಿ ಪ್ರತಿ ವರ್ಷ 6 ಲಕ್ಷ ಫಲಾನುಭವಿಗಳಿಗೆ ₹30 ಲಕ್ಷ ಸೌಲಭ್ಯ ಒದಗಿಸುವುದು ಗುರಿಯಾಗಿದೆ.

ದೇಶದಲ್ಲಿ ಕುಶಲಕರ್ಮಿಗಳನ್ನು ಬಲಪಡಿಸುವ ಉದ್ದೇಶದಿಂದ ಅವರ ಕೌಶಲ್ಯ ಹೆಚ್ಚಿಸಲು ಅನುಕೂಲವಾಗುವಂತೆ ಸೂಕ್ತ ತರಬೇತಿ ನೀಡುವುದು. ಶೇ.5 ಬಡ್ಡಿ ದರದಲ್ಲಿ ಮೊದಲ ಹಂತದಲ್ಲಿ ಒಂದು ಲಕ್ಷ ರು.ವರೆಗೆ ಮತ್ತು ಎರಡನೇ ಹಂತದಲ್ಲಿ ಎರಡು ಲಕ್ಷದವರೆಗೆ ವಿವಿಧ ರಾಷ್ಟ್ರೀಯ ಬ್ಯಾಂಕ್ ನಿಂದ ಸಿವಿಲ್ ಆಧರಿಸದೇ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.


ಈ ಯೋಜನೆಯಡಿ ತರಬೇತಿ ಪಡೆದುಕೊಂಡು ಅರ್ಹ ಫಲಾನುಭವಿಗಳಿಗೆ ₹15 ಸಾವಿರ ಮೌ ಲ್ಯದ ಉಚಿತ ಸುಧಾರಿತ ಉಪಕರಣಗಳ ಕಿಟ್ ನೀಡುವುದು, ಡಿಜಿಟಲ್ ವಹಿವಾಟು ನಡೆಸುವಂತೆ ಪ್ರೋತ್ಸಾಹಿಸಲು ಸಹಾಯಧನ ನೀಡುವುದು ಪಿಎಂ ವಿಶ್ವಕರ್ಮ ಯೋಜನೆಯ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.

ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ವಿವಿಧ ವೃತ್ತಿಗಳ ಕುಶಲಕರ್ಮಿಗಳಿಂದ ಇಂದಿಗೆ 50, 066 ಅರ್ಜಿಗಳು ಸ್ವೀಕರಿಸ ಲಾಗಿದೆ. ಮೊದಲ ಹಂತದಲ್ಲಿ 34,727 ಅರ್ಜಿಗಳು ಪರಿಶೀಲಿಸಿದ್ದು ಎರಡನೇ ಹಂತದಲ್ಲಿ11,600 ಅರ್ಜಿಗಳು ಪರಿಶೀಲಿಸಲಾಗಿದೆ. ಮೂರನೇ ಹಂತದಲ್ಲಿ ಬಾಕಿ 7092 ಅರ್ಜಿಗಳು ತರಬೇತಿಗೆ ಅನುಮೋದನೆಗೊಂಡಿರುತ್ತವೆ ಎಂದು ತಿಳಿಸಿದರು.

ವಿಶ್ವಕರ್ಮ ಯೋಜನಾ ಸಮಿತಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆ ವಿಶ್ವಕರ್ಮ ಯೊಜನೆ ಸೌಲಭ್ಯ ಪಡೆದುಕೊಳ್ಳುವಲ್ಲಿ ಮೊದಲ ಸ್ಥಾನ ಪಡೆದಿದೆ. ಅಲ್ಲದೇ ರಾಷ್ಟ್ರೀಯ ಬ್ಯಾಂಕ್‌ಗಳು ಫಲಾನುಭವಿಗಳ ಸಿವಿಲ್‌ನ್ನು ಲೆಕ್ಕಿಸದೇ ಕೇಂದ್ರ ಸರ್ಕಾರದ ಆದೇಶದಂತೆ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಈ ವೇಳೆ ವಿಶ್ವಕರ್ಮ ಯೋಜನಾ ಸಮಿತಿ ಸದಸ್ಯ ಸಂತೋಷ್ ಕೋಟ್ಯಾನ್, ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಂಎಸ್‌ಎಂಇ ಸಹಾಯಕ ಅಧೀಕ್ಷಕ ನಾಗರಾಜ್, ಅಂಚೆ ಕಚೇರಿ ಅಧೀಕ್ಷಕ ಎನ್.ಡಿ.ಶ್ರೀನಾಥ್, ವಿಶ್ವಕರ್ಮ ಜಿಲ್ಲಾ ಸಂಯೋಜಕ ಸಿ.ಎಸ್.ರಾಕೇಶ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು.ಮಾ.13 ರಿಂದ ಮೂರು ದಿನ ವಸ್ತು ಪ್ರದರ್ಶನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪ್ರಧಾನ ಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳವನ್ನು ಮಾ.13 ರಿಂದ 15ರ ವರಗೆ‌ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪಿ.ಎಂ. ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾ ಪಾರ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಒಟ್ಟು 3 ದಿನಗಳ ಕಾಲ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮಾಹಿತಿ ಕಾರ್ಯಾಗಾರ, ಟೂಲ್‌ಕಿಟ್ ಪ್ರದರ್ಶನ ಹಾಗೂ ವ್ಯಾಪಾರ ಮಳಿಗೆಗಳನ್ನು ತೆರೆಯಲಾ ಗುವುದು ಎಂದರು.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಮೂಲ ಕಸುಬುದಾರರು ಹಾಗೂ ಸಾರ್ವಜನಿಕರಿಗೆ ತಲುಪಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ಒಟ್ಟಾರೆ ದೇಶದಲ್ಲಿ ವಂಶ ಪರಂಪಾರಿಕವಾಗಿ ಉಳಿಸಿಕೊಂಡಿರುವ ಮೂಲ ವೃತ್ತಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಸಹಕಾರಿ ಎಂದರು.

ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಮಹಿಳೆಯರು, ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ಪೂರ್ಣಗೊಳಿಸಲಾಗುವುದು. ವಿವಿಧೆಡೆಯಿಂದ ಆಗಮಿಸುವ ಫಲಾನು ಭವಿಗಳಿಗೆ ವಾಸ್ತವ್ಯಕ್ಕೆ ಅನುಕೂಲಕ್ಕೆ ಸಕಲ ಸೌಕರ್ಯ ಪೂರೈಸಲಾಗುವುದು ಎಂದರು.ಎಂಎಸ್‌ಎಂಇ ಸಹಾಯಕ ಅಧೀಕ್ಷಕ ನಾಗರಾಜ್ ಮಾತನಾಡಿ, ಮಳಿಗೆ ಕಾಯ್ದಿರಿಸಲು ಹಾಗೂ ಹೆಚ್ಚಿನ ಮಾಹಿತಿಗೆ 8088696627,7337685577 ಸಂಖ್ಯೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ವೇಳೆ ವಿಶ್ವಕರ್ಮ ಯೋಜನಾ ಸಮಿತಿ ಸದಸ್ಯರಾದ ರವೀಂದ್ರ ಬೆಳವಾಡಿ, ಸಂತೋಷ್ ಕೋಟ್ಯಾನ್, ವಿಶ್ವಕರ್ಮ ಜಿಲ್ಲಾ ಸಂಯೋಜಕ ಸಿ.ಎಸ್.ರಾಕೇಶ್ ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.