ಸಾರಾಂಶ
ಗಂಗಾವತಿ: ಕೇಂದ್ರ ಸರ್ಕಾರದ ವಿವಿಧ ಮಹಾತ್ವಾಕಾಂಕ್ಷಿ ಯೋಜನೆಗಳು ಜನಪರ ಕಾರ್ಯವಾಗಿವೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ನಗರದ ಜಗಜೀವನ್ ರಾಮ್ ವೃತ್ತದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾಗಿರುವ ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಸುಕನ್ಯ ಯೋಜನೆ, ಜನಧನ್ ಯೋಜನೆ, ಜೀವನ್ ಭೀಮಾ ಯೋಜನೆ, ಗಂಗಾವತಿಯಲ್ಲಿ ಕೇಂದ್ರೀಯ ವಿದ್ಯಾಲಯ, ರೈಲ್ವೆ, ಆರೋಗ್ಯ ಸಂಜೀವಿನಿ, ಬೀದಿಬದಿ ವ್ಯಾಪಾರಸ್ಥರಿಗೆ ₹10 ಸಾವಿರ ಧನಸಹಾಯ ಮತ್ತು ಅಮೃತ ಸಿಟಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಜನಪರ ಕಾರ್ಯವಾಗಿವೆ ಎಂದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಮತ್ತು ರಕ್ಷಣೆಯಲ್ಲಿ ಅವರ ಪಾತ್ರ ಮಹತ್ವವಾಗಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನಗರಕ್ಕೆ ರೈಲ್ವೆ ಯೋಜನೆ, ಅಮೃತ ಸಿಟಿ ಮತ್ತು ಕೇಂದ್ರೀಯ ವಿದ್ಯಾಲಯ, ಕೇಂದ್ರ ಸರಕಾರದಿಂದ ಮಂಜೂರಿಯಾಗಿವೆ. ತಮ್ಮ ಅಧಿಕಾರಾವಧಿಯಲ್ಲಿ ಸಂಸದರು ಮುತುವರ್ಜಿ ವಹಿಸಿದ್ದರಿಂದ ಯೋಜನೆಗಳು ಜಾರಿಯಾಗಿವೆ ಎಂದರು.ಈ ಸಂದರ್ಭದಲ್ಲಿ ನಬಾರ್ಡ್ ಡಿಡಿಂ ಮಹಾದೇವ ಕೀರ್ತಿ, ವಿರೇಂದ್ರ ಕುಮಾರ, ಮಹಾಂತಗೌಡ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ವಿರೂಪಾಕ್ಷಪ್ಪ ಸಿಂಗನಾಳ ಜಿ.ಶ್ರೀಧರ, ಹೊಸಮಲಿ ಮಲ್ಲೇಶಪ್ಪ, ಡಾ.ಗೌರಿಶಂಕರ, ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ತಿಪ್ಪೇರುದ್ರಾಸ್ವಾಮಿ, ಎಚ್.ಎಂ. ಸಿದ್ದರಾಮಸ್ವಾಮಿ, ರಾಘವೇಂದ್ರ ಶೆಟ್ಟಿ ಇದ್ದರು.